ಮನೆ ರಾಜ್ಯ ಶ್ರೀರಂಗಪಟ್ಟಣ: ವಕೀಲರ ಸಂರಕ್ಷಣಾ ಕಾಯ್ದೆ ಮಸೂದೆ ಜಾರಿ ಮಾಡದ ಸರ್ಕಾರದ ವಿರುದ್ಧ ವಕೀಲರ ಪ್ರತಿಭಟನೆ

ಶ್ರೀರಂಗಪಟ್ಟಣ: ವಕೀಲರ ಸಂರಕ್ಷಣಾ ಕಾಯ್ದೆ ಮಸೂದೆ ಜಾರಿ ಮಾಡದ ಸರ್ಕಾರದ ವಿರುದ್ಧ ವಕೀಲರ ಪ್ರತಿಭಟನೆ

0

ಶ್ರೀರಂಗಪಟ್ಟಣ: ವಕೀಲರ ಸಂರಕ್ಷಣಾ ಕಾಯ್ದೆ ಮಸೂದೆಯನ್ನು ಜಾರಿ ಮಾಡದ ಸರ್ಕಾರದ ವಿರುದ್ಧ ಶ್ರೀರಂಗಪಟ್ಟಣ ವಕೀಲ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಶ್ರೀರಂಗಪಟ್ಟಣ ಕೋರ್ಟ್ ಆವರಣದ ಮುಂಭಾಗದಲ್ಲಿ ದಿಕ್ಕಾರ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾಯಕ ಜನರ ಮೇಲಿನ ದೌರ್ಜನ್ಯ ಅನ್ಯಾಯಗಳಿಗೆ ನ್ಯಾಯ ಕೊಡಿಸುವ ವಕೀಲರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ಖಂಡಿಸಿ ವಕೀಲರ ಸಂರಕ್ಷಣಾ ಕಾಯ್ದೆ ಮಸೂದೆಯನ್ನು ಜಾರಿಗೆ ತರಲೆಂದು ಎಲ್ಲಾ ವಕೀಲರ ಸಂಘದಿಂದ ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು.  ಘನ ಸರ್ಕಾರವು ಮಸೂದೆಯನ್ನು ಜಾರಿ ತರುವುದಾಗಿ ಹೇಳಿ ವಸೂದೆಯ ವಿಚಾರವನ್ನು ಪ್ರಸ್ತಾಪ ಮಾಡದಿರುವ ಕಾರಣ ರಾಜ್ಯದ ಎಲ್ಲಾ ವಕೀಲರು ಉಗ್ರ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ವಕೀಲ ಸಂರಕ್ಷಣಾ ಕಾಯ್ದೆ ಮಸೂದೆ ತರುವವರೆಗೂ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.