ಮನೆ ರಾಜ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

0

ಹುಬ್ಬಳ್ಳಿ: ಕಾಂಗ್ರೆಸ್ ಸರಕಾರದಲ್ಲಿ ಕಳ್ಳಕಾಕರಿಗೆ ಭಯ ಇಲ್ಲ ಅನಿಸುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಾವಿ ವಂಟಮುರಿ ಗ್ರಾಮದಲ್ಲಿ ನಡೆದಿರುವ ಅಮಾನುಷ ಘಟನೆ ಆಡಳಿತದ ವೈಫಲ್ಯ ತೋರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ. ಜನರ ಬದುಕು ದುಸ್ಥರವಾಗಿದೆ. ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ. ಹಣ ತಿಂದು ಬೇಕಾಬಿಟ್ಟಿಯಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಸರ್ಕಾರ ಟ್ರಾನ್ಸಫರ್ ಗೆ ಟಾರ್ಗೆಟ್ ಫಿಕ್ಸ್ ಮಾಡಿದೆ. ಅಧಿಕಾರಿಗಳು ಯೋಜನೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭ್ರೂಣ ಹತ್ಯೆ ನಿರಂತರವಾಗಿದೆ. ಇಂದಿಗೂ ಭ್ರೂಣ ಹತ್ಯೆ ನಿರಂತರವಾಗಿದೆ. ಸಿಐಡಿ ಗೆ ಹಸ್ತಾಂತರ ಮಾಡಿದರೆ ಎಲ್ಲಾ ಭಾರ ಅದರ ಮೇಲೆ ಹಾಕಿದರೆ ಏನು ಉಪಯೋಗ? ಸಿಐಡಿಗೆ ಕೊಟ್ಟರೆ ಯಾರಿಗೆ ಭಯವಿದೆ, ಇವತ್ತಿಗೂ ಭ್ರೂಣ ಹತ್ಯೆ ನಡೆಯುತ್ತಿದೆ ಎಂದರು.

ಕೋಲಾರ ಜಿಲ್ಲೆಯ ಮಾಲೂರುನಲ್ಲಿ ನಡೆದ ಘಟನೆ ಅಮಾನುಷವಾದದ್ದು. ಈ ಭಾಗದಲ್ಲಿ ಪದೇ ಪದೇ ಘಟನೆ ಈ ರೀತಿ ಆಗತ್ತಿವೆ. ಘಟನೆಯಾದ ಮೇಲೆ ಅಮಾನತ್ತು ಮಾಡಿದರೆ ಏನು ಉಪಯೋಗ. ಘಟನೆ ನಡೆಯದಂತೆ ಎಚ್ವತ್ತುಕೊಳ್ಳುವುದು ಮುಖ್ಯ. ಎಲ್ಲಾ ಮುಗಿದ ಮೇಲೆ ಅಮಾನತ್ತು ಮಾಡುವುದರಲ್ಲಿ ಯಾವ ಶೂರತ್ವವಿಲ್ಲ ಎಂದು ವಾಗ್ದಾಳಿ ನಡೆಸಿದರು.