ಮನೆ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನು ಟೇಕಫ್ ಆಗಿಲ್ಲ: ಮಾಜಿ ಶಾಸಕ ಸುರೇಶ್ ಗೌಡ

ಕಾಂಗ್ರೆಸ್ ಸರ್ಕಾರ ಇನ್ನು ಟೇಕಫ್ ಆಗಿಲ್ಲ: ಮಾಜಿ ಶಾಸಕ ಸುರೇಶ್ ಗೌಡ

0

ಮಂಡ್ಯ: ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದ್ರು ಇನ್ನು  ಸಿದ್ದರಾಮಯ್ಯ ಟೇಕಾಫ್ ಆಗಿಲ್ಲ. ಚೀಪ್ ಪಾಪ್ಯೂಲಾರಿಟಿ ಸ್ಕೀಮ್ ಮಾಡಿಕೊಂಡು ಅದರ ಸುಳಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು  ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಕಮಿಷನ್ ಆರೋಪ ಮಾಡಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಅಂತ ಹೆಸರು ತೆಗೆದುಕೊಂಡಿದ್ದಾರೆ. ಆದ್ರೆ ಗೊತ್ತಿದ್ದು ಗೊತ್ತಿದ್ದು ಈ ಕೂಪಕ್ಕೆ ಬಿದ್ದಿದ್ದಾರೆ. ಈ ರಾಜ್ಯವನ್ನು 25 ವರ್ಷದ ಹಿಂದಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ. ಅಭಿವೃದ್ಧಿ ಮಾಡಲು ಕಷ್ಟವಾಗುತ್ತೆ. ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಜನರ ಗಮನವನ್ನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಅವರು ಕೊಟ್ಟಿರುವ ಯೋಜನೆ ಶೇ. 20 ಜನರಿಗೆ ತಲುಪಿಲ್ಲ. ಅಕ್ಕಿ ಕೊಡ್ತಿವಿ ಅಂತಾರೆ ರೇಷನ್ ಕಾರ್ಡ್ ರದ್ದು ಮಾಡ್ತಾರೆ. ಮಹಿಳೆಯರಿಗೆ 2 ಸಾವಿರವನ್ನು ಶೇ. 100  ರಷ್ಟು ಕೊಟ್ಟಿದ್ದಾರಾ? ಯುವನಿಧಿ ಕೊಟ್ಟಿಲ್ಲ, ಕರೆಂಟ್ ಉತ್ಪಾದನೆ ಇಲ್ಲ ಕರೆಂಟ್ ಎಲ್ಲಿ ಕೊಡ್ತಾರೆ? ಕೃತಕ ಅಭಾವ ಹುಟ್ಟಿಸುವ ಕೆಲಸವನ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನು ನಡೆಯುತ್ತಿಲ್ಲ. ನೇರವಾಗಿ ಹೇಳ್ತೇನೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಕಾಮಗಾರಿಗಳಿಗೆ ಈಗಿರುವ ಶಾಸಕರು, ಮಂತ್ರಿಗಳು ಕಮಿಷನ್ ತಗೊಳ್ತಿದ್ದಾರೆ. ಇದಕ್ಕೆ ಸಾಕ್ಷಿ ಕೊಡಕ್ಕಾಗಲ್ಲ. ಕಾಂಟ್ರ್ಯಾಕ್ಟ್ ಬಳಿ ಕೇಳಿದ್ರೆ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳ  ವಿರುದ್ಧ ಆರೋಪ ಮಾಡಿದರು.

ನಮ್ಮ ಗುರಿ ಲೋಕಸಭಾ ಚುನಾವಣೆ ಗೆಲ್ಲುವುದು. ನಮ್ಮ ಹೈಕಾಮಂಡ್ ಯಾರಿಗಾದ್ರು ಟಿಕೆಟ್ ಕೊಟ್ಟರು ನಾವು ಬದ್ದ ಎಂದು ಹೇಳಿದರು.

ಆಪರೇಷನ್ ಹಸ್ತ ವಿಚಾರವಾಗಿ ಪ್ರತಿಕ್ರಿಯಿಸಿ,  ಸಂಪರ್ಕ ಮಾಡಿರಬಹುದು ಕೆಲವರು ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗ್ತಾರೆ. ಅವರದೇ ಸ್ಟಾಟಜಿ ಇರುತ್ತೆ ಆಪರೇಷನ್ ಮಾಡಿರ್ತಾರೆ‌. ಯಾರು ಹೋಗ್ತಾರೆ ಅಂತ ಗೊತ್ತಿಲ್ಲ, ಡಿ ಕೆ ಶಿವಕುಮಾರ್ ಯಾರನ್ನು ಸಂಪರ್ಕ ಮಾಡಿದ್ದಾರೆ ಅನ್ನೋದನ್ನ ಅವರೇ ಹೇಳಬೇಕು‌ ಎಂದರು.