ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ನಡೆದಿದೆ.
ಮಹೇಶ್ (40) ಉಮೇಶ್ (40) ಮೃತರು.
ಮುಂಜಾನೆ ತುಮಕೂರು ಕಡೆಯಿಂದ ಶಿರಾಗೆ ಹೋಗುತ್ತಿರುವಾಗ ಕಾರು ಟೈರ್ ಪಂಚರ್ ಆಗಿದ್ದು, ಪಂಚರ್ ಹಾಕುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರು ಬೆಂಗಳೂರಿನ ಆವಲಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube