ಕ್ಷೇತ್ರ – ಕನ್ಯಾ ರಾಶಿಯಲ್ಲಿ 10 ಡಿಗ್ರಿಯಿಂದ 6 ಡಿಗ್ರಿ 40 ಕಲೆ. ರಾಶಿಸ್ವಾಮಿ – ಬುಧ, ನಕ್ಷತ್ರಸ್ವಾಮಿ – ಮಂಗಳ, ನಾಡಿ – ಮಧ್ಯ, ಯೋನಿ – ರಾಕ್ಷಸ, ನಾಮಾಕ್ಷರ – ಪೆ, ಪೊ. ಶರೀರಭಾಗ – ಹೊಟ್ಟೆಯ ಕೆಳಭಾಗ ಸೊಂಟ.
ರೋಗಗಳು – ಅಲ್ಸರ್, ಕಾಲಾರಾ, ಪಿತ್ತಪ್ರಕೃತಿ, ಗರ್ಮಿ, ಹೆಚ್ಚು ನಗುವುದು, ಹೊಟ್ಟೆಯಲ್ಲಿ ಹುಳಭಾದೆ, ತುರಿಸುವಿಕೆ, ಕಾಲುನೋವು, ಗಾಯ, ಕ್ರೂರತೆ.
ಸಂರಚನೆ – ಹಾಸ್ಯಪ್ರಿಯರು, ದಕ್ಷಪ್ರಯೋಗವಾದಿ, ವ್ಯವಹಾರಿಕ ವ್ಯಾಪಾರಿ, ಸಾಹಸಿ, ಶಕ್ತಿಶಾಲಿ, ಉದ್ಯಮಿ, ಚುರುಕುತನವಿರುವ ವಿಚಾರಶೀಲ, ಖರ್ಚು ಮಾಡುವವನು, ವೈಭವ ಪ್ರದರ್ಶಕ, ಕೆಂಪುಬಣ್ಣ ಪ್ರಿಯ, ಮಾತುಗಾರ, ಹಣ್ಣು, ಹೂವು, ಪ್ರಿಯಾ ಭವ್ಯ ಶರೀರ ಉಳ್ಳವನಾಗಬಹುದಾಗಿದೆ.
ಉದ್ಯೋಗ, ವಿಶೇಷಗಳು – ಕಣ್ಣುಗಳು ಆಕರ್ಷಕವಾಗಿದ್ದು, ಇಂಜಿನಿಯರ, ಪ್ರಕಾಶಕ, ಮನೆ ನಿರ್ಮಾಣಕಾರ, ಕಾರ್ಮಿಕ, ದಲಾಲ, ಜೈಲು ನಿರೀಕ್ಷಕ, ವಕೀಲ, ಟೆನ್ನಿಸ್ ಆಟಗಾರ, ಹಣಕಾಸಿನ ಇಲಾಖೆಯಲ್ಲಿ ಕಾರ್ಯ ಮಾಡುವವ, ಹೃದಯ ವೈದ್ಯ, ಶಸ್ತ್ರಚಿಕಿತ್ಸಕ, ಸುಗಂಧದ ದ್ರವ್ಯ ವ್ಯಾಪಾರಿ, ರಕ್ಷಕ, ಗಣಿತ ತಜ್ಞ, ನೇಕಾರ, ಗಣಕಯಂತ್ರ, ವಿದ್ಯುತ್ ಉಪಯೋಗಿ ಸಮಾನು ತಯಾರಿಸುವವನಾಗಬಹುದು.
ಬುಧನ ರಾಶಿಯಲ್ಲಿ ಮಂಗಳನ ನಕ್ಷತ್ರದ ಈ ಅರ್ಧಭಾಗದಲ್ಲಿ ಹುಟ್ಟಿದವರು ಇಂದ್ರಿಯರೋಗ ಪೀಡಿತರು, ಕಣ್ಣುಬೇನೆ ಇರುವವರು, ನಾಯಕರು, ವಿದ್ಯಾವಂತರು, ಪ್ರಾಮಾಣಿಕರು, ಉತ್ತಮವಾದ ಆರ್ಥಿಕ ಸ್ಥಿತಿ ಹೊಂದಿರುವವನು, ಸತತ ಉದ್ಯೋಗಿಗಳು, ಪ್ರಯತ್ನಿಶೀಲರು ಆಗುವವರು. ಸೂರ್ಯನು ಈ ರಾಶಿಯಲ್ಲಿ ಆಶ್ವೀಜಮಾಸದಲ್ಲಿ ಕೊನೆಯಲ್ಲಿ 6 ದಿನವಿರುವನು. ಚಂದ್ರನು ನಕ್ಷತ್ರದ ಈ ಅರ್ಧ ಭಾಗದಲ್ಲಿ 6 ಗಂಟೆಯಿರುವನು.