ಮನೆ ಸುದ್ದಿ ಜಾಲ ಸರ್ಕಾರ ಅಮಾನತು ನಿರ್ಧಾರ ಹಿಂಪಡೆಯದಿದ್ದರೆ ಕಾನೂನು ಮೊರೆ ಹೋಗುತ್ತೇವೆ: ಡಬ್ಲ್ಯುಎಫ್‌ಐ ಅಧ್ಯಕ್ಷಸಂಜಯ್ ಸಿಂಗ್

ಸರ್ಕಾರ ಅಮಾನತು ನಿರ್ಧಾರ ಹಿಂಪಡೆಯದಿದ್ದರೆ ಕಾನೂನು ಮೊರೆ ಹೋಗುತ್ತೇವೆ: ಡಬ್ಲ್ಯುಎಫ್‌ಐ ಅಧ್ಯಕ್ಷಸಂಜಯ್ ಸಿಂಗ್

0

ದೆಹಲಿ: ಹೊಸದಾಗಿ ಚುನಾಯಿತಗೊಂಡಿರುವ ಭಾರತೀಯ ಕುಸ್ತಿ ಫೆಡರೇಷನ್‌ ಅನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯವು “ಸರಿಯಾದ ಕಾರ್ಯವಿಧಾನ” ವನ್ನು ಅನುಸರಿಸಿಲ್ಲ ಎಂದು ಹೊಸದಾಗಿ ಚುನಾಯಿತ ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಗುರುವಾರ ಹೇಳಿದ್ದು ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದಿದ್ದಾರೆ. 

U-15 ಮತ್ತು U-20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳ ಘೋಷಣೆ ಸೇರಿದಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತನ್ನದೇ ಆದ ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ, ಅದರ ಚುನಾವಣೆಗಳು ನಡೆದ ಮೂರು ದಿನಗಳ ನಂತರ ಡಬ್ಲ್ಯುಎಫ್ಐ ಅನ್ನು ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ. ಆದಾಗ್ಯೂ, ಡಬ್ಲ್ಯುಎಫ್‌ಐ ಹೇಳುವುದನ್ನು ಕೇಳದೆ ಅವರ “ಸ್ವಾಯತ್ತ” ಮತ್ತು “ಪ್ರಜಾಸತ್ತಾತ್ಮಕವಾಗಿ ಚುನಾಯಿತ” ಸಂಸ್ಥೆಯನ್ನು ಸರ್ಕಾರವು ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸಂಜಯ್ ಹೇಳಿದ್ದಾರೆ.

ನಾವು ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಗೆದ್ದಿದ್ದೇವೆ. ರಿಟರ್ನಿಂಗ್ ಆಫೀಸರ್ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದರು. ಐಒಎ ಮತ್ತು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಯಿಂದ ವೀಕ್ಷಕರು ಇದ್ದರು. 22 ರಾಜ್ಯ ಘಟಕಗಳು, 25 ರಾಜ್ಯ ಸಂಘಗಳಲ್ಲಿ ಮೂರು ಗೈರುಹಾಜರಿಯಾಗಿದ್ದು ಚುನಾವಣೆಯಲ್ಲಿ ಭಾಗವಹಿಸಿದ್ದವು, 47 ಮತಗಳು ಚಲಾವಣೆಯಾದವು, ಅದರಲ್ಲಿ ನನಗೆ 40 ಬಂದವು ಎಂದು ಪಿಟಿಐ ಜತೆ ಮಾತನಾಡಿದ ಸಂಜಯ್ ಸಿಂಗ್ ಹೇಳಿದ್ದಾರೆ.

ಇದೆಲ್ಲಾ ಆದ ನಂತರ, ನಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ನೀವು ಹೇಳಿದರೆ, ನಾವು ಅದನ್ನು ಸ್ವೀಕರಿಸಲು ಹೋಗುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯು ತನ್ನ ನಿಲುವನ್ನು ವಿವರಿಸಲು ಅವಕಾಶವನ್ನು ನೀಡಲಿಲ್ಲ, ಅದು ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಅರ್ಹವಾದ ನೆಲದ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಸಂಸ್ಥೆಗೆ ಮುಂದಿನ ದಾರಿ ಏನು ಎಂದು ಪ್ರಶ್ನಿಸಿದ ಅವರು, ಡಬ್ಲ್ಯುಎಫ್‌ಐ ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರವು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ, ನಾವು ಸರ್ಕಾರದೊಂದಿಗೆ ಮಾತನಾಡಲಿದ್ದೇವೆ. ಸರ್ಕಾರ ಅಮಾನತು ಹಿಂಪಡೆಯದಿದ್ದರೆ, ನಾವು ಕಾನೂನು ಅಭಿಪ್ರಾಯ ಪಡೆದು ನ್ಯಾಯಾಲಯಕ್ಕೆ ಹೋಗಲಿದ್ದೇವೆ. ಡಬ್ಲ್ಯುಎಫ್‌ಐ ಅಮಾನತಿನಲ್ಲಿರುವುದರಿಂದ, ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ದೈನಂದಿನ ವ್ಯವಹಾರಗಳನ್ನು ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬುಧವಾರ ರಚಿಸಿರುವ ಮೂರು ಸದಸ್ಯರ ತಾತ್ಕಾಲಿಕ ಸಮಿತಿಯನ್ನುನಾವು ಸ್ವೀಕರಿಸುವುದಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಒಲಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಅವರನ್ನು ಹರ್ಯಾಣ ಅಖಾಡಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭೇಟಿ ಮಾಡಿದ್ದಾರೆ. ಆದಾಗ್ಯೂ ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಐದು ತಿಂಗಳ ಕಾಲ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೂವರ ನಿಲುವು ಈಗ ಸ್ಪಷ್ಟವಾಗಿದೆ ಎಂದಿದ್ದಾರೆ ಸಂಜಯ್ ಸಿಂಗ್.

ಅವರನ್ನು ಕಾಂಗ್ರೆಸ್, ಟೂಲ್ ಕಿಟ್ ಗ್ಯಾಂಗ್ ಮತ್ತು ಎಡ ಪಕ್ಷಗಳು ಬೆಂಬಲಿಸುತ್ತಿವೆ ಎಂಬುದು ಸ್ಪಷ್ಟವಾಗಿದೆ. ಈ ಮೂವರು ಈ ರಾಜಕೀಯ ಪಕ್ಷಗಳ ಮಡಿಲಲ್ಲಿ ಆಡುತ್ತಿದ್ದಾರೆ. ಈ ಮೂವರನ್ನು ಹೊರತುಪಡಿಸಿ WFI ಅನ್ನು ವಿರೋಧಿಸುವ ಯಾವುದೇ ನಾಲ್ಕನೇ ಕುಸ್ತಿಪಟುವನ್ನು ದಯವಿಟ್ಟು ನನಗೆ ತಿಳಿಸಿ. ಈ ಮೂವರು ಜೂನಿಯರ್ ಕುಸ್ತಿಪಟುಗಳು ಪ್ರಗತಿ ಹೊಂದಲು ಬಯಸುವುದಿಲ್ಲ, ಅವರು ಜೂನಿಯರ್ ಕುಸ್ತಿಪಟುಗಳ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಾರೆ.

ಜಗರಂಗ್ ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸದೆ ಹೋಗಿದ್ದರು ಮತ್ತು ಅವರು 10-0 ಸೋಲಿನೊಂದಿಗೆ ಹಿಂತಿರುಗಿದರು. ಅವರು ಕುಸ್ತಿಯಲ್ಲಿದ್ದಾರೆ, ಅವರು ರಾಜಕೀಯದಲ್ಲಿದ್ದಾರೆ. ನಿಮಗೆ ಕುಸ್ತಿ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಮುಂದೆ ಬನ್ನಿ. ನಿಮಗೆ ದಾರಿ ಸ್ಪಷ್ಟವಾಗಿದೆ. ಆದರೆ ನೀವು ರಾಜಕೀಯ ಮಾಡಲು ಬಯಸಿದರೆ, ದಯವಿಟ್ಟು ಅದನ್ನು ಮುಕ್ತವಾಗಿ ಮಾಡಿ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಪ್ರತಿಭಟನೆ ವ್ಯಕ್ತಪಡಿಸಿ ತಮ್ಮ ಪದ್ಮಶ್ರೀಯನ್ನು ಸರ್ಕಾರಕ್ಕೆ ಹಿಂದಿರುಗಿಸಲು ನಿರ್ಧರಿಸಿ ಅದನ್ನು ರಸ್ತೆಯಲ್ಲೇ ಬಿಟ್ಟಿದ್ದಕ್ಕಾಗಿ ಬಜರಂಗ್ ಪೂನಿಯಾ ವಿರುದ್ಧ ಕಿಡಿಕಾರಿದ ಸಿಂಗ್, ಇದು ವೈಯಕ್ತಿಕ ವಿಷಯವಾಗಿರಬಹುದು, ಆದರೆ ದೇಶದ ಭಾವನೆಗಳು ಖೇಲ್ ರತ್ನದಲ್ಲಿ ಸಂಬಂಧಿಸಿವೆ, ಇದು ಒಬ್ಬ ವ್ಯಕ್ತಿಗೆ ಅಲ್ಲ, ಆದರೆ ಇಡೀ ಸಮಾಜಕ್ಕೆ ಸೇರಿದೆ. ಪದ್ಮಶ್ರೀ ಎಂಬುದು ರಸ್ತೆಗೆ ಹಾಕಬೇಕಾದ ವಿಷಯವಲ್ಲ ಎಂದು ಹೇಳಿದ್ದಾರೆ.