ಮನೆ ರಾಷ್ಟ್ರೀಯ ಕ್ಯಾರಿ ಬ್ಯಾಗ್‌ ಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ ಪಡೆದ ಶೋರೂಂ: 13 ಸಾವಿರ ರೂ....

ಕ್ಯಾರಿ ಬ್ಯಾಗ್‌ ಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ ಪಡೆದ ಶೋರೂಂ: 13 ಸಾವಿರ ರೂ. ಪರಿಹಾರ ನೀಡಲು ಗ್ರಾಹಕರ ನ್ಯಾಯಾಲಯದಿಂದ ಆದೇಶ

0

ಮುಂಬೈ(Mumbai)- ಕ್ಯಾರಿ ಬ್ಯಾಗ್‌ಗಾಗಿ ಮಹಿಳೆಯೊಬ್ಬರಿಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ ವಿಧಿಸಿದ್ದಕ್ಕಾಗಿ ಶೋರೂಂ ದಂಡ ತೆತ್ತಿದೆ.

ಮುಂಬೈನ ಕುರ್ಲಾದಲ್ಲಿರುವ ಅಹಿ-ಎಂಡ್ ಬ್ಯಾಗ್ ಶೋರೂಮ್‌ನಲ್ಲಿ ಕ್ಯಾರಿ ಬ್ಯಾಗ್‌ಗೆ 20 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಇದಕ್ಕಾಗಿ ಗ್ರಾಹಕರಿಗೆ 13,000 ರೂ.ಗಳನ್ನು ಪರಿಹಾರವಾಗಿ ಪಾವತಿಸಲು ಗ್ರಾಹಕರ ನ್ಯಾಯಾಲಯ ಶೋರೂಂ ನವರಿಗೆ ಸೂಚಿಸಿದೆ.

ವಡಾಲ ನಿವಾಸಿ ರೀಮಾ ಚಾವ್ಹಾ ಎಂಬಾಕೆಗೆ 13,000 ರೂ. ಮೊತ್ತವನ್ನು ಪಾವತಿಸಬೇಕಾಗಿದೆ. ಶೋರೂಂ ತನ್ನ ಗ್ರಾಹಕರನ್ನು ದುರ್ಬಳಕೆ ಮಾಡಿಕೊಂಡಿದೆ. ಏಕೆಂದರೆ, ಅದು ತನ್ನ ಬ್ಯಾಂಡಿಂಗ್ ಮತ್ತು ಹೆಸರಿನೊಂದಿಗೆ ಕ್ಯಾರಿ ಬ್ಯಾಗ್‌ಗಳನ್ನು ಗ್ರಾಹಕರಿಗೆ ನೀಡಿದ್ದು, ಹೆಚ್ಚುವರಿಯಾಗಿ 20 ರೂ. ಶುಲ್ಕ ವಿಧಿಸಿದೆ. ಗ್ರಾಹಕರು ಸರಕುಗಳನ್ನು ಖರೀದಿಸಲು ಅಂಗಡಿಗೆ ಬಂದಾಗ, ಅವುಗಳನ್ನು ಸಾಗಿಸಲು ಕ್ಯಾರಿ ಬ್ಯಾಗ್‌ಗಳನ್ನು ಉಚಿತವಾಗಿ ನೀಡಬೇಕು. ಇದಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸುವುದು ಸರಿಯಲ್ಲ ಎಂದು ಗ್ರಾಹಕರ ವೇದಿಕೆ ಉಲ್ಲೇಖಿಸಿದೆ.

ಮುಂಬೈನಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಕ್ಯಾರಿ ಬ್ಯಾಗ್‌ಗಳ ಮೇಲೆ ಅಕ್ರಮ ಶುಲ್ಕವನ್ನು ಜಾರಿಗೊಳಿಸಿದ್ದಕ್ಕಾಗಿ ಗ್ರಾಹಕರ ವೇದಿಕೆ ಶೋರೂಂ ಅನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ. ಮಹಿಳೆ ಚಾವಾ ಅವರು 2019 ರಲ್ಲಿ 1690 ರೂ.ಗೆ ಎಸ್ಟೆಡಾ ಬ್ಯಾಗ್ ಅನ್ನು ಖರೀದಿಸಿದ್ದರು. ಕ್ಯಾರಿ ಬ್ಯಾಗ್ ಗಾಗಿ ಶೋರೂಂ 20 ರೂ. ಹೆಚ್ಚುವರಿ ಶುಲ್ಕ ವಿಧಿಸಿತ್ತು. ಇದರಿಂದ ಅವರು 2020ರಲ್ಲಿ ದೂರು ನೀಡಿದ್ದರು.