ಮನೆ ರಾಜ್ಯ ಜನವರಿ 1 ರಿಂದ 15ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಅಭಿಯಾನ ಆರಂಭಿಸಲಿರುವ ಆರ್ ಎಸ್...

ಜನವರಿ 1 ರಿಂದ 15ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಅಭಿಯಾನ ಆರಂಭಿಸಲಿರುವ ಆರ್ ಎಸ್ ಎಸ್

0

ಅಯೋಧ್ಯೆ ರಾಮಮಂದಿರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಈ ಕಾರ್ಯವನ್ನು ಮಾಡಲಿದ್ದಾರೆ. 10 ಕೋಟಿ ಜನರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಮ ಮಂದಿರ ಟ್ರಸ್ಟ್ ಹೇಳಿದೆ.

ರಾಮಮಂದಿರದ ವಿಚಾರಧಾರೆಗಳು ಹಾಗೂ ಲೋಕಾರ್ಪಣೆ ಸಮಯದಲ್ಲಿ ರಾಮ ಕಥೆಗಳು ಪ್ರತಿ ಮನೆ ಮನೆಗೆ ತಲುಪುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ ಎಸ್‌ ಎಸ್) ಮತ್ತು ಅದರ ಅಂಗಸಂಸ್ಥೆಗಳು ಜನವರಿ 1 ರಿಂದ ಜನವರಿ 15 ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಎಂಬ ಅಭಿಯಾನದ ಮೂಲಕ ತಲುಪಿಸುವ ಕೆಲಸ ಮಾಡಲಿದ್ದಾರೆ.

ಈ ಅಭಿಯಾನಕ್ಕಾಗಿ RSS ಕೆಲವೊಂದು ತಂಡಗಳನ್ನು ರಚಿಸಿ. ಪ್ರತಿ ಮನೆಗೆ, ರಾಮನ ಕಥೆ, ಅವರ ಜೀವನ, ಸಾಹಸ, ತ್ಯಾಗ ಹಾಗೂ ಜನವರಿ 22ರಂದು ರಾಮ ಮಂದರ ಲೋಕಾರ್ಪಣೆಯ ಆಮಂತ್ರಣ ನೀಡುವ ಮೂಲಕ ಬಹುದೊಡ್ಡ ಮಟ್ಟದಲ್ಲಿ ಜನರನ್ನು ಸಂಪರ್ಕಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಈ ಕಾರ್ಯಕ್ರಮದ ಮೂಲಕ ಸಾಂಸ್ಕೃತಿ, ರಾಜಕೀಯ, ಆರ್ಥಿಕವಾಗಿ ಸಾಧನೆ ಮಾಡಿದವರನ್ನು ತಲುಪುದರ ಜತೆಗೆ ಜನಸಾಮಾನ್ಯರನ್ನು ಕೂಡ ಈ ಕಾರ್ಯಕ್ಕೆ ಆಹ್ವಾನಿಸುವುದು ಪ್ರಮುಖ ಗುರಿಯಾಗಿದೆ. ಎಲ್ಲ ರಾಜ್ಯಗಳಲ್ಲೂ ರಾಮಮಂದಿರ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಆರ್ ​​​ಎಸ್ ​​ಎಸ್​ ಹೇಳಿದೆ.