ಮೈಸೂರು: ತುಳಸಿ ಸಸ್ಯ ಔಷಧಿಗಳ ಆಗರವಾಗಿದೆ, ಇದು ಪರಿಶುದ್ಧ ಆಮ್ಲಜನಕ ನೀಡಿ ಪ್ರತಿಯೊಂದು ಜೀವಿಗಳನ್ನು ಸಂರಕ್ಷಿಸುತ್ತದೆ. ಇದಕ್ಕಾಗಿ ನಮ್ಮ ಪೂರ್ವಜರು ಇದಕ್ಕೆ ದೇವರ ಸ್ಥಾನಮಾನ ನೀಡಿ ಪೂಜಿಸುತ್ತಾ ಬಂದಿದ್ದಾರೆ ಎಂದು ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ ಹೇಳಿದರು.
ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಂದು ಶುಕ್ರವಾರ ಉತ್ಥಾನ ದ್ವಾದಶಿ ಪ್ರಯುಕ್ತ ದೇವಾ ಲಯದ ರೂಢಿ ಸಂಪ್ರದಾಯದಂತೆ ತುಳಸಿ ಹಬ್ಬದ ಅಂಗವಾಗಿ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿ ನಂತರ ಭಕ್ತಾದಿಗಳಿಗೆ ತುಳಸಿ ಗಿಡ ವಿತರಿಸಿ ಅವರು ಮಾತನಾಡಿದರು.
ಪರಿಸರದ ಮಡಿಲಿನಲ್ಲಿ ಹುಟ್ಟಿರುವ ಮನುಷ್ಯ ಇಂದು ಪರಿಸರವನ್ನು ತಾತ್ಸಾರ ಮಾಡುತ್ತಿದ್ದಾನೆ, ಆದರಿಂದಲೇ ನಾವು ಇಂದು ರೋಗ ಹಾಗೂ ಮಾನಸಿಕ ನೆಮ್ಮದಿ ಕಳೆದುಕೊಂಡು ಬದುಕುತ್ತಿದ್ದೇವೆ ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡುವ ಜತೆಗೆ ಗಿಡಮರ ಪ್ರೀತಿಸಬೇಕು. ತುಳಸಿ ಲಗ್ನ ಆಚರಣೆಗಾಗಿ ಸಸಿ ವಿತರಿಸುತ್ತ ಬಂದಿದ್ದೀವಿ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತಿರುವ ಭಕ್ತರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಾಜಚಾರ್ಯ, ಶಶಿಕಲಾ, ಮಾಳಿ ರಮೇಶ್, ಪ್ರದೀಪ್, ಶೇಷಾದ್ರಿ,ಹಾಗೂ ಇನ್ನಿತರರು ಭಕ್ತಾದಿಗಳ ಹಾಜರಿದ್ದರು.