ಮನೆ ಸುದ್ದಿ ಜಾಲ ಹವಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

ಹವಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

0

ಬೆಂಗಳೂರು(Bengaluru): ನಗರದಲ್ಲಿ ನಿನ್ನೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದ್ದು, ಹಲವು ಭಾಗಗಳು ಜಲಾವೃತಗೊಂಡು ಸವಾರರು ಹರಸಾಹಸಪಡುವಂತಾಗಿತ್ತು.

ಇಂದು ಕೂಡಾ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ಬೆಂಗಳೂರು ನಗರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಬೆಸ್ಕಾಂ ಅಧಿಕಾರಿಗಳು ಸಮರೋಪಾದಿಯಲ್ಲಿ ತುರ್ತು ದುರಸ್ಥಿ ಕಾರ್ಯ ಕೈಗೊಂಡರು. ಚಂದಾಪುರ ವಿಭಾಗದಲ್ಲಿ 32 ಕಂಬಗಳು, ಕೆಂಗೇರಿ ವಿಭಾಗದಲ್ಲಿ ಒಂದು ಟ್ರಾನ್ಸ್ ಫರ್ಮರ್ ಧರೆಗುರುಳಿದ್ದು, ಕೆ.ಆರ್ ಪುರಂನಲ್ಲಿ 12 ಕಂಬಗಳಿಗೆ ಹಾನಿಯಾಗಿದೆ.   ಬಿಎಂಟಿ ಲೇಔಟ್ ನಲ್ಲಿ ಎರಡು ವಿದ್ಯುತ್ ಕಂಬಗಳು ನೆಲಕ್ಕುರಳಿ ಬಿದ್ದಿವೆ.

ಒಟ್ಟಾರೇ 160 ಮರಗಳು ಧರೆಗುರುಳಿ ಬಿದಿದ್ದು, 170 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮಿ ವೇಗದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ.