ಮನೆ ರಾಷ್ಟ್ರೀಯ ಛತ್ತೀಸ್‌ ಗಢ: ಎರಡನೇ ಹಂತದ ಮತದಾನದ ವೇಳೆ ಐಇಡಿ ಸ್ಫೋಟ

ಛತ್ತೀಸ್‌ ಗಢ: ಎರಡನೇ ಹಂತದ ಮತದಾನದ ವೇಳೆ ಐಇಡಿ ಸ್ಫೋಟ

0

ರಾಯ್‌ ಪುರ್:‌ ಛತ್ತೀಸ್‌ ಗಢದಲ್ಲಿ ಎರಡನೇ ಹಂತದ ಮತದಾನ ಶುಕ್ರವಾರ (ನವೆಂಬರ್‌ 17) ಬೆಳಗ್ಗೆ ಆರಂಭಗೊಂಡಿದ್ದು, ಏತನ್ಮಧ್ಯೆ ಧಮ್ತಾರಿಯಲ್ಲಿ ನಕ್ಸಲೀಯರು ಐಇಡಿ ಸ್ಫೋಟಿಸಿರುವ ಘಟನೆ ನಡೆದಿದೆ.

ವರದಿಯ ಪ್ರಕಾರ, ನಕ್ಸಲೀಯರು ಐಇಡಿ ಸ್ಫೋಟಿಸಿದ ಸಂದರ್ಭದಲ್ಲಿ ಇಬ್ಬರು ಸಿಆರ್‌ ಪಿಎಫ್‌ ಯೋಧರು ಬೈಕ್‌ ನಲ್ಲಿ ಆಗಮಿಸುತ್ತಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.

90 ಸದಸ್ಯ ಬಲದ ಛತ್ತೀಸ್‌ ಗಢ ವಿಧಾನಸಭೆಯ ಎರಡನೇ ಮತ್ತು ಅಂತಿಮ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, 70 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದಿನ ಮತದಾನದಲ್ಲಿ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌, ಡಿಸಿಎಂ ಟಿಎಸ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ಅರುಣ್‌ ಸಾವೋ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ಮತಯಂತ್ರ ಸೇರಲಿದೆ.

ಬೆಳಗ್ಗೆ 8ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ಅಂತಿಮ ಹಂತದ ಮತದಾನದಲ್ಲಿ 18,800 ಮತಗಟ್ಟೆಗಳಿದ್ದು, ಇದರಲ್ಲಿ ಒಂಬತ್ತು ಮತಗಟ್ಟೆಗಳು ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವುದಾಗಿ ವರದಿ ತಿಳಿಸಿದೆ.

ಭದ್ರತೆಯ ದೃಷ್ಟಿಯಿಂದ ನಕ್ಸಲ್‌ ಪೀಡಿತ ಒಂಬತ್ತು ಮತಗಟ್ಟೆಯಲ್ಲಿ ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದ್ದು, ಮಧ್ಯಾಹ್ನ 3ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ ಎಂದು ವರದಿ ವಿವರಿಸಿದೆ.