ಮನೆ ಸ್ಥಳೀಯ ಪ್ರತ್ಯೇಕ ಪ್ರಕರಣ: ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ನಾಪತ್ತೆ

ಪ್ರತ್ಯೇಕ ಪ್ರಕರಣ: ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ನಾಪತ್ತೆ

0

ಮೈಸೂರು: ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ನಾಪತ್ತೆಯಾಗಿದ್ದು, ದೂರು ದಾಖಲಾಗಿದೆ.

ನಾಪತ್ತೆಯಾದವರ ಮಾಹಿತಿ ಇಂತಿದೆ:

ಧನಲಕ್ಷ್ಮಿ

ಕುವೆಂಪುನಗರದ ಕೆ.ಬ್ಲಾಕ್ ನಲ್ಲಿ ಗರಿ ಹೆಣೆಯುವ ಕೆಲಸಕ್ಕೆ ಹೋದ ಧನಲಕ್ಷ್ಮಿ(50) ಎಂಬುವವರು ಮನೆಗೆ ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ಚಹರೆ: 5.2 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ಮತ್ತು ಬಿಳಿ ಮಿಶ್ರಿತ ತಲೆಗೂದಲು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಹಸಿರು ಮತ್ತು ಸಿಮೆಂಟ್ ಬಣ್ಣದ ಮಿಶ್ರಿತ ಸೀರೆ ಮತ್ತು ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದಾರೆ.

ಮಿತ್ರಾ ಜಿ.

2020ರ ಜನವರಿ 20 ರಂದು ಅಶೋಕ ರಸ್ತೆಯಲ್ಲಿ ಬಣ್ಣದ ಅಂಗಡಿಗೆ ಹೋಗಿ ಬರುತ್ತೇನೆಂದು ಹೋದ ಮಿತ್ರಾ ಜಿ(42) ಎಂಬುವವರು, ಅದೇ ದಿನ ಮಧ್ಯಾಹ್ನ 1.30ಕ್ಕೆ ಸಿದ್ದಲಿಂಗಪುರದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದೇನೆ ಸಂಜೆ ಮನೆಗೆ ಬರುತ್ತೇನೆಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆದರೆ ಇದುವರೆಗೆ ಮನೆಗೆ ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ಚಹರೆ: 5.2 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕಪ್ಪು ತಲೆಕೂದಲು ಹೊಂದಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. ತಿಳಿ ಬಣ್ಣದ ಶರ್ಟ್, ನೆವಿ ಬ್ಲ್ಯೂ ಕಲರ್ ಪ್ಯಾಂಟ್ ಧರಿಸಿದ್ದಾರೆ.

ರಮೇಶ್ ಬಿ

2021ರ ಅಕ್ಟೋಬರ್ 25 ರಂದು ಬೆಳಿಗ್ಗೆ 6.30ಕ್ಕೆ ಮೈಸೂರು ನಗರದ ದೇವರಾಜ ಮಾರ್ಕೆಟ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ರಮೇಶ್ ಬಿ(32)  ಮನೆಗೆ ಹಿಂತಿರುಗದೆ ಕಾಣೆಯಾಗಿದ್ದಾರೆ.

ಚಹರೆ:  5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು,  ಗೋಧಿ ಮೈಬಣ್ಣ,  ಕಪ್ಪು ತಲೆಗೂದಲು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಲೈಟ್ ಪಿಂಕ್ ಶರ್ಟ್,  ಬ್ಲಾಕ್ ಕಲರ್ ಪ್ಯಾಂಟ್ ಧರಿಸಿದ್ದಾರೆ.

ಹೊನ್ನಶೆಟ್ಟಿ

 2020ರ ಜನವರಿ 23 ರಂದು ತಿರುಗಾಡಲು ಮನೆಯಿಂದ ಹೊರಗೆ ಹೋದ ಹೊನ್ನಶೆಟ್ಟಿ(80) ವಾಪಾಸ್ ಬರದೇ ನಾಪತ್ತೆಯಾಗಿದ್ದಾರೆ.

ಚಹರೆ: 5 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ,, ಕಪ್ಪು & ಬಿಳಿ ತಲೆಗೂದಲು, ಅಗಲ ಕಿವಿಗಳಿದ್ದು, ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಕನ್ನಡ ಭಾಷೆ ಮಾತನಾಡುತ್ತಾರೆ. ಬ್ಲಾಕ್ ಕಲರ್ ಚಡ್ಡಿ, ಕ್ರೀಮ್ ಕಲರ್ ಶರ್ಟ್, ಬ್ಲಾಕ್ ಕಲರ್ ಚಪ್ಪಲಿ ಹಾಕಿರುತ್ತಾರೆ.

ಇವರ ಮಾಹಿತಿ ದೊರೆತಲ್ಲಿ ಕುವೆಂಪುನಗರ ಪೊಲೀಸ್ ಠಾಣೆ ದೂ. 0821-2418324, 9480802247ನ್ನು ಸಂಪರ್ಕಿಸಲು ಕೋರಲಾಗಿದೆ.