ಮನೆ ಸ್ಥಳೀಯ ವಿಕಸಿತ ಭಾರತ ಸಂಕಲ್ಪ ಯಾತ್ರೆ: ಪ್ರತಿ ಮನೆಬಾಗಿಲಿಗೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯ- ಟಿ.ಎಸ್. ಶ್ರೀ...

ವಿಕಸಿತ ಭಾರತ ಸಂಕಲ್ಪ ಯಾತ್ರೆ: ಪ್ರತಿ ಮನೆಬಾಗಿಲಿಗೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯ- ಟಿ.ಎಸ್. ಶ್ರೀ ವತ್ಸ

0

ಮೈಸೂರು: ಇಂದು ಕೃಷ್ಣ ರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಮೈಸೂರು ನಗರದ ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು..

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶ್ರೀ ವತ್ಸ ಮಾತನಾಡಿ,  ಪ್ರತಿ ಮನೆಬಾಗಿಲಿಗೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯ ತಲುಪಲಿದ್ದು, ಕೈ ಸಾಲ ಮುಕ್ತಮಾಡಿ ಬ್ಯಾಂಕ್ ಸಾಲ ಪಡೆಯಿರಿ ಎಂದರು.

ಕೇಂದ್ರ ಸರ್ಕಾರದ ಯೋಜನೆ ಯಾವುದೇ ಒಂದು ಜಾತಿಗಾಗಿ,ಒಂದು ಧರ್ಮ ಕ್ಕಾಗಿ, ಒಂದು ವರ್ಗಕ್ಕಾಗಿ ಅಲ್ಲ ಇದು ಸಬ್ ಕಾ ಸಾಥ್,ಸಬ್ ಕಾ ವಿಶ್ವಾಸ್,ಸಬ್ ಕಾ ವಿಕಾಸ್,ಜನಸಾಮಾನ್ಯರು ಜೀರೊ ಅಕೌಂಟ್ ನಲ್ಲಿ ಬ್ಯಾಂಕ್ ನಲ್ಲಿ ಖಾತೆ ಮಾಡಿಸುವ ಮೂಲಕ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಯಾವುದೇ ಮಧ್ಯವರ್ತಿ ಗಳನ್ನು ದೂರ ಇಡಲು ಮಾಡಿರುವ ಕಲ್ಪನೆ, ಇಡಿ ವಿಶ್ವದಲ್ಲಿ ಕರೋನ ಸಂಧರ್ಭದಲ್ಲಿ ಉಚಿತವಾಗಿ ವ್ಯಾಕ್ಸಿನೇಷನ್‌ ನೀಡಿದ ಕೀರ್ತಿ ನರೇಂದ್ರ ಮೋದಿ ಯವರಿಗೆ ಸಲ್ಲುತ್ತದೆ, ಇದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಮಹಿಳೆಯರು ಓಲೆ ಹಚ್ಚಿ ಅಡಿಗೆ ಮಾಡುವುದನ್ನು ನಿಲ್ಲಿಸಿ ಇಂದು ಪ್ರಧಾನಮಂತ್ರಿ ಉಜ್ಜ್ವಲ ಯೋಜನೆ ಪ್ರತಿ ಮಹಿಳೆಯರಿಗೆ ತಲುಪಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ,ಇನ್ನೂ ರಸ್ತೆ ಬದಿ ವ್ಯಾಪಾರ, ಕೂಲಿ ಕಾರ್ಮಿಕರು,ರೈತರು, ಎಲ್ಲ ವರ್ಗದವರು ಸಾಲ ಪಡೆದು ಅದನ್ನು ವ್ಯವಸ್ಥಿತವಾಗಿ ವಾಪಸು ಮಾಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು

ಈ ಸಂಧರ್ಭದಲ್ಲಿ ಎಸ್. ಬಿ.ಐ.ಬ್ಯಾಂಕ್ ಮ್ಯಾನೇಜರ್ ಮಂಜುಳ ಭಟ್,ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಮ್ಯಾನೇಜರ್ ಶಂಕರ್ ನಾರಾಯಣ್,ವಲಯ ಆಯುಕ್ತ ಮಂಜುನಾಥ್ ರೆಡ್ಡಿ, ಮಾಜಿ ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್,ಸೌಮ್ಯ ಉಮೇಶ್,ಮುಂತಾದವರು ಇದ್ದರು.