ಮನೆ ಸುದ್ದಿ ಜಾಲ ಕೇಕ್ ಕತ್ತರಿಸುವಾಗ ಎಡವಟ್ಟು: ರಣಬೀರ್ ಕಪೂರ್ ವಿರುದ್ಧ ದೂರು ದಾಖಲು

ಕೇಕ್ ಕತ್ತರಿಸುವಾಗ ಎಡವಟ್ಟು: ರಣಬೀರ್ ಕಪೂರ್ ವಿರುದ್ಧ ದೂರು ದಾಖಲು

0

ಕ್ರಿಸ್‌ಮಸ್ ಹಬ್ಬವನ್ನು ಪ್ರತಿ ವರ್ಷ ಇಡೀ ಕುಟುಂಬವು ಕ್ರಿಸ್‌ಮಸ್ ಹಬ್ಬವನ್ನು ಒಟ್ಟಾಗಿ ಆಚರಿಸುತ್ತದೆ. ಈ ಸಮಯದಲ್ಲಿ ಕುಟುಂಬದ ಪ್ರತಿಯೊಬ್ಬರೂ ಭಾಗವಹಿಸಿ ಕ್ರಿಸ್​​ಮಸ್ ಹಬ್ಬವನ್ನು ಆಚರಿಸುತ್ತಾರೆ.

ಈ ಬಾರಿಯೂ ರಣಬೀರ್ ಕಪೂರ್, ಆಲಿಯಾ ಭಟ್ ಮೊದಲಾದವರು ಭಾಗಿ ಆಗಿದ್ದಾರೆ. ಈ ಮಧ್ಯೆ  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ರಣಬೀರ್ ಕಪೂರ್ ವಿರುದ್ಧ ಕೇಸ್ ದಾಖಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ.

ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್ ಮೊಮ್ಮೊಗಳು ನವ್ಯಾ ನಂದಾ ನವೇಲಿ, ರಹಾ ಕಪೂರ್, ಅಗಸ್ತ್ಯ ನಂದಾ, ನಿಖಿಲ್ ನಂದಾ, ಕರಿಷ್ಮಾ ಕಪೂರ್, ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್, ರಣಧೀರ್ ಕಪೂರ್, ರೀಮಾ ಜೈನ್, ನೀಲಾ ದೇವಿ, ಬಬಿತಾ ಕಪೂರ್ ಪಾರ್ಟಿಯಲ್ಲಿ ಇದ್ದರು. ಈ ವೇಳೆ ರಣಬೀರ್ ಕಪೂರ್ ಮಾಡಿದ ಒಂದು ತಪ್ಪಿನಿಂದ ತೊಂದರೆ ಅನುಭವಿಸಿದ್ದಾರೆ.

ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಮುಂಬೈನ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ. ವೈರಲ್ ಆಗಿರುವ ವೀಡಿಯೋ ಆಧರಿಸಿ ರಣಬೀರ್ ಮತ್ತು ಕಪೂರ್ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 295, 509 ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಕಪೂರ್ ಕುಟುಂಬ ಕೇಕ್ ಕತ್ತರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಣಬೀರ್ ಕಪೂರ್ ಕೇಕ್ ಮೇಲೆ ಮದ್ಯ ಸುರಿಯುತ್ತಾರೆ. ಆ ಬಳಿಕ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಈ ವೇಳೆ ರಣಬೀರ್ ಕಪೂರ್ ‘ಜೈ ಮಾತಾ ದಿ’ ಎಂದು ಹೇಳುತ್ತಿರುವುದು ಕಂಡುಬಂದಿದೆ. ಆ ಬಳಿಕ ಕುಟುಂಬದ ಇತರ ಸದಸ್ಯರು ಕೂಡ ‘ಜೈ ಮಾತಾ ದಿ’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು  ದೂರು ದಾಖಲಿಸಲಾಗಿದೆ.

ಮದ್ಯ ಬಳಕೆ ಮಾಡಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೇರೆ ಧರ್ಮದವರ ಹಬ್ಬವನ್ನು ಆಚರಿಸುವಾಗ ಜೈ ಮಾತಾ ದಿ ಎಂದು ಹೇಳಲಾಗಿದೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಭಾವನೆಗಳನ್ನು ಅವಮಾನಿಸಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.