ಮನೆ ರಾಜ್ಯ ಲಾರಿ- ಬೊಲೆರೋ ವಾಹನಗಳ ನಡುವೆ ಅಪಘಾತ: ಓರ್ವ ಚಾಲಕ ಸಾವು

ಲಾರಿ- ಬೊಲೆರೋ ವಾಹನಗಳ ನಡುವೆ ಅಪಘಾತ: ಓರ್ವ ಚಾಲಕ ಸಾವು

0

ಯಲ್ಲಾಪುರ: ಮೀನು ಗಾಡಿ‌ ಲಾರಿ ಮತ್ತು ದಾಳಿಂಬೆ ಸಾಗಿಸುತ್ತಿದ್ದ ಬೊಲೆರೋ ವಾಹನಗಳ ನಡುವೆ ರಾಷ್ಟ್ರೀಯ ಹೆದ್ದಾರಿ 63 ಗೇರಗದ್ದೆ ಕ್ರಾಸ್ ಬಳಿ ಸೋಮವಾರ ಮುಸ್ಸಂಜೆ ಅಪಘಾತ ಸಂಭವಿಸಿದ್ದು, ಚಾಲಕ ಸಾವನ್ನಪ್ಪಿದ್ದಾನೆ.

ಯಲ್ಲಾಪುರ ಕಡೆಯಿಂದ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಅಂಕೋಲಾ ಕಡೆ ಹೊರಟಿದ್ದ ಬೊಲೆರೋ ಹಾಗೂ ಎದುರಿನಿಂದ ಬಂದ ಮೀನು ಗಾಡಿ ಕಂಟೈನರ್ ನಡುವೆ ಡಿಕ್ಕಿಯಾಗಿದೆ.

ಕಂಟೈನರ್ ಚಾಲಕ, ಆಂದ್ರಪ್ರದೇಶ ಮೂಲದ ಕೆ.ವಿ.ಸತ್ಯನಾರಾಯಣ ತೆಳ್ಳುವೂರು ಗಂಭೀರ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಕೆಲಕ್ಷಣದಲ್ಲಿ ಸಾವನ್ನಪ್ಪಿದ್ದಾರೆ.

ಪಿಕ್ ಅಪ್‌ ಬೊಲೆರೋ ಚಾಲಕ ಅಬ್ದುಲ್ ಅಜೀಜ್ ಮೋಹಿದ್ದಿನ್ಸಾಬ್ ದಖನಿ ಮಿಲತ್ ನಗರ ತಾಳಿಕೋಟಿ ಬೀಜಾಪುರ ವಿರುದ್ಧ ದೂರು ದಾಖಲಿಸಲಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದೆ. ದಾಳಿಂಬೆ ಹಣ್ಣುಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು, ಅದನ್ನು ಆರಿಸಲು ಸಾರ್ವಜನಿಕರು ಮುಗಿಬಿದ್ದ ದೃಶ್ಯಕಂಡುಬಂತು.