ಮನೆ ಮನೆ ಮದ್ದು ಬೆಳ್ಳುಳ್ಳಿ

ಬೆಳ್ಳುಳ್ಳಿ

0

ಶುಂಠಿಯಂತೆಯೇ ಬೆಳ್ಳುಳ್ಳಿಗೆ ಅಡುಗೆ ಮತ್ತು ಔಷಧದ ಸಾರ್ವತ್ರಿಕ ಬಳಕೆ ಇದೆ. ಹಾಗಾಗಿ ಮಹೌಷಧವೆಂಬ ಹೆಸರಿದೆ. ಈರುಳ್ಳಿಯಂತೆ ಸಪೂರ ದುಂಡು ಎಲೆ. ಒಂದಡಿ ಎತ್ತರ ಬೆಳೆಯುವ ಸಸ್ಯ. ನೆಲದಡಿಯ ಗಡ್ಡೆಯ ಒಂದೆರಡು ಬೆಳೆಯಿಂದ ಹೊಸ ಸಸಿ ಲಭ್ಯ. ಬೆಳ್ಳುಳ್ಳಿ ಕೃಷಿ ರಾಜ್ಯದ ಉತ್ತರ ಭಾಗದಲ್ಲಿದೆ. ಗಡ್ಡೆಯಂತೂ ಎಲ್ಲಾ ಕಡೆ ಬಿಕರಿಗೊಳ್ಳುವ ಸಾಂಬಾರ ವಸ್ತು. ದುಂಡಾಣು ವಿರೋಧಿ ಹಲವು ರಾಸಾಯನಿಕ ತತ್ವಗಳು ಬೆಳ್ಳುಳ್ಳಿಯಲ್ಲಿವೆ. ರಷ್ಯಾದಲ್ಲಿ ಪೆನಿಸಿಲಿನ್ ಎಂಬ ಉಪ ಹೆಸರು ಸಹ ಬೆಳ್ಳುಳ್ಳಿಯ ಕೆಲವು ಸತ್ವಗಳಿದೆ.
ಉಗ್ರಗಂಧವಿರುವುದರಿಂದ ಬೆಳ್ಳುಳ್ಳಿ ಜಜ್ಜಿ ಹಾಲಿಗೆ ಹಾಕಿ ಕುದಿಸಿ ಕುಡಿಸಬಹುದು. ಮೂಲವ್ಯಾಧಿ, ದೌರ್ಬಲ್ಯ, ಜ್ವರ, ಶಾಸ್ತ್ರಕಟ್ಟು, ಕಫ ತೊಂದರೆ, ಅಜೀರ್ಣ ಪರಿಹಾರಕ್ಕೆ ಬೆಳ್ಳಿ ಬೆಳ್ಳುಳ್ಳಿಯಿಂದ ಸಿದ್ಧ ಮಾಡಿರುವ ಹಾಲು ಕಷಾಯ ಒಳ್ಳೆಯದು, ಜಂತು ಭಾದೆಗೆ ಸಹ ಉತ್ತಮ ಪರಿಹಾರ.

Join Our Whatsapp Group

ಔಷಧೀಯ ಗುಣಗಳು :-

  • ಎಲ್ಲಾ ಬಗೆಯ ಕೀಲು ನೋವು, ಸಂದು ನೋವು, ವಾತ ರೋಗಗಳಲ್ಲಿ ಬೆಳ್ಳುಳ್ಳಿ ಹಾಲು ಕಷಾಯ ಸೇವಿಸಬಹುದು. ಬೆಳ್ಳುಳ್ಳಿ ಜಜ್ಜಿದ್ದು ಎಣ್ಣೆ ಜೊತೆಗೆ ಹಾಕಿ ಕಾಯಿಸಿ ಎಣ್ಣೆ ಹಚ್ಚಬಹುದು.
  • ಬೆಳ್ಳುಳ್ಳಿ ಜಜ್ಜಿ ಕಾಯಿಸಿದ ಎಳ್ಳೆಣ್ಣೆಯನ್ನು ಒಂದೆರಡು ತೊಟ್ಟು ಹಾಕಿದರೆ ಕಿವು ನೋವು ಮಾಯವಾಗುತ್ತದೆ.
  • ಮುಟ್ಟು ತೊಂದರೆ, ತಡವಾಗುವುದು, ಮುಟ್ಟಿನ ಕಾಲದ ನೋವು ಪರಿಹರಿಸುವಲ್ಲಿ ಬೆಳ್ಳುಳ್ಳಿ ಉಪಕಾರಿ. ಕಾಲು ಕಷಾಯ ಕುಡಿಸುವುದರಿಂದ ತೊಂದರೆಗಳು ಉಪಶಮನ.
  • ಬೆಳ್ಳುಳ್ಳಿಯ ಉಗ್ರಗಂಧ ನಿವಾರಿಸಲು ತುಪ್ಪದಲ್ಲಿ ಹುರಿದು ಕೊಳ್ಳಬಹುದು. ಆನಂತರ ಮಜ್ಜಿಗೆ ಜೊತೆಗೆ ಸೇವಿಸಬಹುದು.
  • ರಾತ್ರಿ 3-4 ಬೆಳ್ಳುಳ್ಳಿ ಬೆಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಮುಂಜಾನೆ ಕುಡಿದರೆ ಜೀರ್ಣ ಸರಾಗವಾಗುತ್ತದೆ.