ಬಾಗಲಕೋಟೆ(Bagalkot): ಆಸ್ತಿ ವಿಚಾರಕ್ಕೆ ನಡೆದ ಕಲಹ ವಿಕೋಪಕ್ಕೆ ತಿರುಗಿ, ಸಹೋದರಿ ಮೇಲೆ ಸಹೋದರರು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಢದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕವಿತಾ ಹಿರೇಮಠ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ( Hospital) ದಾಖಲಿಸಲಾಗಿದೆ. ಸಹೋದರರಾದ ಚಂದ್ರಶೇಖರ, ಕುಮಾರಸ್ವಾಮಿ ಹಲ್ಲೆ ನಡೆಸಿದ ಸಹೋದರರಾಗಿದ್ದಾರೆ.
ಘಟನೆ ವಿವರ:
22 ಎಕರೆ ಆಸ್ತಿ ಪಾಲುಮಾಡಿಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕವಿತಾ ಹಿರೇಮಠ ಹೆಸರಿಗೆ ತಾಯಿ 4 ಎಕರೆ ಜಮೀನು ಬರೆದಿದ್ದರು. ಇದೇ ವಿಚಾರದಲ್ಲಿ ಸಹೋದರರು, ಸಹೋದರಿ ನಡುವೆ ವಿವಾದ ಉಂಟಾಗಿತ್ತು. ಹುನಗುಂದ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಸದ್ಯ ಹಲ್ಲೆ ಬಗ್ಗೆ ಅಮೀನಗಢ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.














