ಮನೆ ಮನರಂಜನೆ ನ.24ರಂದು “ಎಲೆಕ್ಟ್ರಾನಿಕ್‌ ಸಿಟಿ’ ಸಿನಿಮಾ ತೆರೆಗೆ

ನ.24ರಂದು “ಎಲೆಕ್ಟ್ರಾನಿಕ್‌ ಸಿಟಿ’ ಸಿನಿಮಾ ತೆರೆಗೆ

0

“ಎಲೆಕ್ಟ್ರಾನಿಕ್‌ ಸಿಟಿ’ ಸಿನಿಮಾ ಇದೇ ನ.24ರಂದು ತೆರೆಕಾಣುತ್ತಿದೆ. ಆರ್‌. ಚಿಕ್ಕಣ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. 15 ವರ್ಷಗಳ ಕಾಲ ಸಾಫ್ಟ್ ವೇರ್‌ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಚಿಕ್ಕಣ್ಣ ಅವರು “ಎಲೆಕ್ಟ್ರಾನಿಕ್‌ ಸಿಟಿ’ ಎಂಬ ಸಿನಿಮಾ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಈಗಾಗಲೇ ಸೆನ್ಸಾರ್‌ ಆಗಿ, ಅನೇಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ.

ಚಿತ್ರದ ಹೆಸರೇ ಹೇಳುವಂತೆ ಇದು ಟೆಕ್ಕಿಗಳ ಕುರಿತಾದ ಸಿನಿಮಾ. ಸಾಫ್ಟ್ವೇರ್‌ ಕಂಪೆನಿಗಳಿಗೆ ಎಲೆಕ್ಟ್ರಾನಿಕ್‌ ಸಿಟಿ ಫೇಮಸ್‌. ಅದೇ ಕಾರಣದಿಂದ ಸಿನಿಮಾಕ್ಕೆ ಅದೇ ಟೈಟಲ್‌ನ್ನಾಗಿಸಿದ್ದಾರೆ. ಸಿನಿಮಾದಲ್ಲಿ ಟೆಕ್ಕಿಗಳ ಲೈಫ್, ಸಾಫ್ಟ್ವೇರ್‌ ಕಂಪೆನಿಯೊಳಗೆ ನಡೆಯುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳು, ಇದು ಟೆಕ್ಕಿಗಳ ಸಂಸಾರದ, ವೈಯಕ್ತಿಕ ಜೀವನದ ಮೇಲೆ ಬೀರುವ ಪ್ರಭಾವ ಸೇರಿದಂತೆ ಹಲವು ಅಂಶಗಳನ್ನು ಹೇಳಲಾಗಿದೆ. ಅದೇ ಕ್ಷೇತ್ರದಲ್ಲಿ ಅನುಭವವಿರುವ ಚಿಕ್ಕಣ್ಣ ಚಿತ್ರವನ್ನು ಸಾಕಷ್ಟು ನೈಜವಾಗಿ ಕಟ್ಟಿಕೊಟ್ಟಿದ್ದಾರಂತೆ. “ಸಿನಿಮಾ ತುಂಬಾ ನೈಜವಾಗಿ ಮೂಡಿಬಂದಿದೆ. ಈಗಾಗಲೇ ಚಿತ್ರೋತ್ಸವಗಳಲ್ಲಿ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ಚಿಕ್ಕಣ್ಣ.

ಚಿತ್ರದಲ್ಲಿ ಆರ್ಯನ್‌ ಹರ್ಷ, ದಿವ್ಯಾ ಆಶ್ಲೇಷ್‌, ರಕ್ಷಿತಾ ಕೆರೆಮನೆ, ರಶ್ಮಿ ಶೆಟ್ಟಿ, ಭವ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತವಿದ್ದು, ಅನುರಾಧಾ ಭಟ್‌ ಹಾಗೂ ಗಿರೀಶ್‌ ಹಾಡಿದ್ದಾರೆ.