ಮಂಡ್ಯ: ತಾಲ್ಲೂಕಿನ ಕನ್ನಲಿ ಗ್ರಾಮದಲ್ಲಿ ರೈತರಿಗೆ ಜೀವ ಭಯ ಹುಟ್ಟಿಸಿದ್ದ ಚಿರತೆ ಸೆರೆಯಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದ ಶ್ರೀನಿವಾಸ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ವೇಳೆ 3 ಚಿರತೆ ಮರಿಗಳು ಸಿಕ್ಕಿದ್ದವು.
ಆದರೆ 2 ಮರಿ ಹಾಗೂ ಚಿರತೆ ಸಿಗದೆ ಆತಂಕ ಉಂಟಾಗಿತ್ತು. ಚಿರತೆ ಮರಿಗಳು ಪ್ರತ್ಯಕ್ಷವಾದ ಹಿನ್ನಲೆ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನು ಇಟ್ಟಿದ್ದರು.
ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸಿಕ್ಕ ಮರಿ ಜೊತೆಗೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಸೆರೆ ಸಿಕ್ಕ ಚಿರತೆ ನೋಡಲು ಮುಗಿಬಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದರು.