ಮನೆ ರಾಷ್ಟ್ರೀಯ ಮಧ್ಯಪ್ರದೇಶ ನೂತನ ಸಿಎಂ ಆಗಿ ಮೋಹನ್​ ಯಾದವ್ ಆಯ್ಕೆ

ಮಧ್ಯಪ್ರದೇಶ ನೂತನ ಸಿಎಂ ಆಗಿ ಮೋಹನ್​ ಯಾದವ್ ಆಯ್ಕೆ

0

ಭೋಪಾಲ್: ಉಜ್ಜೈನ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಮೋಹನ್​ ಯಾದವ್ ಅವರನ್ನು ಮಧ್ಯಪ್ರದೇಶ ನೂತನ ಸಿಎಂ ಆಗಿ ಆಯ್ಕೆ​ ಮಾಡಲಾಗಿದೆ.

ಮಧ್ಯಪ್ರದೇಶ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.

ಡಿಸಿಎಂ ಆಗಿ ಜಗದೀಶ್ ದೇವಡಾ, ರಾಜೇಶ್ ಶುಕ್ಲಾ ಆಯ್ಕೆಯಾಗಿದ್ದಾರೆ.

58 ವರ್ಷದ ಯಾದವ್ ಉಜ್ಜಯಿನಿ ಜಿಲ್ಲೆಯಿಂದ ಮೂರು ಬಾರಿ ಶಾಸಕರಾಗಿದ್ದರು, ಇದೀಗ ಶಿವರಾಜ್ ಸಿಂಗ್ ಚೌಹಾಣ್ ಸ್ಥಾನಕ್ಕೆ ಮೋಹನ್​ ಯಾದವ್ ಬಂದಿರುವುದು ಪಕ್ಷದ ದೊಡ್ಡ ಬದಲಾವಣೆಯನ್ನೇ ತಂದಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಈ ಬದಲಾವಣೆಯನ್ನು ಮಾಡಿದೆ. ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಮೋಹನ್​ ಯಾದವ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

ಕಳೆದ ತಿಂಗಳ ಚುನಾವಣೆಯಲ್ಲಿ ಸ್ಪರ್ಧಿಸಿದ ಮೂವರು ಕೇಂದ್ರ ಸಚಿವರಲ್ಲಿ ನರೇಂದ್ರ ಸಿಂಗ್ ತೋಮರ್ ಅವರನ್ನು ವಿಧಾನಸಭೆಯ ಸ್ಪೀಕರ್​​ ನ್ನಾಗಿ ಮಾಡಲಾಗಿದೆ.

ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಸಚಿವಾಲಯವನ್ನು ಮುನ್ನಡೆಸಿದ್ದ ತೋಮರ್ ಅವರು ಚೌಹಾಣ್ ಅವರಿಗೆ ಈ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಇರುವ ಕಾರಣ ಹಿರಿಯರ ನಾಯಕರನ್ನು ಬಿಟ್ಟು ಮೋಹನ್​ ಯಾದವ್ ಅವರನ್ನು ಸಿಎಂ ಮಾಡಲಾಗಿದೆ.

ಮಾಜಿ ಸಿಎಂ ಶಿವರಾಜ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಮೋಹನ್ ಯಾದವ್, 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಮೋಹನ್ ಯಾದವ್ 2013, 2018 ಮತ್ತು 2023ರ ಚುನಾವಣೆಯಲ್ಲಿ 13 ಸಾವಿರಕ್ಕಿಂತ ಹೆಚ್ಚು ಮತಗಳಿಂದ ಜಯ ಸಾಧಿಸಿದರು. 1965ರ ಮಾರ್ಚ್ 25ರಂದು ಉಜ್ಜೈನ್‌ ನಲ್ಲಿ ಜನಿಸಿದ ಮೋಹನ್ ಯಾದವ್ ಎಬಿವಿಪಿ ಕಾರ್ಯಕರ್ತರಾಗಿದ್ದರು. ತಂದೆ ಪೂನಂಚಂದ್‌ ಯಾದವ್, ಪತ್ನಿ ಸೀಮಾ ಯಾದವ್. ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬರು ಹೆಣ್ಣು ಮಗಳು ಇದ್ದರೆ. ಯಾದವ್ ಬಿಎಸ್ಸಿ, ಎಲ್‌ಎಲ್‌ಬಿ, ಎಂಎ ಮತ್ತು ಪಿಹೆಚ್‌ ಡಿ ಶಿಕ್ಷಣವನ್ನು ಕೂಡ ಪಡೆದಿದ್ದಾರೆ.