ಮನೆ ರಾಜ್ಯ ತಮಿಳುನಾಡಿನ ಹಂದಿಯೂರಿಗೆ ಅಕ್ರಮ ಜಾನುವಾರು ಸಾಗಾಣಿಕೆ: ಆರೋಪಿ ಬಂಧನ, ಜಾನುವಾರುಗಳ ರಕ್ಷಣೆ

ತಮಿಳುನಾಡಿನ ಹಂದಿಯೂರಿಗೆ ಅಕ್ರಮ ಜಾನುವಾರು ಸಾಗಾಣಿಕೆ: ಆರೋಪಿ ಬಂಧನ, ಜಾನುವಾರುಗಳ ರಕ್ಷಣೆ

0

ಚಾಮರಾಜನಗರ: ತಮಿಳುನಾಡಿನ ಹಂದಿಯೂರಿಗೆ 25 ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದವರನ್ನು ರಾಮಾಪುರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

ಮೈಸೂರು ಎನ್.ಆ‌ರ್. ಮೊಹಲ್ಲಾದ ಫಾರೂಕ್ ಪಾಷ (35) ಚಾಲಕ ಬಂಧಿತ ಆರೋಪಿ.

ಈತ ಈಚ‌ರ್ ವಾಹನದಲ್ಲಿ 25 ಜಾನುವಾರುಗಳನ್ನು ತುಂಬಿಕೊಂಡು ತಮಿಳುನಾಡಿನ ಹಂದಿಯೂರಿಗೆ ತೆರಳಲು ರಾಮಾಪುರ ನಾಲ್ ರೋಡ್ ಮಧ್ಯಾಹ್ನದಲ್ಲಿ ವಾಹನವು ರಸ್ತೆ ಬದಿಗೆ ಮಗುಚಿ ಬಿದ್ದಿದೆ.

ಈ ವಿಷಯ ತಿಳಿದ ರಾಮಾಪುರ ಠಾಣೆಯ ಎಸೈ ರಾಧ ಸಿಬ್ಬಂದಿಗಳಾದ ಸುಲ್ತಾನ್, ಜಗದೀಶ್, ಮಹೇಂದ್ರ ಇವರುಗಳು ಮಾಹಿತಿ ಕಲೆ ಹಾಕಿದಾಗ ಮಳವಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಖರೀದಿ ಮಾಡಿ ತಮಿಳುನಾಡಿನ ಹಂದಿಯೂರಿಗೆ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ವಿಷಯ ಪಡೆದುಕೊಂಡು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಫಾರೂಕ್ ಪಾಷನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಾನುವಾರುಗಳನ್ನು ರಕ್ಷಿಸಿ ಮೈಸೂರಿನ ಪಿಂಜರ ಪೋಲ್’ಗೆ ಕಳುಹಿಸಿದ್ದಾರೆ.