ಮನೆ ಮನೆ ಮದ್ದು ಧನಿಯಾ (ಕೋತಂಬರಿ ಬೀಜ)

ಧನಿಯಾ (ಕೋತಂಬರಿ ಬೀಜ)

0

ಅಡುಗೆ ಮನೆ ಪ್ರಸಿದ್ಧ ಸಾಂಬಾರ ಪದಾರ್ಥ, ಧಾನ್ಯಕ ಎಂಬ ಅನ್ವರ್ಥ ಹೆಸರು. ಬಾಯಿ ರುಚಿ ಹೆಚ್ಚಿಸುವ ಮತ್ತು ಜೀರ್ಣಶಕ್ತಿ ವರ್ಧಕ ಸಿದ್ದೌಷದ. ಇಡೀ ಭಾರತದಲ್ಲಿ ಕೃಷಿಗೊಳ್ಳುವ ಸಾಂಬಾರ, ಹಸಿ ಸಸಿ ಮತ್ತು ಒಣ ಬೀಜಕ್ಕೆ ಮದ್ದಿನ ಆಹಾರ ಗುಣಕರ್ಮಗಳಿವೆ. ಬೀಜದಲ್ಲಿ ತೈಲಾಂಶವಿದೆ.

ಟ್ಯಾನಿನ್, ಮ್ಯಾಲಿಕ್, ಆಮ್ಲ, ಸ್ಥಿರ ತೈಲಗಳಿವೆ. ಬಾಯಾರಿಕೆ, ಎದೆ ಉರಿ, ವಾಂತಿ, ಕೆಮ್ಮು, ದಮ್ಮು, ದೌರ್ಬಲ್ಯ, ಕ್ರಿಮಿರೋಗಕ್ಕೆ ಮದ್ದು, ಹಸಿ ಕೊತ್ತಂಬರಿಯಲ್ಲಿ ಹೆಚ್ಚು ಪಿತ್ತವನ್ನು ನಾಶ ಮಾಡುವ ಗುಣವಿದೆ.
ಕೊತ್ತಂಬರಿ ಬೀಜದ ಬಳಕೆ ಸಸ್ಯಹಾರಿ, ಮಾಂಸಾಹಾರಿ, ತರಕಾರಿ ಇನ್ನಿತರ ಖಾದ್ಯ ಪದಾರ್ಥಗಳಿಗೆ ಮತ್ತು ಮಸಾಲೆಗಳಲ್ಲಿ ಹೇರಳವಾಗಿ ಬಳಸುತ್ತಾರೆ. ಏಕೆಂದರೆ, ಬಳಸಲಾಗುವ ಮೆಣಸಿನಕಾಯಿ, ಬೆಳ್ಳುಳ್ಳಿ, ಅರಿಶಿನ, ಉಪ್ಪು, ಎಣ್ಣೆ, ಎಲ್ಲವೂ ಉಷ್ಣಪದಾರ್ಥಗಳಾಗಿವೆ.
ಇದರ ಬೇಸಾಯ ಎಲ್ಲಾ ಪ್ರದೇಶಗಳಲ್ಲಿ ಮಾಡುತ್ತಾರೆ. ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಲಮಾನದಲ್ಲಿ ಇದರ ಬೇಸಾಯ ಮಾಡುತ್ತಾರೆ. ಯುರೋಪಿನ ಕೊತ್ತಂಬರಿ ಬಹಳ ಸ್ವಾಧವಿರುತ್ತದೆ. ಆಫ್ರಿಕಾದ ಕೊತಂಬರಿ ದೊಡ್ಡದಾಗಿರುತ್ತದೆ. ಭಾರತದ ಕೊತಂಬರಿಯಲ್ಲಿ ತೈಲಾಂಶ ಕಡಿಮೆಇರುತ್ತದೆ. ಇದರ ಚೂರ್ಣ ಮಾಡಲು ಬೀಜವನ್ನು ಕುಟ್ಟಿ ಬೇಕಾದ ಹಾಗೆ ಸಣ್ಣಗೆ-ದಪ್ಪ ಜರಡಿಯಿಂದ ಸೋಸಬೇಕು. ಬಟ್ಟೆಯಿಂದ ಮಾತ್ರ ಸೋಸಕೂಡದು. ಇದರಿಂದ ಇದರಲ್ಲಿರುವ ತೈಲಾಂಶ ಬಟ್ಟೆಯಲ್ಲಿಯೇ ಇಂಗುತ್ತದೆ. ಇದರಿಂದ ಶಕ್ತಿ ಕುಂದುತ್ತದೆ. ಇದರಲ್ಲಿ ಶ್ರೇಷ್ಠ ಪ್ರಮಾಣದ ಪರಿಮಳ ಕಂಡು ಬಂದಿದೆ. ಕೊತ್ತಂಬರಿ 5 ಪ್ರಕಾರದ ಅಂಗಗಳು ಬೇರೆ ಬೇರೆ ಕಾರ್ಯಗಳಿಗೆ ಉಪಯೋಗಿಸುತ್ತಾರೆ.
ಔಷಧೀಯ ಗುಣಗಳು :-

  • ಮೂತ್ರ ಉರಿ – ಮೂತ್ರ ಉರಿತ ಇದ್ದರೆ ಕೊತ್ತಂಬರಿ ಬೀಜ ೬ ಗ್ರಾಂ ನೀರಿನಲ್ಲಿ ಅರೆದು ಸೋಸಿ ಕಲ್ಲು ಸಕ್ಕರೆ, ಆಡಿನ ಹಾಲು ಬೆರೆಸಿ ಕುಡಿಯಬೇಕು. ಈ ರೀತಿ ದಿನಕ್ಕೆ ಎರಡು ಸಲ 2-3 ದಿನಗಳವರೆಗೆ ಸೇವಿಸಿದರೆ ಮೂತ್ರ ಉರಿ ಕಡಿಮೆಯಾಗುತ್ತದೆ.
  • ರಕ್ತ ಸ್ರಾವ – 40 ಗ್ರಾಂ ಕೊತ್ತಂಬರಿ ಬೀಜಚೂರ್ಣಮಾಡಿ 200 ಮಿ.ಲಿ. ನೀರಿನಲ್ಲಿ ರಾತ್ರಿ ನೆನೆಹಾಕಿ ಮುಂಜಾನೆ ಸೋಸಿ ಕುಡಿಯುವುದರಿಂದ ಮೂತ್ರ ಮಾರ್ಗ, ಗುದಮಾರ್ಗ, ಮೂಗಿನಿಂದಾಗುವ ರಕ್ತಸ್ರಾವ ತಡೆಯುತ್ತದೆ.
  • ಬಾಯಿ ನಾಲಿಗೆ ಹುಣ್ಣು – ಬಾಯಿ ನಾಲಿಗೆಯಲ್ಲಿ ಗುಳ್ಳೆಗಳಾಗಿದ್ದರೆ ಒಣ ಕೊತಂಬರಿಬೀಜ ನೀರಿನಲ್ಲಿ ಹಾಕಿ ಕುದಿಸಿ ತಣ್ಣಗಾದ ಮೇಲೆ ಸೋಸದೆ ಅದೇ ನೀರಿನಿಂದ ಎರಡು ಮೂರು ಸಲ, ಎರಡು ಮೂರು ದಿನ ಬಾಯಿ ಮುಕ್ಕಳಿಸಿದರೆ ಗುಳ್ಳೆಗಳು ನಿವಾರಣೆ ಆಗುತ್ತದೆ.
    ಹಾನಿಕಾರಕ ಅಂಶ :-
    ಇದರ ಅಧಿಕ ಸೇವನೆಯಿಂದ ವೀರ್ಯದ ಉತ್ಪತ್ತಿಯಲ್ಲಿ ಕಡಿಮೆಯಾಗುತ್ತದೆ. ಮರೆವು ಹೆಚ್ಚಿಸುತ್ತದೆ, ಕಾಮಶಕ್ತಿ ಕ್ಷೀಣಿಸುತ್ತದೆ. ಸ್ತ್ರೀಯರ ಮಾಸಿಕ ತಡೆಯುತ್ತದೆ ಮತ್ತು ಶ್ವಾಸಕೋಶದ ರೋಗಿಗಳಿಗೆ ಹಾನಿಯುಂಟುಮಾಡುತ್ತದೆ.