ಮನೆ ಆರೋಗ್ಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗಗಳು

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗಗಳು

0

*  ವಾರದಲ್ಲಿ ಕನಿಷ್ಠ ಮೂರು ದಿನಗಳಾದರೂ ತಪ್ಪದೆ 20 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಈ ವ್ಯಾಯಾಮ ಓಡುವುದು, ನೆಗೆಯುವುದು ಮುಂತಾದವಾಗಿರಬಹುದು.

* ಸದಾ ಸಂತೋಷವಾಗಿ ಇರಿ.

* ರಿಲಾಕ್ಸೇಶನ್ ಟೆಕ್ನಿಕ್ ಗಳನ್ನು ಕಲಿತುಕೊಳ್ಳಿ.

* ಸುಮ್ಮನೆ ಸಮಯ ವ್ಯರ್ಥ ಮಾಡದೆ ಯಾವುದಾದರೂ ಒಂದು ಒಳ್ಳೆಯ ಹವ್ಯಾಸ ಬೆಳಿಸಿಕೊಳ್ಳಿ.

* ಪ್ರತಿ ಆರು ವಾರಕೊಮ್ಮೆ ಹೊರಗಡೆ ಸುತ್ತಾಡಿ ಬನ್ನಿ, ವಾತಾವರಣ ಬದಲಾವಣೆಯಾಗಿ ಮನಸ್ಸು ಉಲ್ಲಾಸವಾಗಿರುತ್ತದೆ.

* ದಣಿದಿರುವಾಗ, ಆಯಾಸವಿರುವಾಗ, ಮಾನಸಿಕ ಒತ್ತಡ ಸಮಯದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಬೇಗ ಮಲಗಿ ವಿಶ್ರಾಂತಿ ಪಡೆಯಿರಿ.

* ಜ್ವರ, ನೆಗಡಿ, ಫ್ಲ್ಯೂನಿಂದ ಮುಕ್ತರಾದ ತಕ್ಷಣ ಶರೀರಕ್ಕೆ ಶ್ರಮ ಕೊಡುವುದು ಒಳ್ಳೆಯದಲ್ಲ. ಅದು ಪುನಃ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಒಂದೆರಡು ದಿನ ರೆಸ್ಟ್ ತೆಗೆದುಕೊಳ್ಳಿ.

* ಬಿಡಿ ಸಿಗರೇಟ್ ಸೇದಬಾರದು, ಧೂಮಪಾನಗಳಿಗೆ ನಿಮೋನಿಯಾ ಆಗುವ ಸಾಧ್ಯತೆ ಇರುತ್ತದೆ. ಶ್ವಾಸ ಸಂಬಂಧಿ ಕಾಯಿಲೆಗಳು ಬರಬಹುದು. ಧೂಮಪಾನಿಗಳು ವಿಟಮಿನ್ ʼಸಿʼ ಯನ್ನು ಹೆಚ್ಚು ಬಳಸಬೇಕು.