ಮನೆ ಸ್ಥಳೀಯ ಮೈಸೂರು ಜಿಲ್ಲಾ ಪಂಚಾಯತ್​: ಎಂಐಎಸ್​ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು ಜಿಲ್ಲಾ ಪಂಚಾಯತ್​: ಎಂಐಎಸ್​ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

0

ಮೈಸೂರು ಜಿಲ್ಲಾ ಪಂಚಾಯತ್​’ನಿಂದ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸ್ವಚ್ಛ ಭಾರತ್​ ಮಿಷನ್​ (ಗ್ರಾ) ಯೋಜನೆಯಡಿ ಜಿಲ್ಲಾ ಎಂಐಎಸ್​ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹೊರ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಈ ನೇಮಕಾತಿ ನಡೆಯಲಿದೆ.

ಹುದ್ದೆ ವಿವರ: ಮೈಸೂರು ಜಿಲ್ಲಾ ಪಂಚಾಯತ್​ ಕಾರ್ಯಾಲಯದಲ್ಲಿರುವ ಜಿಲ್ಲಾ ಎಂಐಎಸ್​ ಸಮಾಲೋಚಕರ ಹುದ್ದೆಗೆ ಭರ್ತಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ ಕಂಪ್ಯೂಟರ್​ ಸೈನ್​​/ ಎಂಎಸ್ಸಿ ಕಂಪ್ಯೂಟರ್​ ಸೈನ್​/ ಎಂಎಸ್ಸಿ ಸಂಖ್ಯಾಶಾಸ್ತ್ರದಲ್ಲಿ ಪದವಿಯನ್ನು ಹೊಂದಿರಬೇಕು.

ಅನುಭವ: ಅಭ್ಯರ್ಥಿಗಳು ದತ್ತಾಂಶ ನಿರ್ವಹಣೆ ಹಾಗೂ ದತ್ತಾಂಶ ಸಂಶೋಧನೆಯಲ್ಲಿ ಕನಿಷ್ಠ 3-5 ವರ್ಷ ಅನುಭವ ಹೊಂದಿರಬೇಕು.ವಯೋಮಿತಿ: ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್ ​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ. ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ ಸೇರಿದಂತೆ ಅಗತ್ಯ ಮಾಹಿತಿಯನ್ನು ಆನ್​ ಲೈನ್​ ನಲ್ಲಿ ಭರ್ತಿ ಮಾಡಬೇಕಿದೆ.

 ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವನ್ನು ಭರಿಸಬೇಕಿಲ್ಲ.

ಈ ಹುದ್ದೆಗೆ ನವೆಂಬರ್​ 17ರಂದು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಕೆ ಕಡೆಯ ದಿನಾಂಕ ನವೆಂಬರ್​ 26 ಆಗಿದೆ.ಈ ಹುದ್ದೆ ಕುರಿತು ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಹೆಚ್ಚಿನ ಮಾಹಿತಿಗೆ mysore.nic.in ಭೇಟಿ ನೀಡಬಹುದು.