ಕ್ಷೇತ್ರ – ಧನುರಾಶಿಯಲ್ಲಿ 0 ಡಿಗ್ರಿಯಿಂದ 13 ಡಿಗ್ರಿ 20 ಕಲೆಯವರೆಗೆ, ರಾಶಿಸ್ವಾಮಿ – ಗುರು, ನಕ್ಷತ್ರಸ್ವಾಮಿ – ಕೇತು, ಗಣ – ರಾಕ್ಷಸ, ಯೋನಿ – ಶ್ವಾನ, ನಾಡಿ – ಆದ್ಯ, ನಾಮಾಕ್ಷರ – ಯೆ, ಯೂ, ಯೀ, ಭೀ. ಶರೀರ ಭಾಗ – ತೊಡೆಗಳು, ನಾಡಿಗಳು, ತೊಡೆಯ ಮೇಲ್ಭಾಗ, ಯೋನಿ.
ರೋಗಗಳು :- ನಡೆಸಲು ನಿರಾಸಕ್ತಿ, ತೊಂದರೆ, ಗಂಟುಗಳು, ಸಂಧಿವಾತ, ಪುಪ್ಪುಸ ನೋವು, ಸೊಂಟನೋವು ಮುಂತಾದವು ಕಂಡುಬರುವುದು.
ಸಂರಚನೆ :- ಉದಾರ, ಪ್ರಾಮಾಣಿಕ, ಗೌರವ ಕೊಡುವವರು, ನಾಯಕತ್ವ ಗುಣವಿರುವವರು, ಸಲಹೆಗಾರ, ಸ್ನೇಹಮಯಿಗಳು, ಪ್ರಸನ್ನ ಚಿತ್ತದವರು, ಕಾನೂನು ಪಂಡಿತ, ಅಂಧವಿಶ್ವಾಸಿ, ಆಶಾವಾದಿ, ಅತಿವ್ಯಯಿ, ಹಾಸ್ಯಗಾರ, ಚಿಂತನಶೀಲರು, ಸಾಮಾಜಿಕ ಕಾರ್ಯ ಮಾಡುವವರು, ಅಹಂಕಾರಿಗಳಾಗಿದ್ದರೂ ವಿಶ್ವಾಸಕ್ಕೆ ಪಾತ್ರರಾಗಬಹುದಾಗಿದೆ.
ಉದ್ಯೋಗ, ವಿಶೇಷಗಳು :– ಧಾರ್ಮಿಕ ಸಂಸ್ಕಾರ ಮಾಡಿಸುವವ, ವಕೀಲ, ನ್ಯಾಯಾಧೀಶ, ಅಧ್ಯಾಪಕ, ಪುರೋಹಿತ, ಕಥಾ ವಾಚಕ, ರಾಜದೂತ, ಮಂತ್ರಿ, ವೈದ್ಯ, ಹೃದಯತಜ್ಞ, ಆಯುರ್ವೇದತಜ್ಞ, ವ್ಯಾಪಾರಿ, ಸಮಾಜಸೇವಕ, ಆಡಳಿತಗಾರ, ಜ್ಯೋತಿಷ್ಯ ಪ್ರೇಮಿ, ಹೂ ವ್ಯಾಪಾರಿ, ಅನೇಕ ಭಾಷಾ ತಜ್ಞ, ವಿಲಾಸಿ ಆಗಬಹುದಾಗಿದೆ.
ಗುರುವಿನ ರಾಶಿಯಲ್ಲಿ ಕೇತುವಿನ ನಕ್ಷತ್ರದಲ್ಲಿ ಜನಿಸಿದವರು ತಮಿಚ್ಛೆಯಂತೆ ಕಾರ್ಯ ಮಾಡುವರು. ತಂದೆ-ತಾಯಿಗಳಿಗೆ ತೊಂದರೆದಾಯಕರಾಗುವವರು, ಯಾತ್ರಾ ಪ್ರಿಯರು, ಜಾದುಗಾರರು, ಶ್ರೇಷ್ಠ ವ್ಯಕ್ತಿಗಳಾಗುವರು. ಸೂರ್ಯನು ಪುಷ್ಯಮಾಸದಲ್ಲಿ 13-25 ದಿನವಿರುವನು. ಮೂಲ ನಕ್ಷತ್ರದಲ್ಲಿ ಜನಿಸಿದ ದೋಷ ನಿವಾರಣೆ ಶಾಂತಿ ಮಾಡುವವರು. ನಾಲ್ಕನೇ ಪಾದದಲ್ಲಿ ಜನಿಸಿದವರು ಭಾಗ್ಯಶಾಲಿಗಳಾಗುವರು.