ಮನೆ ಜ್ಯೋತಿಷ್ಯ ಚಿತ್ತಾ – ಉತ್ತರಾರ್ಧ

ಚಿತ್ತಾ – ಉತ್ತರಾರ್ಧ

0

ಕ್ಷೇತ್ರ – ತುಲಾ ರಾಶಿಯಲ್ಲಿ 0 ಡಿಗ್ರಿಯಿಂದ 6 ಡಿಗ್ರಿ 40 ಕಲೆ. ರಾಶಿಸ್ವಾಮಿ – ಶುಕ್ರ, ನಕ್ಷತ್ರಸ್ವಾಮಿ – ಮಂಗಳ, ಯೋನಿ – ವ್ಯಾಘ್ರ, ನಾಡಿ – ಮಧ್ಯ, ಗಣ – ರಾಕ್ಷಸ, ನಾಮಾಕ್ಷರ – ಪೆ, ಪೊ, ಶರೀರಭಾಗ – ಕಿಡ್ನಿ,ಸೊಂಟ, ದೊಡ್ಡಕರುಳು, ಪೃಷ್ಟಪ್ರದೇಶ.

ರೋಗಗಳು – ಬಹುಮೂತ್ರ ರೋಗ, ಮೂತ್ರಾಂಗದಲ್ಲಿ ಉರಿ, ಕಿಡ್ನಿಯಲ್ಲಿ ನೋವು, ತಲೆನೋವು, ಕಾಮುಕತೆ, ಕಿಡ್ನಿಯಲ್ಲಿ ರಕ್ತಸ್ರಾವ, ಬೆವರು ಸಾಲೆ, ತಲೆಯಲ್ಲಿ ಬಿಸಿ, ಗುದದ್ವಾರದಲ್ಲಿ ಪೀಡೆ.

ಸಂರಚನೆ – ಮಹತ್ವಕಾಂಕ್ಷಿ, ಉಚ್ಚಾಭಿಲಾಷೆ, ಪ್ರೇರಕ, ಸಾಹಿಸಿ, ಶೃಂಗಾರ ಪ್ರಿಯ, ಊಹಾಪೋಹ ಸಮರ್ಥ, ಆದರ್ಶವಾದಿ, ಶಾಸ್ತ್ರಜ್ಞ, ಸಂಗೀತ ಪ್ರೇಮಿ, ಉತ್ತಮ ವ್ಯವಹಾರ ಕುಶಲನಾಗಬಹುದು.

ಉದ್ಯೋಗ ಮತ್ತು ವಿಶೇಷ – ವಕೀಲ, ಶಸ್ತ್ರಚಿಕಿತ್ಸಕ, ದಾರ್ಶನಿಕ ವ್ಯಾಪಾರಿ ನಾಯಕ, ಧಾರ್ಮಿಕ ಸೇನಾಧಿಕಾರಿ, ಶೃಂಗಾರ ಸಾಮಗ್ರಿ ವ್ಯಾಪಾರಿ, ಉತ್ಪಾದಕ ಭವನ ನಿರ್ಮಾಣಕಾರ, ದೂರದರ್ಶನ, ರೇಡಿಯೋ ಟೈಪರಿಕಾರ್ಡರ ಬಗ್ಗೆ ತಿಳಿದವ, ಪೆಟ್ರೋಲಿಯಂ ಪದಾರ್ಥ ವ್ಯಾಪಾರಿ, ವಾಹನಗಳ ಬಿಡಿ ಭಾಗಗಳ ವ್ಯಾಪಾರಿ, ಆಟಿಕೆಗಳ ವ್ಯಾಪಾರಿ, ನಕಾಶೆಗಾರ, ಚಿತ್ರಕಾರ ಸಹ ಆಗಬಹುದಾಗಿದೆ. ಚಿತ್ತಾ ನಕ್ಷತ್ರದ ಉತ್ತರಾರ್ಧದಲ್ಲಿ ಹುಟ್ಟಿದವರು ಕೋಮಲ ಮತ್ತು ಖಠೋರರು ಆಗುವವರು, ರೋಗಗ್ರಸ್ತರು ಆಗಬಹುದು, ಸ್ತ್ರೀಯರು ಕಾಲಕಾರರಾಗಬಹುದು. ಸೂರ್ಯನು ಈ ನಕ್ಷತ್ರ ಭಾಗದಲ್ಲಿ ಕಾರ್ತಿಕ ಮಾಸದಲ್ಲಿ ಏಳು ದಿನವಿರುವುದು, ಚಂದ್ರನು ಕೇವಲ 12 ಗಂಟೆ ಇರುವನು.