ಮನೆ ಯೋಗಾಸನ ಅರ್ಧ ಚಂದ್ರಾಸನ

ಅರ್ಧ ಚಂದ್ರಾಸನ

0

ʼಅರ್ಧʼ ಎಂದರೆ ಸಮಾಂಶ; ಚಂದ್ರನೆಂದರೆ ಬೆಳದಿಂಗಳನ್ನು ಕೊಡುವವ. ಅಂದರೆ ಅರ್ಧಚಂದ್ರವೆಂಬುದು ಚಂದ್ರನ ಅರ್ಧ ಭಾಗವೆಂದು ಸೂಚಿಸಲಾಗುತ್ತದೆ.

ಅಭ್ಯಾಸ ಕ್ರಮ :-

೧. ಮೊದಲು ತಡಾಸನದಲ್ಲಿ ನಿಲ್ಲಬೇಕು. ಅನಂತರ  ಅಭ್ಯಾಸಕ್ರಮವನ್ನನುಸರಿಸಿ ತ್ರಿಕೋಣಾಸನದಲ್ಲಿ ನಿಲ್ಲಬೇಕು.

೨. ಈ ತ್ರಿಕೋಣಾಸನವನ್ನು ಮೊದಲು ಬಲಗಡೆಗೆ ಅಭ್ಯಾಸಿಸಿದ ಮೇಲೆ, ಉಸಿರನ್ನು ದೇಹದಿಂದ ಹೊರಕ್ಕೆ ಬಿಟ್ಟು ಬಲಮಂಡಿಯನ್ನು ಬಗ್ಗಿಸಿ, ಬಲದಂಗೈಯನ್ನು ಬಲಪಾದದಿಂದ ಸುಮಾರು ಒಂದೆಡಿ ದೂರದಲ್ಲಿ ನೆಲದಮೇಲೆ ಒತ್ತಿಟ್ಟು ಒಡನೆಯೇ ಎಡಪಾದವನ್ನು ಸಮೀಪಕ್ಕೆ ತಂದಿರಿಸಬೇಕು.

೩. ಈ ಭಂಗಿಯಲ್ಲಿ ಎರಡು ಬಾರಿ ಉಸಿರು ಬಿಟ್ಟು ಒಳಕ್ಕೆಳೆಯುವವರೆಗೂ ನಿಂತು, ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಎಡಗಾಲನ್ನು ನೆಲದಿಂದ ಮೇಲೆತ್ತಿ ಕಾಳ್ ಬೆರಳು ಮೇಲ್ಮುಖ ವಾಗುವಂತೆ ನೀಳ ಮಾಡಿಡಬೇಕು. ಇದಾದ ಮೇಲೆ ಬಲಗೈ ಮತ್ತು ಬಲಗಾಲು ಇವೆರಡನ್ನು ನೀಡಲವಾಗಿ ಚಾಚಬೇಕು.

೪. ಈಗ ಎಡದಂಗೈಯನ್ನು ಎಡಟೊಂಕದ ಮೇಲೆ ಸೆಳೆದಿರಿಸಿ, ಭುಜಗಳನ್ನ ಮೇಲಕ್ಕೆಬ್ಬಿಸಬೇಕು. ಬಳಿಕ ಎದೆಯನ್ನು ಎಡಗಡೆಗೆ ತಿರುಗಿಸಿ ಎಲ್ಲರನ್ನೂ ಸಮತೋಲನದಲ್ಲಿಸಬೇಕು.

೫.  ಶರೀರದ ಭಾರವೆಲ್ಲವನ್ನೂ ಬಲಹೆಜ್ಜೆ ಮತ್ತು ಬಲದ ಟೊಂಕ, ಇವುಗಳಿಗೆ ಅಳವಡಿಸಬೇಕು. ಬಲಗೈ, ಸಮತೋಲನವನ್ನು ಹಿಡಿತದಲ್ಲಿಡಲು ಆಧಾರ ಮಾತ್ರ.

೬. ಈ ಭಂಗಿಯಲ್ಲಿ ಸುಮಾರು 20-30 ಸೆಕೆಂಡುಗಳ ಕಾಲ ನಿಂತು, ಆಗ ಶ್ವಾಸೋಚ್ಚಾಸಗಳನ್ನ ನೀಳವಾಗಿಯೋ ಮತ್ತು ಸಮವಾಗಿಯೂ ನಡೆಸಬೇಕು. ಆನಂತರ ಎಡಗಾಲನ್ನು ನೆಲಕ್ಕೆ ಇಳಿಬಿಟ್ಟು ಮತ್ತೆ ʼತ್ರಿಕೋಣಾʼಸಕ್ಕೆ ಹಿಂದಿರುಗಬೇಕು.

೭. ಈ ಭಂಗಿಗಳ ಅಭ್ಯಾಸವನ್ನು ಎಡಗಡೆಗೂ ಮಾಡಬೇಕು.

ಪರಿಣಾಮಗಳು :-

ಕಾಲುಗಳು ಊನವಾಗಿ ಇಲ್ಲವೇ ಸೋಂಕು ಜಾಡ್ಯಕ್ಕೆ ಈಡಾಗಿದ್ದರೆ, ಈ ಆಸನಭ್ಯಾಸವು ಅವನ್ನ ಗುಣಪಡಿಸುತ್ತದೆ. ಅಲ್ಲದೇ ಇದು ಬೆನ್ನುಮೂಳೆಯ ಕೆಳಭಾಗಗಳಿಗೂ, ಕಾಲಿನ ಮಾಂಸಖಂಡಗಳಿಗೂ ಸಂಬಂಧಿಸಿದ ನರಗಳಿಗೂ ಹುರುಪು ಕೊಡುತ್ತದೆ. ಮತ್ತು ಮಂಡಿಗಳಿಗೆ ಬಲವನ್ನು ಹೆಚ್ಚಿಸುತ್ತದೆ. ಇತರ ನಿಲವ ಭಂಗಿಗಳಂತೆ ಈ ಆಸನವು ಜಠರ ತೊಂದರೆಗಳನ್ನು ಹೋಗಲಾಡಿಸುತ್ತದೆ.

ಸೂಚನೆ :-

ನಿಲುವಿನ ಆಸನಭಂಗಿಗಳ ಅಭ್ಯಾಸದಲ್ಲಿ ಆಯಾಸಗೊಂಡು ಬಲಹೀನತೆಯನ್ನು ಅನುಭವಿಸುವವರು, ʼಉತ್ಥಿತ ತ್ರಿಕೋಣಾಸನʼವನ್ನು ಮತ್ತು ಉತ್ಥಿತ ಪಾರ್ಶ್ವಾಕೋಣಾಸವನ್ನೂ ಮಾತ್ರ ಅಭ್ಯಾಸಿಸಬೇಕು. ಏಕೆಂದರೆ ಈ ಎರಡು ಆಸನಗಳು ದೇಹವನ್ನು ಬಲಗೊಳಿಸುತ್ತದೆ. ಉಳಿದ ನಿಂತು ಮಾಡುವ ಆಸನ ಭಂಗಿಗಳ ಅಭ್ಯಾಸಗಳನ್ನು ದೇಹ ಶಕ್ತಿಯನ್ನು ಚೆನ್ನಾಗಿ ಗಳಿಸಿದವರು ಮತ್ತು ದೇಹದಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೊಂದಿರುವವರು ಮಾತ್ರ ಅಭ್ಯಾಸಿಸಬೇಕು.