ಮನೆ ಅಪರಾಧ ಡ್ರೈವಿಂಗ್ ಸ್ಕೂಲ್’ನ ಸಾಜಿದ್ ಅಬ್ರಾರ್ ಅಲ್ವಿ ಮೇಲೆ  ಅಪರಿಚಿತರಿಂದ ಹಲ್ಲೆ: ಪಶ್ಚಿಮ ಆರ್ ಟಿಓ ಕಚೇರಿಯ...

ಡ್ರೈವಿಂಗ್ ಸ್ಕೂಲ್’ನ ಸಾಜಿದ್ ಅಬ್ರಾರ್ ಅಲ್ವಿ ಮೇಲೆ  ಅಪರಿಚಿತರಿಂದ ಹಲ್ಲೆ: ಪಶ್ಚಿಮ ಆರ್ ಟಿಓ ಕಚೇರಿಯ ಸಿಬ್ಬಂದಿಗಳ ಮೇಲೆ ಆರೋಪ

0

ಮೈಸೂರು: ಇಂಡಿಯನ್ ಡ್ರೈವಿಂಗ್ ಸ್ಕೂಲ್’ನ ಸಾಜಿದ್ ಅಬ್ರಾರ್ ಅಲ್ವಿ ಮೇಲೆ ಅಪರಿಚಿತ ಯುವಕರಿಬ್ಬರು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮೈಸೂರಿನ ರಾಜೀವ್‌ ನಗರದ ರಿಂಗ್ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಮೈಸೂರಿನ ಕಲ್ಯಾಣಗಿರಿ ನಿವಾಸಿ ಸಾಜಿದ್ ಅಬ್ರಾರ್ ಅಲ್ವ (45) ಹಲ್ಲೆಗೆ ಒಳಗಾದವರಾಗಿದ್ದು, ರಾಜೀವ್‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ರಿಂಗ್ ರಸ್ತೆಯಲ್ಲಿರುವ ಆರ್‌ ಟಿಓ ಪೂರ್ವ ಕಚೇರಿಯಿಂದ ರಾಜೀವ್ ನಗರದ ಕಡೆ ಬರುವಾಗ ಕರುಣಾಕರ ಆಸ್ಪತ್ರೆಯ ಸಮೀಪದಲ್ಲಿರುವ ದೇವಸ್ಥಾನದ ಬಳಿ ಹಲ್ಲೆ ನಡೆಸಲಾಗಿದೆ. ಬೈಕ್‌ ನಲ್ಲಿ ಬಂದ ಯುವಕರಿಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇಂದು ‘ಸವಾಲ್ ಚಾನೆಲ್’ ನೊಂದಿಗೆ ಮಾತನಾಡಿದ, ಇಂಡಿಯನ್ ಡ್ರೈವಿಂಗ್ ಸ್ಕೂಲ್ ನ ಸಾಜಿದ್ ಅಬ್ರಾರ್ ಅಲ್ವಿಯವರು, ಕಳೆದ ಎರಡು ವರ್ಷಗಳ ಹಿಂದೆ ಆರ್ ಟಿಓ ಕಚೇರಿಯ ಅಕ್ರಮಗಳ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ದೂರನ್ನು ಆಧಾರವಾಗಿಟ್ಟು ಆರ್ ಟಿ ಓ ಇನ್ಸ್ ಪೆಕ್ಟರ್ ಹಾಗೂ ಅವರ ಸಂಗಡಿಗರನ್ನು ಬಂಧಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಆರ್ ಟಿಓ ಇಲಾಖೆ ಅವರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೇನೆ ಎಂದು ಹೇಳಿದರು.

ಮೊನ್ನೆ ಚಿಕ್ಕಪ್ಪ ಅವರ ಡಿಎಲ್ ಕಾರ್ಡ್ ಪ್ರಿಂಟ್ ಮಾಡಿಸುವ ಸಲುವಾಗಿ ನನ್ನ ತಮ್ಮನನ್ನು ಕಳುಹಿಸಿದ್ದೆ. ಅವನು ಅಲ್ಲಿ ಹೋದಾಗ ರೋಸ್ ಮಟ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ದೀಪು ಎಂಬ ವ್ಯಕ್ತಿ  ಇದು ನಿಷೇಧಿತ ಪ್ರದೇಶ. ನೀನು ಇಲ್ಲಿ ಬರಬೇಡ ಎಂದು ತಿಳಿಸಿದ್ದಾರೆ.

ಅದಕ್ಕೆ ಸದರಿ ಸ್ಥಳದಲ್ಲಿ ಬೇರೆ ಏಜೆಂಟರು ಹಾಗೂ ಡ್ರೈವಿಂಗ್ ಸ್ಕೂಲ್’ನ ಇತರ ಸಿಬ್ಬಂದಿಗಳು ಸೇರಿದಂತೆ ಅನಧಿಕೃತ ವ್ಯಕ್ತಿಗಳನ್ನು ದೀಪು ಎಂಬ ಗುತ್ತಿಗೆ  ನೌಕರ ಸೇರಿಸುತ್ತಿದ್ದರಿಂದ  ನನ್ನ ಸ್ವಂತ ಚಿಕ್ಕಪ್ಪನ ಕೆಲಸವಾದುದರಿಂದ ನಾನು ಸಲುಗೆ ಇಂದ ಅಲ್ಲಿಗೆ ಹೋಗಿದ್ದು, ಡಿಎಲ್ ನವೀಕರಣಗೊಂಡು 15 ದಿನ ಕಳೆದಿದೆ. ಅರ್ಜೆಂಟ್ ಇದೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೆ ದೀಪು ಎಂಬ ವ್ಯಕ್ತಿ, ನನ್ನ ತಮ್ಮನ್ನು ಅವಾಚ್ಯ ಶಬ್ದದಿಂದ ನಿಂದಿಸಿ, ನಿನ್ನ ಮೇಲೆ ಸುಳ್ಳು  ಕೇಸ್ ದಾಖಲಿಸುತ್ತೇನೆ.  ಹಾಗೂ ಕೈಕಾಲು ಮುರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕಾರಣವು ಸೇರಿದಂತೆ ಹಲವಾರು ದಿನಗಳಿಂದ ನಾವು ಪೂರ್ವ ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಧ್ವನಿ ಎತ್ತಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದುವರೆದು ದೀಪು ಅವರು ಹೇಳುವ ರೀತಿ,  ಆರ್ ಟಿ ಓ ಕಚೇರಿಯಲ್ಲಿ ಒಂದು ಕಾರ್ಡ್ ಗೆ 100 ರೂ. ಎಂಬಂತೆ ನಾವು ಹಣ ವಸೂಲಿ ಮಾಡಿ, ರೋಸ್ ಮಟ ಕಂಪನಿಯ ಮುಖ್ಯಸ್ಥ ಎನ್ನಲಾಗಿರುವ ನಾಗೇಶ್ ಎಂಬ ವ್ಯಕ್ತಿಗೆ ನೀಡಬೇಕು ಎಂದು ಹೇಳಿದರು. ಆದ್ದರಿಂದ ನಾಗೇಶ್ ಅವರಿಗೆ ನಾನು ಕರೆ ಮಾಡಿ, ಈ ಕುರಿತು ಮಾಹಿತಿ ನೀಡಿ, ನಿಮ್ಮ ಹುಡುಗರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರು ನೀಡಿದ್ದೆ.

ಇದಕ್ಕೆ ಕೋಪಗೊಂಡ ದೀಪು ಅವರು, ನಮ್ಮ ಹಿರಿಯ ಅಧಿಕಾರಿಗಳಿಗೆ ನನ್ನ ಮೇಲೆ ಕಂಪ್ಲೇಂಟ್ ಮಾಡುತ್ತೀಯಾ ?  ದೂರು ನೀಡುತ್ತೀಯಾ ? ನಿನ್ನುನ್ನು ಇಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ.  ನಿನ್ನ ಕಥೆ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದರು.

ದೀಪು ಅವರೊಂದಿಗೆ ಶಾಮೀಲಾಗಿರುವ ಗುತ್ತಿಗೆ ಆಧಾರದಲ್ಲಿ ಸದರಿ ಆರ್ ಟಿಓ ಕಚೇರಿಯಲ್ಲಿ ಟ್ರ್ಯಾಕ್ ಉಸ್ತುವಾರಿ ಹೊಂದಿರುವ ಕಾವ್ಯ ಮತ್ತು ಅವರ ಸಂಗಡಿಗರು ಸಹ ನನಗೆ ಕೊಲ್ಲುವ ಬೆದರಿಕೆ ಹಾಕಿದ್ದರು.

ಅಂತೆಯೇ ಬುಧವಾರ ನನ್ನ ಮೇಲೆ ಹಲ್ಲೆ ನಡೆಸಲಾಗಿರುತ್ತದೆ. ಪೂರ್ವ ಸಾರಿಗೆ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ದೀಪು, ಕಾವ್ಯ ಮತ್ತು ಟ್ರ್ಯಾಕ್ ನಲ್ಲಿ ಕೆಲಸ ಮಾಡುವ ಹುಡುಗರ ಪ್ರಚೋದನೆಯಿಂದ  ಸಮಾಜ ಘಾತುಕ ಶಕ್ತಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.

ಆದ್ದರಿಂದ ಪೊಲೀಸರು ಈ ಕುರಿತು ತನಿಖೆ ಮಾಡಿ ನಮಗೆ ನ್ಯಾಯ ಕೊಡಿಸಬೇಕು. ನನಗೆ ಆದ ರೀತಿ ಇನ್ಯಾರಿಗೂ ಆಗಬಾರದು ಎಂದು ಸಾಜಿದ್ ಅಬ್ರಾರ್ ಅಲ್ವ ಮನವಿ ಮಾಡಿದ್ದಾರೆ.