ಮನೆ ರಾಷ್ಟ್ರೀಯ ಜಮ್ಮು ಮತ್ತು ಕಾಶ್ಮೀರದಲ್ಲಿ 3.6 ತೀವ್ರತೆಯ ಭೂಕಂಪ

ಜಮ್ಮು ಮತ್ತು ಕಾಶ್ಮೀರದಲ್ಲಿ 3.6 ತೀವ್ರತೆಯ ಭೂಕಂಪ

0

ಜಮ್ಮು ಮತ್ತು ಕಾಶ್ಮೀರ: ಜಮ್ಮು ಕಾಶ್ಮೀರದ ಕಿಶ್ತ್ವಾರದಲ್ಲಿ ಬೆಳಗ್ಗೆ 8.43ರ ಸುಮಾರಿಗೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಈ ಭೂಕಂಪದಲ್ಲಿ ಇದುವರೆಗೆ ಯಾವುದೇ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಭೂಕಂಪನದಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿರುವುದು ಕಂಡು ಬಂದಿದೆ.

ಈ ಭೂಕಂಪದ ಆಳವನ್ನು 5 ಕಿಲೋಮೀಟರ್ ಎಂದು ಅಳೆಯಲಾಗಿದೆ. ಚೀನಾದ ಜಿಜಾಂಗ್ ಪ್ರಾಂತ್ಯದಲ್ಲೂ ಬೆಳಗ್ಗೆ ಏಳು ಗಂಟೆಗೆ ಭೂಕಂಪನದ ಅನುಭವವಾಗಿದೆ. ಆ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.7 ಎಂದು ಅಳೆಯಲಾಗಿದೆ. ಸೋಮವಾರ ಸಂಜೆ ಅಸ್ಸಾಂನಲ್ಲಿ 3.6 ತೀವ್ರತೆಯ ಭೂಕಂಪನದ ಅನುಭವವಾಗಿದೆ.

ಇದರ ಕೇಂದ್ರಬಿಂದುವು ಬ್ರಹ್ಮಪುತ್ರದ ದಕ್ಷಿಣ ದಂಡೆಯಲ್ಲಿರುವ ಪೂರ್ವ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭೂಮಿಯಿಂದ 23 ಕಿಮೀ ಆಳದಲ್ಲಿದೆ.

ಪಶ್ಚಿಮ ಕರ್ಬಿ ಆಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್ ಮತ್ತು ನಾಗಾವ್ ಜಿಲ್ಲೆಗಳಲ್ಲಿ ಕೂಡ ಕಂಪನದ ಅನುಭವವಾಗಿದೆ. ನಾಗಾಲ್ಯಾಂಡ್ ಮತ್ತು ಮಣಿಪುರದ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.