ಮನೆ ರಾಷ್ಟ್ರೀಯ ಸಂಸತ್ ಕಲಾಪಕ್ಕೆ ಅಡ್ಡಿ: ರಾಜ್ಯಸಭೆಯಿಂದ 45 ಪ್ರತಿಪಕ್ಷ ಸದಸ್ಯರ ಅಮಾನತು

ಸಂಸತ್ ಕಲಾಪಕ್ಕೆ ಅಡ್ಡಿ: ರಾಜ್ಯಸಭೆಯಿಂದ 45 ಪ್ರತಿಪಕ್ಷ ಸದಸ್ಯರ ಅಮಾನತು

0

ಹೊಸದಿಲ್ಲಿ: ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕಾಂಗ್ರೆಸ್ ಹಿರಿಯ ಸಂಸದರಾದ ಜೈರಾಮ್ ರಮೇಶ್, ರಣದೀಪ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ 45 ಪ್ರತಿಪಕ್ಷ ಸದಸ್ಯರನ್ನು ರಾಜ್ಯಸಭೆ ಸೋಮವಾರ ಅಮಾನತುಗೊಳಿಸಿದೆ.

ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 34 ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಿದರೆ, 11 ಇತರ ಸಂಸದರನ್ನು ವಿಶೇಷಾಧಿಕಾರಗಳ ಸಮಿತಿಯ ವರದಿ ಬಾಕಿ ಉಳಿದಿದೆ.

ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮೂರು ಬಾರಿ ಮುಂದೂಡಲಾಯಿತು.

ಕಲಾಪದಲ್ಲಿ ಗದ್ದಲ ಉಂಟು ಮಾಡಿದ್ದಕ್ಕಾಗಿ ಸಂಸತ್ತಿನ 33 ವಿಪಕ್ಷ ಸದಸ್ಯರನ್ನು ಲೋಕಸಭೆಯಿಂದ ಅಮಾನತುಗೊಳಿಸಿದ ಗಂಟೆಗಳ ನಂತರ ರಾಜ್ಯಸಭೆಯಲ್ಲೂ ಅಮಾನತು ಮಾಡಲಾಗಿದೆ.

”ಗೌರವಾನ್ವಿತ ಸಂಸದರು ಸದನದಲ್ಲಿ ನಿಯಮಾನುಸಾರ ನಡೆದುಕೊಳ್ಳಬೇಕು ಎಂದು ನಾನು ವಿನಂತಿಸುತ್ತೇನೆ. ನಿಮ್ಮನ್ನು ಗಲಭೆ ದಳವನ್ನಾಗಿ ಮಾಡಿಕೊಳ್ಳಬೇಡಿ. ಈ ಮಹಾ ಸದನದ ಘನತೆಗೆ ಚ್ಯುತಿ ತರಬೇಡಿ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ಕಿಡಿಕಾರಿದ್ದಾರೆ.