ಮನೆ ಕ್ರೀಡೆ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಜಯ

ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಜಯ

0

ಬೆಂಗಳೂರು: ಎರಡನೇ ಸೂಪರ್ ಓವರ್ ಹಣಾಹಣಿಯಲ್ಲಿ ರೋಚಕ ಜಯ ಸಾಧಿಸಿದ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. 213 ರನ್ ಗಳ ಬೃಹತ್ ಮೊತ್ತದ ಗುರಿ ನಡುವೆಯೂ ಅಮೋಘ ಪ್ರದರ್ಶನ ತೋರಿದ ಅಫ್ಘಾನಿಸ್ತಾನ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಮೊದಲ ಸೂಪರ್ ಓವರ್ ಫೈಟ್ ಕೂಡ ಟೈ ಆಗಿದ್ದು, ಎರಡನೇ ಸೂಪರ್ ಓವರ್ ಹೋರಾಟದಲ್ಲಿ ಭಾರತ 10 ರನ್ ಜಯಭೇರಿ ಬಾರಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಫ್ಘಾನಿಸ್ತಾನಕ್ಕೆ 213 ರನ್ ಟಾರ್ಗೆಟ್ ನೀಡಿತ್ತು.  ಉತ್ತರವಾಗಿ ಅಫ್ಘಾನಿಸ್ತಾನ ತಂಡ ಕೂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು, ಹೀಗಾಗಿ ಪಂದ್ಯ ಟೈ ಆಯಿತು.

ಬಳಿಕ ಸೂಪರ್ ಓವರ್ ನಲ್ಲೂ ಭಾರತಕ್ಕೆ ಪೈಪೋಟಿ ನೀಡಿದ ಅಫ್ಘಾನಿಸ್ತಾನ 16 ರನ್ ಬಾರಿಸಿತು. ಮುಕೇಶ್ ಬೌಲಿಂಗ್ ನಲ್ಲಿ ಮೊದಲ ಎಸೆತದಲ್ಲೇ ಗುಲ್ಬದ್ದಿನ್ 1 ರನ್ ಗೆ ರನೌಟ್ ಆದರು. ಬಳಿಕ ಗುರ್ಬಾಜ್ ಒಂದು ಬೌಂಡರಿಯೊಂದಿಗೆ 5 ರನ್ ಹಾಗೂ ನಬಿ ಸಿಕ್ಸರ್ ಸಹಿತ 10 ರನ್ ಸಿಡಿಸಿದರು. 17 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಎರಡು ಸಿಕ್ಸರ್ ಚಚ್ಚುವ ಮೂಲಕ ಗೆಲುವಿನ ಸಮೀಪಕ್ಕೆ ತಂದರು. 6ನೇ ಎಸೆತದಲ್ಲಿ 2 ರನ್ ಬೇಕಿದ್ದಾಗ, ಯುವ ಬ್ಯಾಟರ್ ಜೈಸ್ವಾಲ್ ಒಂದೇ ರನ್ ಗಳಿಸಿದ್ದರಿಂದ ಪಂದ್ಯ ಮತ್ತೆ ಟೈ ಆಯಿತು.

ಪಂದ್ಯ ಮತ್ತೆ ಟೈ  ಕಾರಣ ಎರಡನೇ ಸೂಪರ್ ಓವರ್ ನಡೆಸಲಾಹಿತ್ತು ಈ ಸಲ ಮೊದಲು ಬ್ಯಾಟ್ ಮಾಡಿದ ಭಾರತ 11 ರನ್ ಗಳಿಸಲಷ್ಟೇ ಗಳಿಸಿತ್ತು. ರಿಂಕು ಸಿಂಗ್ ಜೊತೆ ಬಂದ ರೋಹಿತ್, ಮೊದಲೆರಡು ಎಸೆತಗಳಲ್ಲೇ ತಲಾ ಸಿಕ್ಸರ್, ಬೌಂಡರಿ ಸಿಡಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡರು. ಬಳಿಕ 4ನೇ ಬಾಲ್ಗೆ ರಿಂಕು ಔಟಾದರು. ತದನಂತರ ಸಂಜು ಸ್ಯಾಮ್ಸನ್ ಬಾಲ್ ಅಡುವಲ್ಲಿ ವಿಫಲರಾಗಿದ್ದು, ರನ್ ಕದಿಯುವ ಭರದಲ್ಲಿ ರೋಹಿತ್ ಗುರ್ಜಾಜ್ ಡೈರೆಕ್ಟ್ ಹಿಟ್ ನಿಂದ ರನೌಟ್ ಬಲೆಗೆ ಬಿದ್ದರು. ಇದರಿಂದ ಎರಡೂ ವಿಕೆಟ್ ಕಳೆದುಕೊಂಡ ಭಾರತ ಅಫ್ಘಾನಿಸ್ತಾನ ಕ್ಕೆ 12 ರನ್ ಗುರಿ ನೀಡಿತು.

2 ರನ್ ಗುರಿಬೆನ್ನತ್ತಿದ್ದ ಅಫ್ಘಾನಿಸ್ತಾನ ಕ್ಕೆ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಬೌಲಿಂಗ್ ಳಿದರು. ಮೊದಲ ಎಸೆತದಲ್ಲೇ ಮೊಹಮದ್ ನಬಿ ರಿಂಕುಗೆ ಕ್ಯಾಚ್ ನೀಡಿ  ಔಟಾದರು. ಬಳಿಕ  ಕ್ರೀಸ್ ಗೆ ಬಂದ ಜನತ್ ಒಂದು ರನ್ ತೆಗೆದುಕೊಂಡರು. ಆದರೆ ಮೂರನೇ ಎಸೆತದಲ್ಲೇ ಗುರ್ಬಾಜ್ ಕೂಡ ರಿಂಕುಗೆ ಕ್ಯಾಚ್ ನೀಡಿದ್ದರಿಂದ ಅಫ್ಘಾನಿಸ್ತಾನ ಸೋಲಿನೊಂದಿಗೆ ನಿರಾಸೆ ಅನುಭವಿಸಿತು. ಅಂತಿಮವಾಗಿ 10 ರನ್ ಗಳಿಂದ ಗೆದ್ದ ಟೀಂ ಇಂಡಿಯಾ 3-0 ಅಂತರದೊಂದಿಗೆ ಸರಣಿ ಎತ್ತಿಹಿಡಿಯಿತು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ತಿಲಕ್ ವರ್ಮಾ , ರಿಂಕು ಸಿಂಗ್ , ಅಕ್ಷರ್ ಪಟೇಲ್ , ಅರ್ಷದೀಪ್ ಸಿಂಗ್ , ಅವೇಶ್ ಖಾನ್ , ಕುಲ್ದೀಪ್ ಯಾದವ್ , ಮುಕೇಶ್ ಕುಮಾರ್ , ಜಿತೇಶ್ ಶರ್ಮಾ , ಶಿವಂ ದುಬೆ, ವಾಷಿಂಗ್ಟನ್ ಸುಂದರ್, ವಿರಾಟ್ ಕೊಹ್ಲಿ.

ಅಫ್ಘಾನಿಸ್ತಾನ್ ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ (ನಾಯಕ) , ಹಝರತುಲ್ಲಾ ಝಝೈ , ನಜಿಬುಲ್ಲಾ ಝದ್ರಾನ್ , ಮೊಹಮ್ಮದ್ ನಬಿ , ಅಜ್ಮತುಲ್ಲಾ ಒಮರ್ಝೈ , ಮುಜೀಬ್ ಉರ್ ರಹಮಾನ್ , ಶರಫುದ್ದೀನ್ ಅಶ್ರಫ್ , ಖೈಸ್ ಅಹ್ಮದ್ , ನವೀನ್ -ಉಲ್-ಹಕ್, ಫಝಲ್ ಹಕ್ ಫಾರೂಖಿ, ನೂರ್ ಅಹ್ಮದ್, ಮೊಹಮ್ಮದ್ ಸಲೀಂ ಶಫಿ, ಕರೀಂ ಜನತ್ , ಇಕ್ರಮ್ ಅಲಿಖಿಲ್ , ಫರೀದ್ ಅಹ್ಮದ್ ಮಲಿಕ್ , ರಹಮತ್ ಶಾ , ಗುಲ್ಬದಿನ್ ನೈಬ್.