ಮನೆ ದೇವಸ್ಥಾನ ಮಂಡ್ಯದ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ

ಮಂಡ್ಯದ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ

0

ಸೌವರ್ಣೇ ನವರತ್ನಖಂಡ ರಚಿತೇ ಪಾತ್ರೆ ಸ್ಮೃತಂ ಪಾಯಸಂ

ಭಕ್ಷಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ ||

ಶಾಕಾನಾಮಯುತಂ ಜಲಂ ರುಚಿಕರಂ ಖಂಡೋಜ್ವಲಂ

ತಾಂಬೂಲಂ ಮನಸಾ ಮಾಯಾ ವಿರಚಿತಂ ಭಕ್ತಾ ಪ್ರಭೋ ಸ್ವೀಕುರು ||

ಮಂಡ್ಯ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಸಾವಿರದ ಎಂಟುನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಮಂಡ್ಯದ ಕ್ಷೇತ್ರಧಿಪತಿಯಾದ ಶ್ರೀ ಅರ್ಕೇಶ್ವರ ಸ್ವಾಮಿ ಎಲ್ಲಿ ನೆಲೆಗೊಂಡ ಇತಿಹಾಸವನ್ನು ನೋಡೋಣ.

ಮೊದಲು ಈ ಕ್ಷೇತ್ರ ಕಾಡಿನ ಪ್ರದೇಶವಾಗಿತ್ತು ಮತ್ತು ಹುಣಸೆ ಗಿಡಗಳು ಇದ್ದವು. ಈ ಕಾಡಿನ ಪಕ್ಕದಲ್ಲಿ ಒಂದು ಚೆನ್ನಪ್ಪಗ್ರಾಮ ದೊಡ್ಡಿ ಎಂಬ ಗ್ರಾಮವಿತ್ತು. ಈ ಗ್ರಾಮದಿಂದ ಒಬ್ಬ ಹಸುಗಳನ್ನು ಮೇಯಲು ಪಕ್ಕದಲ್ಲಿದ್ದ ಕಾಡಿಗೆ ಹಸುಗಳನ್ನು ಕರೆದುಕೊಂಡು ಬರುತ್ತಿದ್ದನು.     ನಂತರ ಸಂಜೆ ಮನೆಗೆ ಮನೆಗೆ ಕರೆದುಕೊಂಡು ಹೋಗುತ್ತಿದ್ದನು. ಮನೆಗೆ ಹೋದ ನಂತರ ಹಾಲನ್ನು ಕರೆಯಲು ಹೋದರೆ ಹಸುವಿನ ಕೆಚ್ಚಲಿನಿಂದ ರಕ್ತವು ಬರುತ್ತಿತ್ತು.

ಹೀಗೆ ಸುಮಾರು ದಿನ ನಡೆಯಿತು. ಒಂದು ದಿನ ಹಸುವಿನ ಒಡತಿ ಗ್ರಾಮದ ಪಾಳೆಗಾರನಿಗೆ ವಿಷಯವನ್ನು ತಿಳಿಸಿದಳು. ಪಾಳೆಗಾರ ಏನಿರಬಹುದು ಎಂದು ತಿಳಿಯಲು ತಾನು ಕೊಡಲಿಯನ್ನು ತೆಗೆದುಕೊಂಡು ಕಾಡಿನಲ್ಲಿ ಹೋಗಿ ಕುಳಿತನು.

ಎಂದಿನಂತೆ ಹಸುಗಳನ್ನು ಮೆಯಲು ಬಂದಾಗ ಅದರಲ್ಲಿನ ಒಂದು ಹೊಸವು ಶ್ರೀ ಅರ್ಕೇಶ್ವರ ನೆಲೆಸಿರುವ ಜಾಗದಲ್ಲಿ ಹಾಲನ್ನು ಕೊಡುತ್ತಿತ್ತು. ಇದನ್ನು ಕಂಡ ಪಾಳೇಗಾರನು ತನ್ನ ಕೈಯಲ್ಲಿದ್ದ ಕೊಡಲಿಯನ್ನು ಹಸುವನ್ನು ಹೊಡಿಯಲು ಹೋದಾಗ, ಅದು ಶ್ರೀ ಅರ್ಕೇಶ್ವರ ಸಗವಾಮಿಗೆ ತಗಲಿ ಪಾಳೇಗಾರನು ಮೂರ್ಛೆಹೋದನು. ಆ ಸಂದರ್ಭದಲ್ಲಿ ಅರ್ಕೇಶ್ವರನು ಬಂದು ಪಾಳೆಗಾರನಿಗೆ ತಾನು ಇಲ್ಲಿ ನೆಲೆಸಿರುವುದಾಗಿ ಇಲ್ಲೊಂದು ದೇವಾಲಯ ನಿರ್ಮಿಸಬೇಕಾಗಿ ಮತ್ತು ಪೂಜೆಯು ನಿನ್ನ ಮನೆಯಿಂದಲೇ ನಡೆಯಬೇಕೆಂದು ತಿಳಿಸಿದರು.

ಪಾಳೆಗಾರನು ಮೂರ್ಛೆಯಿಂದ ಎದ್ದು ಅರ್ಕೇಶ್ವರನನ್ನು ಬಂದು ಹೇಳಿದಂತೆ ದೇವಾಲಯವನ್ನು ನಿರ್ಮಾಣ ಮಾಡಿಸಿ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಈ ದೇವಾಲಯದಲ್ಲಿ ದೀಪಾವಳಿ, ನವರಾತ್ರಿ, ಶಿವರಾತ್ರಿ, ಕಾರ್ತಿಕ ಮಾಸಗಳಲ್ಲಿ ವಿಕೃಂಭಣೆಯಿಂದ ನಡೆಯುತ್ತದೆ. ಮತ್ತೊಂದು ವಿಶೇಷ ಮಾಹಿತಿ ಎಂದರೆ ಇಲ್ಲಿ ಹಾವು ಕಚ್ಚಿದ ವ್ಯಕ್ತಿಗಳಿಗೆ ತೀರ್ಥ ಪ್ರಸಾದಗಳಿಂದ ಅವರನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ. ಮತ್ತು ಚರ್ಮರೋಗದ ಕಾಯಿಲೆ ಇದ್ದವರು ಪ್ರತಿ ಭಾನುವಾರ, ಗುರುವಾರ ಮೂರುಬಾರಿ ಬಂದು ದೇವಸ್ಥಾನದಲ್ಲಿ ಸ್ನಾನ ಮಾಡಿ ದೇವರಿಗೆ ಪ್ರದಕ್ಷಿಣೆ ಮಾಡಿ, ಇಲ್ಲಿನ ಹುತ್ತಕ್ಕೆ ಹಾಲನ್ನು ಹಿಡಿದರೆ ಚರ್ಮರೋಗವು ಗುಣವಾಗುತ್ತದೆ.

ಮತ್ತು ಹುತ್ತದ ಮೇಲಿನ ಪ್ರಸಾದವನ್ನು ನೀಡುತ್ತಾರೆ. ಇದನ್ನು ಸಹ ಚರ್ಮಕ್ಕೆ ಲೇಪಿಸಿಕೊಳ್ಳಬಹುದು. ಈ ದೇವಾಲಯದಲ್ಲಿ ರಾಜಗೋಪುರ ನಿರ್ಮಾಣ ಹೊಂದಿದ ಮೇಲೆ ದೇವಾಲಯವು ಬಹಳ ಅಭಿವೃದ್ಧಿ ಹೊಂದಿದೆ.