ಮನೆ ರಾಜ್ಯ ವಿಜಯಪುರ ಮಹಾನಗರದ ಸುತ್ತಮುತ್ತ ಲಘು ಭೂಕಂಪ

ವಿಜಯಪುರ ಮಹಾನಗರದ ಸುತ್ತಮುತ್ತ ಲಘು ಭೂಕಂಪ

0

ವಿಜಯಪುರ: ವಿಜಯಪುರ ಮಹಾನಗರದ ಸುತ್ತಲೂ ಶುಕ್ರವಾರ ಬೆಳಿಗ್ಗೆ ಲಘು  ಭೂಕಂಪ ಸಂಭವಿಸಿದೆ.

ವಿಜಯಪುರ ತಾಲೂಕಿನ ಉಕಮನಾಳ ಗ್ರಾಮದ ಪರಿಸರದಲ್ಲಿ ಶುಕ್ರವಾರ ಬೆಳಿಗ್ಗೆ 6-57 ರ ಸುಮಾರಿಗೆ ಸಂಭವಿಸಿದ ಲಘು ಭೂಕಂಪನ 3.0 ತೀವ್ರತೆ ಹೊಂದಿತ್ತು. ಉಕಮನಾಳ ಗ್ರಾಮದ ಪರಿಸರದಲ್ಲಿ 7 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ.

ಉಕಮನಾಳ ಸುತ್ತಲಿನ ವಿಜಯಪುರ ನಗರ, ಕತಕನಹಳ್ಳಿ, ಹೊನ್ನುಟಗಿ, ಕುಮಟಗಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ.

ಉಕಮನಾಳ ಬಳಿ ಭೂಕಂಪನ ಆಗಿರುವುದನ್ನು ಕರ್ನಾಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ದೃಢೀಕರಿಸಿದೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.