ಮನೆ ಸ್ಥಳೀಯ ‘ಸವಾಲ್ ಟಿವಿ ಮತ್ತು ಪತ್ರಿಕೆ’ ವತಿಯಿಂದ ‘ನಾಳು ತೋರುಗೆ’ ದಿನದರ್ಶಿಕೆ ಬಿಡುಗಡೆ

‘ಸವಾಲ್ ಟಿವಿ ಮತ್ತು ಪತ್ರಿಕೆ’ ವತಿಯಿಂದ ‘ನಾಳು ತೋರುಗೆ’ ದಿನದರ್ಶಿಕೆ ಬಿಡುಗಡೆ

0

ಮೈಸೂರು: ‘ಸವಾಲ್ ಟಿವಿ ಮತ್ತು ಪತ್ರಿಕೆ’ ವತಿಯಿಂದ 2024ರ ‘ನಾಳು ತೋರುಗೆ’ ದಿನದರ್ಶಿಕೆ ಬಿಡುಗಡೆ ಹಾಗೂ ಸಾಮಾಜಿಕ ಹೋರಾಟಗಾರರಿಗೆ ಸನ್ಮಾನ ಸಮಾರಂಭವನ್ನು ಇಂದು (ಜನವರಿ 19) ಸಂಜೆ  5 ಗಂಟೆಗೆ ಜೆಎಲ್‍ ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಎದುರು ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ಚಂದ್ರವನ ಆಶ್ರಮ ಶ್ರೀ ಕ್ಷೇತ್ರ ಬೇಬಿ ಮಠದ ಶ್ರೀ ಮ.ನಿ.ಪ್ರ.ಸ್ವ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳು ವಹಿಸಲಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಜಿ.ಆರ್ ಅರಸ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೆ.ಗೋವಿಂದರಾಜು ವಹಿಸಲಿದ್ದು, ಜಂಟಿ ನಿರ್ದೇಶಕರವರ ಕಚೇರಿ ತೋಟಗಾರಿಕೆ ಉಪ ನಿರ್ದೇಶಕರಾದ ಕೆ.ರುದ್ರೇಶ್  ಉದ್ಘಾಟಿಸಲಿದ್ದಾರೆ. ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಕುಮಾರಿ ನಾಜೀಯ ಸುಲ್ತಾನ ‘ನಾಳು ತೋರುಗೆ’ ಲೋಕಾರ್ಪಣೆ ಮಾಡಲಿದ್ದಾರೆ. ಸಮಾಜ ಸೇವಕ ಸಿ.ವಿ.ಪಾರ್ಥಸಾರಥಿ ಪುಸ್ತಕ ತಾಂಬೂಲ ವಿತರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದೇವರಾಜ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ಎಂ.ಜಯಕೀರ್ತಿ, ಸಮಾಜ ಸೇವಕ ವರುಣ್ ಗೌಡ, ಸಾಕ್ರೇಟಿಸ್ ಪಾಕ್ಷಿಕ ಪತ್ರಿಕೆ ಸಂಪಾದಕರಾದ ಮೈಸೂರು ಎನ್ ಪರಶುರಾಮ್ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಆಗಮಿಸುವ ಮಾತೆ ಅನ್ನಪೂರ್ಣೇಶ್ವರಿ ಮತ್ತು ಸಾಯಿಬಾಬಾರ ಅನುಯಾಯಿಗಳಾದ ಸೂರ್ಯ ನಾರಾಯಣ್, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಮತ್ತು ಸಮಾಜ ಸೇವಕರಾದ ಜಯ ಪ್ರಕಾಶ್(ಜೆ.ಪಿ), ದಲಿತ ಸಂರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯ ಗೌರವಾಧ್ಯಕ್ಷರಾದ ಡಾ.ಜನ್ಮಭೂಮಿ ನಾಗರಜ್, ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಇಂಗಲಕುಪ್ಪೆ ಕೃಷ್ಣೇಗೌಡ, ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಸೋಮೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಮಹಿಳಾ ರಕ್ಷಣಾ ಪಡೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಲತಾಗೌಡ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್, ಕಸ್ತೂರಿ ಕನ್ನಡ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ರಾಜು, ನಗರ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹರೀಶ್ ರೆಡ್ಡಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.

ಕಾರ್ಯಕ್ರಮಕ್ಕೆ ಸಹೃದಯ ಓದುಗರು, ಸಾರ್ವಜನಿಕರು ಆಗಮಿಸಬೇಕಾಗಿ ಸವಾಲ್ ಕುಟುಂಬ ಸದಸ್ಯರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.0821-350869/0, 97421 2250 ನ್ನು ಸಂಪರ್ಕಿಸಲು ಕೋರಲಾಗಿದೆ.