ಮನೆ ರಾಜ್ಯ ಡಿವೈಎಫ್ ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಉಳ್ಳಾಲ ಠಾಣಾ ಮುತ್ತಿಗೆ

ಡಿವೈಎಫ್ ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಉಳ್ಳಾಲ ಠಾಣಾ ಮುತ್ತಿಗೆ

0

ಮಂಗಳೂರು(ದಕ್ಷಿಣ ಕನ್ನಡ): ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು ನ್ಯಾಯಯುತವಾಗಿ ಹೋರಾಟ ಮಾಡಿದ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ಪ್ರಕರಣ ದಾಖಲಿಸುವ ಮೂಲಕ ಸವಾಲು ಎಸೆಯಲು ಪೊಲೀಸರು ತಯಾರಿದ್ದರೆ ಅದನ್ನು ಸ್ವೀಕರಿಸಿ ಪ್ರತಿ ಸವಾಲು ಹಾಕಲು ನಾವು ತಯಾರಿ ಇದ್ದೇವೆ ಎಂದು ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಎಚ್ಚರಿಸಿದ್ದಾರೆ.

ಅವರು ಇಂದು ತೊಕ್ಕೊಟ್ಟು ಪರಿಸರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ ಡಿವೈಎಫ್ ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಉಳ್ಳಾಲ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ನಡೆದ ಉಳ್ಳಾಲ ಠಾಣಾ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಅವರು ಮಾತನಾಡುತ್ತಿದ್ದರು.

ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಕಾರಂತ್, ಶರಣ್ ಪಂಪ್ವೆಲ್ , ಪ್ರಭಾಕರ್ ಭಟ್ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿದರೂ, ದ್ವೇಷ ಭಾಷಣ ಮಾಡಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪೊಲೀಸರು ಬೀಡಿ ಕಾರ್ಮಿಕರ, ಬೀದಿಬದಿ ವ್ಯಾಪಾರಸ್ಥರ, ರೈತರ ಪರ ನ್ಯಾಯಕ್ಕಾಗಿ ಹೋರಾಟ ಮಾಡುವ ಡಿವೈಎಫ್ ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸುವ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕೂಡಾ ಮಾತನಾಡಿ ಕಿಡಿಕಾರಿದ್ದಾರೆ.