ಮನೆ ರಾಜ್ಯ ಮಗು ನಾಪತ್ತೆ ಪ್ರಕರಣ: ಪರಿಚಯಸ್ಥರ ಫೋಟೋ ನೀಡಿದ್ದ  ಮಹಿಳೆ- ಮಗು ಸುರಕ್ಷಿವಾಗಿದೆ, ಫೋಟೋ ಮಿಸ್ ಯೂಸ್...

ಮಗು ನಾಪತ್ತೆ ಪ್ರಕರಣ: ಪರಿಚಯಸ್ಥರ ಫೋಟೋ ನೀಡಿದ್ದ  ಮಹಿಳೆ- ಮಗು ಸುರಕ್ಷಿವಾಗಿದೆ, ಫೋಟೋ ಮಿಸ್ ಯೂಸ್ ಮಾಡಿದ್ದಾರೆ ಎಂದ ತಂದೆ

0

ಮಂಡ್ಯ: ಸಾರಿಗೆ ಬಸ್ ನಲ್ಲಿ ಏಳು ತಿಂಗಳ ಮಗು ನಾಪತ್ತೆ ಪ್ರಕರಣದ ತನಿಖೆಗೆ ಇಳಿದಿದ್ದ ಪೊಲೀಸರಿಗೆ ಶಾಕ್ ಆಗಿದೆ.

ಏಳು ತಿಂಗಳ ಗಂಡು ಮಗು ನಾಪತ್ತೆಯಾಗಿದೆ ಎಂದು ಟಿ ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ನಿವಾಸಿ ಸವಿತಾ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದಳು.

ಚನ್ನಪಟ್ಟಣದಿಂದ ಮಳವಳ್ಳಿಗೆ ಕೆಎಸ್‍ ಆರ್‍ ಟಿಸಿ ಬಸ್ ನಲ್ಲಿ ಬರುವಾಗ ಸೀಟ್ ನಲ್ಲಿ‌ ಕುಳಿತಿದ್ದ ಅಪರಿಚಿತ ಮಹಿಳೆಯ ಕೈಗೆ ಕೊಟ್ಟಿದ್ದೆ ಇಳಿಯುವಾಗ ಮಗು ಎತ್ತಿಕೊಂಡು ಹೋಗಿದ್ದಾಳೆ ಎಂದು ಸವಿತಾ ಮಳವಳ್ಳಿ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ನಡೆಸಿದಾಗ, ಬೇರೊಬ್ಬರ ಮಗುವಿನ ಫೋಟೊ ಕೊಟ್ಟು ಸವಿತಾ ದೂರು ನೀಡಿದ್ದಾಳೆ ಎಂಬುದು ಗೊತ್ತಾಗಿದೆ.  ಪರಿಚಯಸ್ಥರ ಮಗುವಿನ ಪೋಟೋವನ್ನೇ ಕೊಟ್ಟು ತನ್ನ ಮಗು ಕಳುವಾಗಿದೆ ಎಂದು ದೂರು ನೀಡಿದ್ದಾಳೆಂದು ತಿಳಿದುಬಂದಿದೆ.

ಮಳವಳ್ಳಿ ಪೊಲೀಸರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಮಗುವಿನ ಪೋಟೋ ನೋಡಿ ಪೊಲೀಸರಿಗೆ ಮಗುವಿನ ನಿಜವಾದ ತಂದೆ  ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಕುರಿತು ದೂರುದಾರೆ ಸವಿತಾಳ ವಿಚಾರಣೆಗೆ ಪೊಲೀಸರು ಮುಂದಾಗಿದ್ದು, ಈ ವೇಳೆ ಸವಿತಾ ಪಿಡ್ಸ್ ಬಂದ ಹಾಗೆ ನಟಿಸಿದ್ದಾಳೆ . ಕೂಡಲೇ ಸವಿತಾಳನ್ನು ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗುವಿನ ತಂದೆ ಹೇಳೋದೇನು ?

ಮಗು ತಂದೆ ದರ್ಶನ್ ಮಗುವಿನ ಬಗ್ಗೆ ಮಳವಳ್ಳಿ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ನನ್ನ ಮಗು ನನ್ನ ಬಳಿ ಸುರಕ್ಷಿತವಾಗಿದೆ. ನಮ್ಮ ಮಗುವಿನ ಫೋಟೊವನ್ನ ಮಿಸ್ ಯೂಸ್ ಮಾಡಿದ್ದಾರೆ. ಪಾಪು ಮಿಸ್ ಆಗಿರುವ ಬಗ್ಗೆ ವಾಟ್ಸಾಪ್ ಮೂಲಕ ಗೊತ್ತಾಯ್ತು. ಮಗು ನಾಪತ್ತೆಯಾದ ಫೋಟೊ ವೈರಲ್ ಬಗ್ಗೆ ಮಾಹಿತಿ ಕಲೆ ಹಾಕಿದೆ‌.  ಬಳಿಕ ಹಲಗೂರು ಪೊಲೀಸರ ಬಳಿ ವಿಚಾರಣೆ ಮಾಡಿದಾಗ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದರು

ಸವಿತಾ ನಮ್ಮ ಪತ್ನಿಯ ಊರು ಚನ್ನಪಟ್ಟಣ ತಾಲ್ಲೂಕಿನ ನೆರಲೂರು ಗ್ರಾಮದವರು.  ನನ್ನ ಪಾಪು ನನ್ನ ಮನೆಯಲ್ಲಿದೆ ಅವರ ಪಾಪು ಅಲ್ಲ. ಅವರಿಗೆ ಗಂಡ ತೀರಿಹೋಗಿದ್ದಾರೆ ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಅವರ ಮಕ್ಕಳನ್ನು ಸಹ ಸಂಪರ್ಕ ಮಾಡಿ ವಿಚಾರಿಸಿದ್ದೇನೆ. ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಈಗ ನಾಟವಾಡಿಕೊಂಡು ಆಸ್ಪತ್ರೆಯಲ್ಲಿದ್ದಾರೆ.  ಈ ಪ್ರಕರಣ ಸಂಬಂಧ ನಾನೂ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.