ಚಿಕ್ಕಮಗಳೂರು(Chikkamagaluru): ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಾಲ್ಲೂಕಿನ ಮಲ್ಲಂದೂರು ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದ ಪಿಎಸ್‌ಐ ರವೀಶ್ ಅವರಿಗೆ ವಾಪಸ್ ಹೋಗುವಂತೆ ಧಮ್ಕಿ ಹಾಕಿದ್ದಾರೆ. ಏಕವಚನದಲ್ಲೇ ಅಸಾಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ.
ಆಡಿಯೊದಲ್ಲಿನ ಸಂಭಾಷಣೆ ಇಂತಿದೆ.
ಕುಮಾರಸ್ವಾಮಿ: ಹಲೋ ಯಾರಪ್ಪ ಇದು ನಂಬರ್
ರವೀಶ್: ಸರ್, ನಾನು ರವೀಶ್ ಮಾತಾಡೋದು
ಕುಮಾರಸ್ವಾಮಿ: ಈಗ, ಎಲ್ಲಿದ್ದೀಯಾ?
ರವೀಶ್: ಸರ್, ಸ್ಟೇಷನ್‌ನಲ್ಲಿ ಇದ್ದೇನೆ
ಕುಮಾರಸ್ವಾಮಿ: ನೀನು ಬೇಡ ಎಂದು ನಿನ್ನೆ ನಾನು ಹೇಳಿದ್ದೆನಲ್ಲಾ
ರವೀಶ್:ಐಜಿ ಸಾಹೇಬ್ರು ಫೋನ್ ಮಾಡಿ ಚಾರ್ಜ್ ತೆಗೆದುಕೊಳ್ಳಲು ತಿಳಿಸಿದರು ಸಾರ್
ಕುಮಾರಸ್ವಾಮಿ: ನೀನು ಮರ್ಯಾದೆಯಿಂದ ವಾಪಸ್ ಹೋಗು, ಸ್ಟೇಷನಲ್ಲಿ ಇರಬೇಡ
ರವೀಶ್: ಸರ್
ಕುಮಾರಸ್ವಾಮಿ: ಮರ್ಯಾದೆಯಿಂದ ವಾಸಪ್ ಹೋಗಲೆ, ಹೇಳಿದ್ಹಂಗೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದ್ರೆ
ರವೀಶ್: ಸರ್, ಇಲ್ಲ ಅಲ್ಲಿಗೆ ಬರುತ್ತೇನಿ, ನಿಮ್ಮ ಹತ್ತಿರ ಬರುತ್ತೇನೆ
ಕುಮಾರಸ್ವಾಮಿ: ಮರ್ಯಾದೆಯಿಂದ ವಾಪಸ್ ಹೋಗು, ಬಂದ್ ದಾರಿಯಲ್ಲಿ ಹೋಗು, ಇಲ್ಲದಿದ್ದರೆ ನಾಳೆಗೆ ಡೆಪ್ಯುಟೆಷನ್ ಮಾಡಿಸುತ್ತೀನಿ ನೋಡು, ಇಲ್ಲಿ ನಡೆಯಲ್ಲ
ರವೀಶ್: ಸರ್
ಕುಮಾರಸ್ವಾಮಿ: ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ, ನನಗೆ ಗೊತ್ತಿಲ್ವಾ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದೀಯಾ ಅಂತ
ರವೀಶ್:: ಸರ್, ಇಲ್ಲ ಆ ಥರಾ ಏನಿಲ್ಲ ಸರ್, ನಾನೇನು ಕೊಟ್ಟಿಲ್ಲ. ಅವರೇ ಫೋನ್ ಮಾಡಿ ಹೇಳಿದರು
ಕುಮಾರಸ್ವಾಮಿ: ಮರ್ಯಾದೆಯಾಗಿ ಬಂದ ದಾರಿಯಲ್ಲಿ ಹೋಗು
ರವೀಶ್: ಸರ್, ನಾಳೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ
ಕುಮಾರಸ್ವಾಮಿ: ಯಾವನು ಐಜಿ, ಐಜಿಯಲ್ಲ ಮೂಡಿಗೆರೆ ನೋಡೋರು,
ರವೀಶ್: ಸರ್, ನಾಳೆ ಬರುತ್ತೇನೆ
ಕುಮಾರಸ್ವಾಮಿ: ಐಜಿ ಅವನಿಗೆ ಹೇಳು
ರವೀಶ್: ಸರಿ ಸರ್, ನಾಳೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ
ಕುಮಾರಸ್ವಾಮಿ: ಹೋಗಲೆ ನೀನ ಬರಬೇಡ, ಬಂದ್ರೆ ಒದ್ದು ಓಡಿಸುತ್ತೇನೆ
ರವೀಶ್: ನಾಳೆ ಬಂದು ಭೇಟಿಯಾಗುತ್ತೇನೆ ಸರ್
ಕುಮಾರಸ್ವಾಮಿ: ಮರ್ಯಾದೆಯಿಂದ ಹೋಗು