ಮನೆ ಜ್ಯೋತಿಷ್ಯ ವಿಶಾಖಾ (ಚತುರ್ಥ ಚರಣ)

ವಿಶಾಖಾ (ಚತುರ್ಥ ಚರಣ)

0

ಕ್ಷೇತ್ರ – ವೃಶ್ಚಿಕ ರಾಶಿಯಲ್ಲಿ 0 ಡಿಗ್ರಿ ಯಿಂದ 5ಡಿಗ್ರಿ 20 ಕಲೆ. ರಾಶಿ ಸ್ವಾಮಿ – ಕುಜ, ನಕ್ಷತ್ರಸ್ವಾಮಿ – ಗುರು, ಯೋನಿ – ವ್ಯಾಘ್ರ, ನಾಡಿ – ಅಂತ್ಯ, ಗಣ – ರಾಕ್ಷಸ, ನಾಮಾಕ್ಷರತೆ – ತೇ, ಶರೀರಭಾಗ – ಮೂತ್ರಾಶಯ, ಮೂತ್ರಮಾರ್ಗ, ಜನನೇಂದ್ರಿಯ, ಮೂಲಾಶಯ, ಕೆಳಮುಖ ಕರುಳು, ಪ್ರೋಸ್ ಪೇಟ ಗ್ರಂಥಿ.

ರೋಗಗಳು :- ಗರ್ಭಾಶಯ, ಜನನೇಂದ್ರಿಯ ಸಂಬಂಧಿ ರೋಗಗಳು, ಮೂತ್ರವಿಷಯಕ್ಕ ರೋಗಗಳು. ಹಾರ್ನಿಯಾ, ಕರುಳು ಬೆಳೆಯುವುದು, ಮೂತ್ರಾಶಯ ಗ್ರಂಥಿ, ಮೂಗಿನಿಂದ ರಕ್ತ ಸೋರುವುದು, ಜಲಾಭಾವ, ಮೂತ್ರಮಾರ್ಗದಲ್ಲಿ ಅಡೆತಡೆ, ಅಸಾಧಾರಣ ರಕ್ತಸ್ರಾವ ವಾಗುವುದು.

ಸಂರಚನೆ :- ಉತ್ಸಾಹಿ, ಗೌರವಶಾಲಿ, ಪ್ರಾಮಾಣಿಕ, ಉತ್ತಮ ವಿಚಾರವುಳ್ಳವರು, ದಯಾಳು, ಸ್ವತಂತ್ರ ಮನೋಭಾವದವರು, ಬೇರೆಯವರ ಮೇಲೆ ಪ್ರಭಾವ ಬೀರುವವರು, ಶೂರ ಮತ್ತು ಕೃತಜ್ಞರಾಗುವವರು.

ಉದ್ಯೋಗ ಮತ್ತು ವಿಶೇಷ :- ಬ್ಯಾಂಕ್ ನೌಕರ, ನ್ಯಾಯಾಧೀಶ ವಕೀಲ, ವಿಮಾ ಕಂಪನಿಯ ಸಂಚಾಲಕ, ರಾಸಾಯನಿಕ ತಜ್ಞ, ಆಸ್ತಿ ಒಡೆಯ, ಕೃಷಿಕ, ಕ್ಷೀರ ವ್ಯಾಪಾರಿ, ರಕ್ಷಣಾ ಮಂತ್ರಿ, ಗ್ರಾಮ ಮುಖ್ಯಸ್ಥ, ಆಯುರ್ವೇದ ತಜ್ಞ, ಕಚ್ಚಾತೈಲ ವ್ಯಾಪಾರಿ, ಚಿಕಿತ್ಸಕ ಪುಸ್ತಕ ಪ್ರಕಾಶಕ ಅಥವಾ ಸಲಹೆಗಾರರಾಗಬಹುದಾಗಿದೆ. ಈ ವಿಶಾಖ ನಕ್ಷತ್ರದ ನಾಲ್ಕನೇಯ ಪಾದದಲ್ಲಿ ಜನಿಸಿದವರು, ವಿಜ್ಞಾನದಲ್ಲಿ ಆಸಕ್ತಿ ಹೊಂದುವರು. ಇವರು ಉತ್ತಮವಾದ ಕಾರ್ಯ ಶಕ್ತಿ ಹೊಂದಿರುವವರು ಕೈ ಕೆಲಸದಲ್ಲಿ ಚತುರರು ಗುಪ್ತರೋಗ ಪೀಡಿತರು ಮಣ್ಣು ಅಥವಾ ಎಣ್ಣೆ ವ್ಯಾಪಾರಿಗಳು ಆಗಬಹುದಾಗಿದೆ ಸೂರ್ಯ.

ನಕ್ಷತ್ರ ಪಾದದಲ್ಲಿ ಮಾರ್ಗಸೀರ್ಷ ಮಾಸದಲ್ಲಿ ಮೊದಲು 3 5 ದಿನ ಇರುತ್ತಾನೆ. ಚಂದ್ರನು 6:00 ಇರುತ್ತಾನೆ.