ಮುಂಬೈ: ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ಮತ್ತೊಂದು ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನ ಲ್ಲಿ 50 ಶತತಕಗಳ ಜೊತೆ ಟೆಸ್ಟ್ ಕ್ರಿಕೆಟ್ ನಲ್ಲೂ 29 ಶತಕ, ಟಿ–20ಯಲ್ಲಿ1 ಶತಕ ಸಿಡಿಸಿದ್ದಾರೆ. ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ ಸರಣಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 50ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದರು.
ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಗಳಿಸಿದಾಗ ಯಾರಾದರೂ ಅವರ ಹತ್ತಿರ ಬರಬಹುದು ಎಂದು ಯಾರೂ ಭಾವಿಸಿರಲಿಲ್ಲ. ಕೊಹ್ಲಿ ಅವರು 80 ಅಂತರರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ್ದಾರೆ ಎಂದು ಐಸಿಸಿ ರಿವ್ಯೂ ಸಂದರ್ಭದಲ್ಲಿ ಶಾಸ್ತ್ರಿ ಹೇಳಿದ್ದಾರೆ.
ಅಂತಹ ಆಟಗಾರರಿಗೆ ಏನೂ ಅಸಾಧ್ಯವಲ್ಲ. ಏಕೆಂದರೆ, ಅವರು ಫಾರ್ಮ್ ನಲ್ಲಿದ್ದಾಗ ಬಹು ಬೇಗನೆ ಶತಕಗಳನ್ನು ಗಳಿಸುತ್ತಾರೆ. ಕೊಹ್ಲಿ ಅವರ ಮುಂದಿನ 10 ಇನಿಂ ಗ್ಸ್‌ನಲ್ಲಿ ಬಹುಶಃ ನೀವು ಐದು ಶತಕಗಳನ್ನು ನೋಡಬಹುದು. ಮೂರು ಮಾದರಿಯ ಕ್ರಿಕೆಟ್ ನಲ್ಲೂ ವಿರಾಟ್ ಆಡುತ್ತಿದ್ದಾರೆ. ಇನ್ನೂ 3–4 ವರ್ಷ ಅವರು ಅದ್ಬುತ ಕ್ರಿಕೆಟ್ ಆಡಬಲ್ಲರು ಎಂದು ಶಾಸ್ತ್ರಿ ಹೇಳಿದ್ದಾರೆ.