ಮನೆ ಸುದ್ದಿ ಜಾಲ ಕಂಪನಿಯ 1 ಕೋಟಿ ರುಪಾಯಿ ಲಪಟಾಯಿಸಿ ವಂಚನೆ: ಇಂಜಿನಿಯರಿಂಗ್ ಪದವೀಧರ ಸಂತೋಷ್ ರಾವ್ ಬಂಧನ

ಕಂಪನಿಯ 1 ಕೋಟಿ ರುಪಾಯಿ ಲಪಟಾಯಿಸಿ ವಂಚನೆ: ಇಂಜಿನಿಯರಿಂಗ್ ಪದವೀಧರ ಸಂತೋಷ್ ರಾವ್ ಬಂಧನ

0

ಬೆಂಗಳೂರು: ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಸಚಿವರ ಆಪ್ತ ಸಹಾಯಕನ  ಸೋಗಿನಲ್ಲಿ ಸ್ಟಾರ್ಟ್‌ಅಪ್ ಹೂಡಿಕೆದಾರರಿಗೆ ಹಾಗೂ ನಂದಿನಿ ಲೇಔಟ್‌ನ ಸಾಫ್ಟ್‌ವೇರ್ ಕಂಪನಿಯೊಂದರ ಪಾಲುದಾರನಿಗೆ ವಂಚಿಸಿದ್ದ ಇಂಜಿನಿಯರಿಂಗ್ ಪದವೀಧರನೊಬ್ಬನನ್ನು ಮಹಾಲಕ್ಷ್ಮೀಪುರಂ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತನನ್ನು ಸಂತೋಷ್ ರಾವ್ ಎಂದು ಗುರ್ತಿಸಲಾಗಿದೆ. ತಮಗೆ ರೂ.1 ಕೋಟಿ ರುಪಾಯಿ ವಂಚನೆ ಮಾಡಲಾಗಿದೆ ಎಂದು ಬಸವನಗುಡಿಯ 36 ವರ್ಷದ ನಿಖಿಲ್ ಕಶ್ಯಪ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.

ಕಶ್ಯಪ್, ಮತ್ತೊಬ್ಬ ವ್ಯಕ್ತಿ ಹಾಗೂ ಆರೋಪಿ ರಾವ್ ಈ ಕಂಪನಿಗೆ ನಿರ್ದೇಶಕರಾಗಿದ್ದು, ಕಶ್ಯಪ್ ಅವರು ಕಂಪನಿಗಾಗಿ ಸುಮಾರು 1.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ, ಆದರೆ, ಆರೋಪಿ ರಾವ್ ಯಾವುದೇ ಹೂಡಿಕೆ ಮಾಡದೇ ಇದ್ದರೂ ಕಂಪನಿಗೆ ನಿರ್ದೇಶನಕನಾಗಿ, ಹಣಕಾಸು ನಿರ್ವಹಣೆ ನೋಡಿಕೊಳ್ಳುತ್ತಿದ್ದ.

ದೂರುದಾರ ಕಶ್ಯಪ್ ರಾವ್ ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ 2019 ರಲ್ಲಿ ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿರುವ ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದ ಹಿಂದೆ ಸಾಫ್ಟ್‌ವೇರ್ ಕಂಪನಿಯನ್ನು ನಡೆಸಲಾಗುತ್ತಿತ್ತು. ಇದರಂತೆ ಕಂಪನಿಗೆ ಸೇರಿದ ಹಣವನ್ನು ತಂದೆ ಹಾಗೂ ಮಾವನ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಅಲ್ಲದೆ, ಮತ್ತಿಕೆರೆಯಲ್ಲಿ ಫ್ಲ್ಯಾಟ್ ವೊಂದನ್ನು ಖರೀದಿ ಮಾಡಿದ್ದಾನೆಂದು ಕಶ್ಯಪ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ದೂರುದಾರ ನಿಖಿಲ್ ಕಶ್ಯಪ್ ಅವರಿಗೆ ಆರೋಪಿ ಸುಮಾರು ರೂ,1 ಕೋಟಿ ರುಪಾಯಿಯವರೆಗೂ ವಂಚಿಸಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ, ಆರೋಪಿ ನಾನು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಆಪ್ತ ಸಹಾಯಕನೆಂದು ಹೇಳಿಕೊಂಡು ಹವರಿಗೆ ವಂಚಿಸಿರುವುದೂ ಕೂಡ ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಸಂತೋಷ್ ರಾವ್ ನೀಡುತ್ತಿದ್ದ ಸ್ಥಳಗಳಲೆಲ್ಲಾ ಈತನಿಗೆ ವಿಐಪಿ ರೀತಿ ನಡೆಸಿಕೊಳ್ಳಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಕಾರ್ಯಕ್ರಮಗಳಿಗೆ ಈತನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತಿದ್ದ ಜನರು, ಈತನಿಗೆ ಸನ್ಮಾನ ಮಾಡುತ್ತಿದ್ದರು. ಸ್ಟಾರ್ಟಪ್ ಗಳಿಗೆ ಸರ್ಕಾರದಿಂದ ಬೆಂಬಲ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದೆ ಎನ್ನಲಾಗಿದೆ. ಇದೀಗ ಸಂತೋಷ್ ರಾವ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.