ಮನೆ ಅಪರಾಧ ಕೆ.ಆರ್.ಪೇಟೆ: ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗ

ಕೆ.ಆರ್.ಪೇಟೆ: ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗ

0

ಕೆ.ಆರ್.ಪೇಟೆ:ಪಟ್ಟಣದ ಹತ್ತಕ್ಕೂ ಹೆಚ್ಚು ಖಾಸಗಿ ಕ್ಲಿನಿಕ್‌ಗಳು, ಸ್ಕ್ಯಾನಿಂಗ್ ಸೆಂಟರ್ ಗಳು ಹಾಗೂ ಲ್ಯಾಬ್‌ಗಳ ಮೇಲೆ ತಹಶೀಲ್ದಾರ್ ನಿಸರ್ಗಪ್ರಿಯ ಅವರ ನೇತೃತ್ವದಲ್ಲಿ ತಾಲೂಕು ಜಾಗೃತಿದಳವು ದಾಳಿ ನಡೆಸಿ ಹೆಣ್ಣು ಭ್ರೂಣ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ತಡೆಬಗ್ಗೆ ಜಾಗೃತಿ ಮೂಡಿಸಿತು.


ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ನಾವಿ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಹೆಣ್ಣು ಬ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಕಾನೂನು ಬಾಹಿರವಾದ ಚಟುವಟಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಜಾಗೃತ ದಳದ ಸೂಚನೆಯಂತೆ ಉಪವಿಭಾಗಾಧಿಕಾರಿ ನಂದೀಶ್ ಅವರ ನೇತೃತ್ವದಲ್ಲಿ ಬಾಗಿಲು ಮುಚ್ಚಿಸಿ ಸೀಲ್ ಮಾಡಲಾಯಿತು.
ಕಿಷ್ಕಿಂದೆಯಂತಹ ಸಣ್ಣದಾದ ಕೊಠಡಿಗಳಲ್ಲಿ ಕ್ಲಿನಿಕ್‌ ಗಳನ್ನು ತೆರೆದು ಅಶುಚಿತ್ವದ ಮಧ್ಯದಲ್ಲಿ ರೋಗಿಗಳ ಜೀವನದೊಂದಿಗೆ ಚೆಲ್ಲಾಟ ನಡೆಸಿ ವೈದ್ಯಕೀಯ ಸೇವೆ ನೀಡುತ್ತಿರುವ ವೈದ್ಯರಿಗೆ ಎಚ್ಚರಿಕೆ ನೀಡಲಾಯಿತು. ದಾಳಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್,ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅರುಣ್ ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಪೋಲಿಸ್ ಇನ್ಸ್ಪೆಕ್ಟರ್ ಸುಮಾರಾಣಿ, ಪುರಸಭೆಯ ಮುಖ್ಯಅಧಿಕಾರಿ ಜಗರೆಡ್ಡಿ ಸೇರಿದಂತೆ ತಾಲೂಕು ಜಾಗೃತ ದಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯಂತಹ ಪ್ರಕರಣಗಳು ನಡೆಯದಂತೆ ತೀವ್ರವಾದ ನಿಗಾವಹಿಸಿಲು ತಾಲ್ಲೂಕು ಮಟ್ಟದ ಜಾಗೃತಿ ದಳ ವನ್ನು ರಚಿಸಲಾಗಿದ್ದು.
ತಹಶೀಲ್ದಾರ್ ನಿಸರ್ಗಪ್ರಿಯ ಅವರ ನೇತೃತ್ವದಲ್ಲಿ ತಾಲ್ಲೋಕಿನ ಖಾಸಗಿ ಕ್ಲಿನಿಕ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿ ಕೆ.ಪಿ.ಎಂ.ಇ ನೊಂದಣಿ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡು ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಖಾಸಗಿ ಕ್ಲಿನಿಕ್ ಗಳ ವೈದ್ಯರು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.