ಮನೆ ಅಪರಾಧ ಹೊಸಕೋಟೆ ಎಸ್ ​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ: ಎಫ್​ ಐಆರ್ ದಾಖಲು

ಹೊಸಕೋಟೆ ಎಸ್ ​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ: ಎಫ್​ ಐಆರ್ ದಾಖಲು

0

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿರುವ ಎಸ್ ​ಪಿಜಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಎಫ್​ ಐಆರ್ ದಾಖಲಾಗಿದೆ.

ಭ್ರೂಣ ಹತ್ಯೆ ಪ್ರಕರಣ ಸಂಬಂಧ ತಿರುಮಲಶೆಟ್ಟಿಹಳ್ಳಿ ಎಸ್ ​​ಪಿಜಿ ಆಸ್ಪತ್ರೆಯ ವೈದ್ಯ ಸೇರಿದಂತೆ ಐವರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ ಐಆರ್​ ದಾಖಲಾಗಿದೆ.

ಶ್ರೀನಿವಾಸ್ ಮೊದಲ ಆರೋಪಿಯಾಗಿದ್ದು (ಎ1), ಎ2 ನರ್ಸ್​ ಅನಿತಾ, ಎ3 ನರ್ಸ್​​ ನೇತ್ರಾ, ಎ4 ರೇವತಿ, ಎ5 ರಾಧಿಕಾ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮೆಡಿಕಲ್​ ಆ್ಯಕ್ಟ್​ 1994, ಯುಎಸ್​​ 23/1, 2, 3, ಮೆಡಿಕಲ್ ಟರ್ಮಿನೇಷನ್ ಆಪ್ ಪ್ರೆಗ್ನೆಸಿ ಆ್ಯಕ್ಟ್ 1971 ಅಡಿ US 3, 4, IPC ಸೆಕ್ಷನ್​ 1860ರ ಅಡಿ, 312, 314, 315, 316ರ ಅಡಿ ಕೇಸ್​​ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ವೈದ್ಯ ಮತ್ತು ನರ್ಸ್​ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

1500 ಕ್ಕೂ ಅಧಿಕ ಗರ್ಭಿಣಿಯರ ಸ್ಕ್ಯಾನಿಂಗ್

ಎಸ್ ​ಪಿಜಿ ಆಸ್ವತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ ಪ್ರಕರಣ ಸಂಬಂಧ ಆಸ್ಪತ್ರೆಯ ದಾಖಲೆಗಳು ಸಾಕಷ್ಟು ಅನುಮಾನ ಮೂಡಿಸುತ್ತಿದೆ. ಸ್ಕ್ಯಾನಿಂಗ್​ ನಲ್ಲಿ ದೊಡ್ಡ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಒಂದು ವರ್ಷದಲ್ಲಿ 1500 ಕ್ಕೂ ಅಧಿಕ ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿದ್ದು, ಈ ಪೈಕಿ 400 ಕ್ಕೂ ಅಧಿಕ ಮಹಿಳೆಯರ ಹೆರಿಗೆ ಮಾಹಿತಿ ‌ಅಲಭ್ಯವಾಗಿದೆ.

ನಾಪತ್ತೆಯಾದ 400 ಕ್ಕೂ‌ ಅಧಿಕ ಮಹಿಳೆಯರ ಮಾಹಿತಿಗಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೇರೆಡೆ ಹೆರಿಗೆ ಮಾಡಿಸಿಕೊಂಡಿದ್ದಾರಾ ಅಥವಾ ಗರ್ಭಪಾತ ಮಾಡಿದ್ದಾರಾ ಎಂಬ ವಿಚಾರವಾಗಿ ತಮಿಖೆ ನಡೆಸುತ್ತಿದ್ದಾರೆ.