ಮನೆ ರಾಜ್ಯ ಪಿಎಸ್‌ಐ ಮರು ಪರೀಕ್ಷೆಗೆ ಸರ್ಕಾರ ನಿರ್ಧಾರ: ವಿರೋಧ ವ್ಯಕ್ತಪಡಿಸಿದ ಪ್ರಿಯಾಂಕ್‌ ಖರ್ಗೆ

ಪಿಎಸ್‌ಐ ಮರು ಪರೀಕ್ಷೆಗೆ ಸರ್ಕಾರ ನಿರ್ಧಾರ: ವಿರೋಧ ವ್ಯಕ್ತಪಡಿಸಿದ ಪ್ರಿಯಾಂಕ್‌ ಖರ್ಗೆ

0

ಕಲಬುರಗಿ (Kallaburgi)-ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ (Psi recruitment scam) ಅಕ್ರಮ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವೇ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಇದಕ್ಕೆ ಮಾಜಿ ಸಚಿವ ಪ್ರಿಯಾಂಕ್‌ (Priyank kharge) ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ತನಿಖೆ ನಡೆಯಲಿ. ತನಿಖೆ ನಡೆಯಲಿ ತನಿಖೆಗೂ ಮುನ್ನವೇ ಮರು ಪರೀಕ್ಷೆ ಘೋಷಿಸುವುದು ಸರಿಯಲ್ಲ ಎಂದಿದ್ದಾರೆ.

ಪಿಎಸ್ಐ ಅಕ್ರಮ ನಡೆದಿರುವುದು ಕಲಬುರಗಿಯಲ್ಲಿ ಅಷ್ಟೇ ಅಲ್ಲ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಲ್ಲೂ ಸಹ ಅಕ್ರಮ ನಡೆದಿದೆ. ಈ ಬಗ್ಗೆ ಸಿಐಡಿ ಅವರಿಗೂ ಮಾಹಿತಿ ಇದೆ. ಇದೇ ವಿಚಾರವಾಗಿ ಅಭ್ಯರ್ಥಿಗಳು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ನೂರಾರು ಜನ ಇರಬಹುದು. ಹೀಗಾಗಿ ತನಿಖೆ ಪೂರ್ಣಗೊಂಡ ಬಳಿಕ ಮರು ಪರೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಹೇಳಿದರು.

ಪಿಎಸ್‌ಐ ನೇಮಕಾತಿ ರದ್ದುಗೊಳಿಸಿರುವುದಕ್ಕೆ ಸ್ವಾಗತ. ಆದರೆ, ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದೆ, ಇದರಲ್ಲಿ ಸ್ಪಷ್ಟತೆ ಇಲ್ಲ. ಮರು ಪರೀಕ್ಷೆ ಅಂದ್ರೆ ಯಾವ ವಿಚಾರದಲ್ಲಿ. ಲಿಖಿತ ಪರೀಕ್ಷೆಯಾ ಅಥವ ದೈಹಿಕ ಪರೀಕ್ಷೆನಾ? ತನಿಖೆ ಇನ್ನು ಮುಗಿದಿಲ್ಲ, ಒಎಂಆರ್ ತಿದ್ದುಪಡಿಯಿಂದ ಬ್ಲೂ ಟೂತ್‌ವರೆಗೆ ಪ್ರಕರಣ ಬಂದು ನಿಂತಿದೆ‌ ಎಂದರು.

ದೈಹಿಕ ಪರೀಕ್ಷೆಯಲ್ಲಿ ಕೂಡ ಅಕ್ರಮದಿಂದ ನೇಮಕಾತಿ ಪಟ್ಟಿಯಲ್ಲಿ ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ಬೆಳಗಾವಿಯಲ್ಲಿ ಇಬ್ಬರು ಮೂವರು ವಿದ್ಯಾರ್ಥಿಗಳು ವಿಗ್ ಹಾಕಿ ಕೊಂಡು ಬದಿರೋ ಮಾಹಿತಿ ಸರ್ಕಾರದ ಬಳಿ ಇದೆ. ಲಿಖಿತ, ದೈಹಿಕ ಪರೀಕ್ಷೆ ಕೂಡ ಮರು ಮಾಡ್ತಾರಾ ಎನ್ನುವುದನ್ನು ಸ್ಪಷ್ಟ ಪಡಿಸಬೇಕು ಎಂದು ಹೇಳಿದರು.

ಕೆಲ ಯುವಕರು ಕೋರ್ಟ್ ಮೊರೆ ಹೋಗೊದಾಗಿ ಹೇಳಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಸಮಯ ವ್ಯರ್ಥ ಆಗಿರಬಹುದು. ಏಜ್ ಮುಗಿಯಬಹುದು. ಇವತ್ತು ದಿವ್ಯಾ ಹಾಗರಗಿ ಬಂಧನ ನಂತರ ಮರು ಪರೀಕ್ಷೆ ಘೋಷಣೆ ಮಾಡಿದ್ದಾರೆ. ಇದು ಕಲಬುರಗಿಯಲ್ಲಿ ದಾಖಲಾದ ಎಫ್‌ಐಆರ್‌ ಬಗ್ಗೆ ಗೃಹ ಮಂತ್ರಿಗಳು ಮಾತಾಡ್ತಿದ್ದಾರೆ. ಬೇರೆ ಬೇರೆ ಕಡೆ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕಿದೆ. ದೈಹಿಕ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಗೃಹ ಸಚಿವರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ನೋಂದಿರುವ 57 ಸಾವಿರ ಯುವಕರಿಗೆ ಉತ್ತರ ಕೊಟ್ಟು ಗೊಂದಲ ತಿಳಿಗೊಳಿಸಬೇಕು ಎಂದಿದ್ದಾರೆ.

ದಿವ್ಯಾ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆ ಏನಲ್ಲ. ದಿವ್ಯಾ ಬಂಧನದ ನಂತರ ಸರ್ಕಾರದವರು ಅವರ ಬೆನ್ನು ಅವರು ಚಪ್ಪರಿಸಿಕೊಳ್ತಿದ್ದಾರೆ. ಸಂಪೂರ್ಣ ತನಿಖೆ ಯಾವ ದಿಕ್ಕಿನಲ್ಲಿ ಹೋಗಿದೆ ಎಂದು ಗೃಹ ಸಚಿವರಿಗೆ ಅರಿವಿಲ್ಲ ಎನಿಸುತ್ತಿದೆ. ಆರ್‌ಡಿ ಪಾಟೀಲ್, ದಿವ್ಯಾ ಹಾಗರಗಿ ಬಂಧನ ಇದು ತನಿಖೆ ಹಂತದ ಪ್ರಥಮ ಪ್ರಯತ್ನ. ಹಣ ವರ್ಗಾವಣೆ ಬಗ್ಗೆ ಮಾಹಿತಿ ಎಲ್ಲಿದೆ ಎಂದು ಪ್ರಶ್ನಿಸಿದರು.

ವಿಚಾರಣೆಗೆ ಹಾಜರಾಗುವುದಿಲ್ಲ

ನಮ್ಮ ರಾಜ್ಯದಲ್ಲಿ 10 ಲಕ್ಷ ಜನ ಕೆಪಿಎಸ್ ಸಿ ಪರೀಕ್ಷೆ ಬರೆದಿದ್ದಾರೆ, ಇದರಲ್ಲಿ ಎಷ್ಟು ಜನ ಅಕ್ರಮ ಮಾಡಿದ್ದಾರೆ? ಈ ಬಗ್ಗೆ ಹೆಚ್ಚಿನ ಪ್ರಶ್ನೆ ಕೇಳಿದ್ರೆ ನನಗೆ ಮತ್ತೊಂದು ನೋಟಿಸ್ ಕಳಿಸ್ತಾರೆ ಎಂದು ವ್ಯಂಗ್ಯವಾಡಿದ ಪ್ರೀಯಾಂಕ್ ಖರ್ಗೆ ಅವರು, ಕಾನೂನಿನಲ್ಲಿ ನಾನು ವಿಚಾರಣೆಗೆ ಹಾಜರಾಗಬೇಕು ಅನ್ನೋದು ಇಲ್ಲವೆ ಇಲ್ಲ, ನಾನ್ಯಾಕೆ ಹಾಜರಾಗಬೇಕು? ನೋಟಿಸ್ ಗೆ ಉತ್ತರ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.