ಮನೆ ಹವಮಾನ ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಹಲವೆಡೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ

ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಹಲವೆಡೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ

0

ಬೆಂಗಳೂರು: ಮುಂದಿನ ಎರಡು ದಿನ ಹಾಸನ, ಕೊಡಗು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ.

ಹಾಸನ, ಬಾಳೆಹೊನ್ನೂರು, ತಾಳಗುಪ್ಪ, ಬೇವೂರು, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಪುತ್ತೂರು, ಉಪ್ಪಿನಂಗಡಿ, ಕಡೂರು, ವಿರಾಜಪೇಟೆ, ಭದ್ರಾವತಿ, ಸುಳ್ಯ, ಬೆಳ್ತಂಗಡಿ, ರೋಣ, ಇಂಡಿ, ಚಿತ್ರದುರ್ಗ, ಹರಪನಹಳ್ಳಿ, ಗೋಣಿಕೊಪ್ಪಲು, ಪೊನ್ನಂಪೇಟೆ, ನಾಯಕನಹಟ್ಟಿ, ಧರ್ಮಸ್ಥಳ, ಮಾಣಿ, ತಿಕ್ಕೋಟ, ಶಿರಹಟ್ಟಿ, ಅಥಣಿ, ಲೋಂಡಾ, ಜಯಪುರ, ಯುಗಟಿ, ಹುಂಚದಕಟ್ಟೆ, ಚಂದೂರಾಯನಹಳ್ಳಿ, ಮುಂಡರಗಿ, ನರಗುಂದ, ಬೈಲಹೊಂಗಲ, ಶಿಗ್ಗಾಂವ್, ಧಾರವಾಡ, ಕಮ್ಮರಡಿ, ಕಳಸ, ಕೊಣನೂರು, ಶ್ರವಣಬೆಳಗೊಳ, ಚಿಕ್ಕಮಗಳೂರು, ಮಂಡಗದ್ದೆ, ತ್ಯಾಗರ್ತಿ, ಉಚ್ಚಂಗಿದುರ್ಗ, ಸರಗೂರು, ಜಿಕೆವಿಕೆ, ಬಂಡೀಪುರ, ಕೊಟ್ಟೂರು, ಮಂಗಳೂರು ವಿಮಾನ ನಿಲ್ದಾಣ, ಕುಷ್ಟಗಿ, ಗಂಗಾವತಿಯಲ್ಲಿ ಮಳೆಯಾಗಿದೆ.

ಅಣ್ಣಿಗೆರೆ, ಅಕ್ಕಿ ಆಲೂರು, ರಾಯಭಾಗ, ಬೆಳಗಾವಿ, ಲೋಕಾಪುರ, ಕೂಡಲಸಂಗಮ, ಆಲಮಟ್ಟಿ, ತಾಳಿಕೋಟೆ, ಚಿತ್ತಾಪುರ, ಸೈದಾಪುರ, ಸಾಲಿಗ್ರಾಮ, ಹುಣಸೂರು, ಚಾಮರಾಜನಗರ, ತುಮಕೂರು, ಕೂಡ್ಲಿಗಿ, ಹೊಸಪೇಟೆ, ಕೊಪ್ಪ, ಪಾವಗಡ, ಸಿರಾ, ಬರಗೂರು, ದಾವಣಗೆರೆ, ಸಂತೆ ಬೆನ್ನೂರು, ಕಂಪ್ಲಿ, ದೊಡ್ಡಬಳ್ಳಾಪುರ, ಹೊನ್ನಾವರ, ಕಕ್ಕೇರಿ, ಮಾಗಡಿ, ಚಿಕ್ಕಬಳ್ಳಾಪುರ, ಅಜ್ಜಂಪುರ, ಶೃಂಗೇರಿ, ರಾಯಲ್ಪಾಡು, ಸಿರುಗುಪ್ಪ, ಹೊನ್ನಾಳಿ, ಹಿರಿಯೂರು, ಲಿಂಗನಮಕ್ಕಿ, ಸಕಲೇಶಪುರ, ತೊಂಡೇಭಾವಿಯಲ್ಲಿ ಮಳೆಯಾಗಿದೆ.