ಮನೆ ರಾಜ್ಯ ರಾಜಧಾನಿಯಲ್ಲಿ ಇನ್ನು 3 ದಿನ ಮಳೆ ಸಾಧ್ಯತೆ

ರಾಜಧಾನಿಯಲ್ಲಿ ಇನ್ನು 3 ದಿನ ಮಳೆ ಸಾಧ್ಯತೆ

0

ಬೆಂಗಳೂರು (Bengaluru)- ರಾಜಧಾನಿಯಲ್ಲಿಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿಯಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಅವಧಿಯಲ್ಲಿ ಮಳೆಯಾಗುತ್ತಿದೆ. ಬುಧವಾರ ನಗರದ ಬಹುತೇಕ ಕಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಚಾಮರಾಜಪೇಟೆ, ವಿದ್ಯಾಪೀಠ, ಮಲ್ಲೇಶ್ವರಂ, ಯಶವಂತಪುರ, ಯಲಹಂಕ, ನಾಗರಬಾವಿ, ಕೆ.ಆರ್‌.ಪುರಂ, ಜ್ಞಾನಭಾರತಿ, ವರ್ತೂರು, ಬೆಳ್ಳಂದೂರು, ವಿದ್ಯಾರಣ್ಯಪುರ, ನಾಗಪುರ, ಹಂಪಿನಗರ, ಆರ್‌ಆರ್‌ ನಗರ, ಕೋನೇನ ಅಗ್ರಹಾರ ಸೇರಿದಂತೆ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ.

ಹೆಚ್ಚು ಮಳೆಯಾದ ಪ್ರದೇಶಗಳು

ಸಿಂಗಸಂದ್ರ 40.5 ಮಿ.ಮೀ, ಗೊಟ್ಟಿಗೆರೆ 43 ಮಿ.ಮೀ, ಅಂಜನಾಪುರ 32.5 ಮಿ.ಮೀ, ಹೆಮ್ಮಿಗೆಪುರ 18.5 ಮಿ.ಮೀ, ಬೇಗೂರು 44 ಮಿ.ಮೀ, ವಿದ್ಯಾಪೀಠ 31 ಮಿ.ಮೀ, ಸಾರಕ್ಕಿ 38 ಮಿ.ಮೀ, ಬಿಧಿಳೇಕಹಳ್ಳಿ 40 ಮಿ.ಮೀ, ಅರಕೆರೆ 40 ಮಿ.ಮೀ, ದೊರೆಸಾನಿಪಾಳ್ಯ 50 ಮಿ.ಮೀ. ಮಳೆಯಾಗಿದೆ.

ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆ

ಕೊಟ್ಟಿಗೆಹಾರ ಸುತ್ತಮುತ್ತ ಬುಧವಾರ ಆಲಿಕಲ್ಲು ಸಹಿತ ಭಾರಿ ಗಾಳಿ ಮಳೆಯಾಗಿದೆ. ಕೊಟ್ಟಿಗೆಹಾರ, ಬಣಕಲ್‌, ತರುವೆ, ಅತ್ತಿಗೆರೆ, ಚಾರ್ಮಾಡಿ ಘಾಟ್‌ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಕೊಟ್ಟಿಗೆಹಾರದ ಕೆಲವು ಅಂಗಡಿ ಮುಂಗಟ್ಟುಗಳ ಚಾವಣಿಗೆ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದಾಗಿ ಕಾಫಿಮಿಡಿಗೆ ಹಾನಿಯಾಗುವ ಸಾಧ್ಯತೆ ಇದೆ.