ಮನೆ ಸುದ್ದಿ ಜಾಲ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾಳಿಯಲ್ಲಿದ್ದ ಮಹಿಳೆ ನಾಪತ್ತೆ: ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ...

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾಳಿಯಲ್ಲಿದ್ದ ಮಹಿಳೆ ನಾಪತ್ತೆ: ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ನಾಲ್ಕನೇ ‘ ಮಿಸ್ಸಿಂಗ್ ’ ಎಫ್‌ಐಆರ್

0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ.

ಈ ಸಂಬಂಧ ಆಕೆಯ ಸಹೋದರ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ತುಮಕೂರು ಮೂಲದ ನೇತ್ರಾ ಅವರು ವಿಟ್ ಕ್ಯಾಬ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಹುಣಸಮಾರನಹಳ್ಳಿಯ ‘ಯಮುನಾ’ ಪಿಜಿ ವಸತಿಗೃಹದಲ್ಲಿ ವಾಸಿಸುತ್ತಿದ್ದರು.

ಆಕೆ  ಪ್ರತಿದಿನ ತನ್ನ ಕುಟುಂಬಕ್ಕೆ ಕರೆ ಮಾಡಿ ಮಾತನಾಡುತ್ತಿದ್ದಳು. ಡಿಸೆಂಬರ್ 29 ರಂದು, ಅವಳು ಮಧ್ಯಾಹ್ನ ಕರೆ ಮಾಡಿ, ಆ ದಿನ ರಾತ್ರಿ ಡ್ಯೂಟಿಯಲ್ಲಿರುವುದಾಗಿ ತಿಳಿಸಿದಳು. ಡಿಸೆಂಬರ್ 30 ರಿಂದ, ಆಕೆಯ ಕುಟುಂಬವು ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಮನೆಯವರು ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಮೊಬೈಲ್ ಚಾರ್ಜ್ ಮುಗಿದಿರಬೇಕು ಎಂದು ಅವರು ಭಾವಿಸಿದರು. ಅವರು ಡಿಸೆಂಬರ್ 31 ರಂದು ಆಕೆಗೆ ಮತ್ತೆ ಕರೆ ಮಾಡಿದಾಗಲೂ ಫೋನ್ ಸ್ವಿಚ್ ಆಫ್ ಎಂದು ಬಂತು. ಇದರಿಂದ ಅವರು ಚಿಂತೆಗೊಳಗಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೇತ್ರಾ ಅವರ ಸಹೋದರ ಮಹೇಶ್ ಕುಮಾರ್ ಜನವರಿ 2 ರಂದು WIT ಗೆ ಭೇಟಿ ನೀಡಿ ಏನಾಯಿತು ಎಂದು ಪರಿಶೀಲಿಸಲಾಗಿ ನೇತ್ರಾ ರಾತ್ರಿ ಪಾಳಿ ಮುಗಿಸಿ ಡಿಸೆಂಬರ್ 29 ರಂದು ಬೆಳಿಗ್ಗೆ 6 ಗಂಟೆಗೆ ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅವರು ಆಕೆಯ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಮಾತನಾಡಿ ವಿಚಾರಿಸಿದ್ದಾರೆ, ಆದರೆ ಆಕೆ ಎಲ್ಲಿದ್ದಾಳೆಂದು ಯಾರಿಗೂ ತಿಳಿದಿರಲಿಲ್ಲ. ಕುಮಾರ್ ಅವರು ಈ ಕುರಿತು ‘ ಮಿಸ್ಸಿಂಗ್ ’ ಎಂದು  ದೂರು ದಾಖಲಿಸಿದ್ದಾರೆ.

ಒಂದು ತಿಂಗಳೊಳಗೆ ಮಹಿಳೆ ನಾಪತ್ತೆಯಾಗಿರುವ ಎರಡನೇ ಪ್ರಕರಣ ಇದಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ನಾಲ್ಕನೇ ನಾಪತ್ತೆ ಎಫ್‌ಐಆರ್ ದಾಖಲಾಗಿದೆ. ಡಿಸೆಂಬರ್ 3, 2023 ರಂದು, ಇಂಡಿಗೋದ ಕಾರ್ಗೋ ವಿಭಾಗದಲ್ಲಿ ಉದ್ಯೋಗಿಯಾಗಿದ್ದ 22 ವರ್ಷದ ಮಹಿಳೆಯ ತಾಯಿ,  ಪತ್ತೆಯಾಗದ ಕಾರಣ ಕೇಸ್ ದಾಖಲಿಸಿದರು.

ಡಿಸೆಂಬರ್ 4 ರಂದು, ಕೆಐಎಯಿಂದ ಬಿಹಾರಕ್ಕೆ  ಹೊರಟ ವ್ಯಕ್ತಿ ತನ್ನ ಗಮ್ಯಸ್ಥಾನವನ್ನು ತಲುಪಲಿಲ್ಲ ಮತ್ತು ವಿಮಾನ ನಿಲ್ದಾಣದೊಳಗೆ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 17, 2023 ರಂದು, ಉದ್ಯೋಗಕ್ಕಾಗಿ ದೆಹಲಿಯಿಂದ ವಿಮಾನದಲ್ಲಿ ಬಂದ ಕೇಶ ವಿನ್ಯಾಸಕಿ ಟರ್ಮಿನಲ್ 1 ರಿಂದ ಕಣ್ಮರೆಯಾಗಿದ್ದಾರೆ.