ಮನೆ ಅಪರಾಧ ಸರ್ಕಾರಿ ಹಾಗೂ ಖಾಸಗಿ ಜಾಗ ಒತ್ತುವರಿ ಮಾಡಿ ಸಾರ್ವಜನಿಕ ತೆರಿಗೆ ಹಣದಲ್ಲಿ ಕಟ್ಟಡ ನಿರ್ಮಾಣ:  ಶಿವಮೂರ್ತಿ...

ಸರ್ಕಾರಿ ಹಾಗೂ ಖಾಸಗಿ ಜಾಗ ಒತ್ತುವರಿ ಮಾಡಿ ಸಾರ್ವಜನಿಕ ತೆರಿಗೆ ಹಣದಲ್ಲಿ ಕಟ್ಟಡ ನಿರ್ಮಾಣ:  ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ

0

ನಂಜನಗೂಡು:  ಪಟ್ಟಣದ ಗೌರಿ ಘಟ್ಟದ ಬೀದಿಯಲ್ಲಿ ಇರುವ ಹೋನ್ನಲಗೇರಿ ಮಠದ ಸ್ವಾಮೀಜಿಗಳಾದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಂಬುವವರು ತಮ್ಮ ಸ್ವಾರ್ಥಕ್ಕಾಗಿ ಬಡ ಜಿ.ಪಿ.ನಾಗಚಂದ್ರ ಮೂರ್ತಿ ಎಂಬುವವರ ಖಾಸಗಿ ಜಾಗ ಹಾಗೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೇ ಮುಜರಾಯಿ ಇಲಾಖೆಯ ಅನುದಾನವನ್ನು ಕಾನೂನು ಬಾಹಿರವಾಗಿ ಗ್ಯಾಂಟ್‌  ಮಾಡಿಸಿಕೊಂಡು ಅಕ್ರಮವಾಗಿ ದೌರ್ಜನ್ಯದಿಂದ ಕಾಂಪೌಂಡ್ ಕಟ್ಟುತ್ತಿದ್ದಾರೆ.

ಈ ಬಗ್ಗೆ ನಾಗಚಂದ್ರ ಮೂರ್ತಿ ಅವರು ಸಂಬಂದಪಟ್ಟ ಕಂದಾಯ ಇಲಾಖೆ ಮತ್ತು ನಗರಸಭೆ ಇಲಾಖೆ ಅವರಿಗೆ ಲಿಖಿತ ದೂರು ನೀಡಿ, ನನಗೆ ಸೇರಬೇಕಾದ ಜಾಗವನ್ನು ಅಳತೆ ಮಾಡಿಸಿ ಸರ್ಕಾರಿ ಜಾಗದಲ್ಲಿ ಅದರಲ್ಲೂ ಸರ್ವೆ ನಂಬರ್ ಜಾಗದಲ್ಲಿ ಡಿ.ಸಿ. ಕನ್ ವರ್ಸಸ್ ಆಗದೇ ಹಾಗೂ ನಗರಸಭೆ ವತಿಯಿಂದ ಅಸ್ಸ್ಮೆಂಟ್ ಮತ್ತು ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡುವುದನ್ನು ನಿಲ್ಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ದೂರಿನ ಹಿನ್ನಲೆ  ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಗೆ ನೋಟೀಸ್ ನೀಡಲಾಗಿದೆ. ಆದರೆ ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ಕೊಡದೇ ಸ್ವಾಮೀಜಿಗಳು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.

ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ತಹಸೀಲ್ದಾರ್ ಹಾಗೂ ನಗರಸಭೆ ಅಧಿಕಾರಿಗಳು ಈ ಅನಧಿಕೃತ ಕಟ್ಟಡ ನಿರ್ಮಾಣವನ್ನು ತಕ್ಷಣ ನಿಲ್ಲಿಸುವಂತೆ ಹೇಳಿದ್ದರು ಕಟ್ಟಡ ನಿರ್ಮಾಣ ಆಗುತ್ತಿದೆ. ಈ ಬಗ್ಗೆ ನಂಜನಗೂಡಿನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲೂ ನಾಗಚಂದ್ರ ಮೂರ್ತಿ ಅವರು ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅನಧಿಕೃತ ಕಟ್ಟಡವನ್ನು ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯದೇ ಹಾಗೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅದು ಹೇಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದೀರಿ ಎಂದು ಸ್ವಾಮೀಜಿ ಅವರನ್ನು ಪ್ರಶ್ನಿಸಿದ್ದು, ಇಂದು ಈ ಅನಧಿಕೃತ ಕಟ್ಟಡಕ್ಕೆ ತಡೆಯಾಜ್ಞೆ ನೀಡುವ ಸಾಧ್ಯತೆ ಇದೆ.

ಈ ಬಗ್ಗೆ ನಗರ್ಲೆ ಎಂ ವಿಜಯಕುಮಾರ್ ಮಾತನಾಡಿ, ಸರ್ಕಾರಿ ಹಾಗೂ ಖಾಸಗಿ  ಅವರ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕ ತೆರಿಗೆ ಹಣದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಹಾಗೂ ಇವರಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಕ್ರಮ ಬದ್ದ ಅಳತೆ ನಡೆಸಿ ನೊಂದ ನಾಗಚಂದ್ರ ಮೂರ್ತಿ ಅವರಿಗೆ ನ್ಯಾಯ ಕೊಡಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಒಂದು ವೇಳೆ ಕ್ರಮ ಕೈಗೊಳ್ಳದೇ ಇದ್ದರೆ ನೊಂದ ಜನರ ಜೊತೆಗೂಡಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.