ಮನೆ ಕೃಷಿ ಮುಂಗಾರು ಬೆಳೆ ಹಾನಿ: ಜಿಲ್ಲೆಯ 72,277 ರೈತರಿಗೆ ಪರಿಹಾರ ವಿತರಣೆ

ಮುಂಗಾರು ಬೆಳೆ ಹಾನಿ: ಜಿಲ್ಲೆಯ 72,277 ರೈತರಿಗೆ ಪರಿಹಾರ ವಿತರಣೆ

0

ಮೈಸೂರು: ಮುಂಗಾರು ಹಂಗಾಮಿನಲ್ಲಿ ಮೈಸೂರು ಜಿಲ್ಲೆಯ ಎಲ್ಲಾ 9 ತಾಲೂಕುಗಳನ್ನು ಬರಪಿಡೀತ ತಾಲ್ಲೂಕುಗಳೆಂದು ಘೋಷಣೆ ಮಾಡಿದೆ. ಮುಂಗಾರು ಋತುವಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ FRUITS ID  ಹೊಂದಿರುವ ಪಹಣಿ ಜೋಡಣೆಯಾಗಿರುವ ರೈತರುಗಳಿಗೆ DBT ಮೂಲಕ SDRF/NDRF ಮಾರ್ಗಸೂಚಿ ಪ್ರಕಾರ ಮೊದಲನೇ ಕಂತಾಗಿ ಗರಿಷ್ಠ ರೂ 2,000 ರವರೆಗೆ ಬೆಳೆ ಹಾನಿ ಪರಿಹಾರವನ್ನು ವಿತರಿಸಲಾಗುತ್ತಿದೆ. ಅದರಂತೆ ಮೊದಲನೇ ಮತ್ತು ಎರಡನೇ ಹಂತದಲ್ಲಿ ಜಿಲ್ಲೆಯ ಅರ್ಹ 72,277 ರೈತರುಗಳಿಗೆ ರೂ 12.51 ಕೋಟಿ ಪರಿಹಾರವನ್ನು (Input Subsidy) ವಿತರಿಸಲಾಗುತ್ತಿದೆ.

ಬೆಳೆ ಹಾನಿ ಪರಿಹಾರದ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲ್ಲೂಕು ಹಂತದಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದೆ.

ಮೈಸೂರು ತಾಲ್ಲೂಕು ಕಛೇರಿಯ ದೂ.ಸಂ: 0821-2414812, ನಂಜನಗೂಡು ತಾಲ್ಲೂಕು ಕಛೇರಿಯ ದೂ.ಸಂ: 08221-223108, ತಿ.ನರಸೀಪುರ ತಾಲ್ಲೂಕು ಕಛೇರಿಯ ದೂ.ಸಂ.: 9148555170, ಹೆಚ್.ಡಿ.ಕೋಟೆ ತಾಲ್ಲೂಕು ಕಛೇರಿಯ ದೂ.ಸಂ: 08228-255325, ಹುಣಸೂರು ತಾಲ್ಲೂಕು ಕಛೇರಿಯ ದೂ.ಸಂ: 08222-252959, ಪಿರಿಯಾಪಟ್ಟಣ ತಾಲ್ಲೂಕು ಕಛೇರಿಯ ದೂ.ಸಂ: 08223-274175, ಸರಗೂರು ತಾಲ್ಲೂಕು ಕಛೇರಿಯ ದೂ.ಸಂ: 08228-296100, ಕೆ.ಆರ್.ನಗರ ತಾಲ್ಲೂಕು ಕಛೇರಿಯ ದೂ.ಸಂ: 08223-262371, ಹಾಗೂ ಸಾಲಿಗ್ರಾಮ ಕಛೇರಿಯ ದೂ.ಸಂ: 08223-262371 ಅನ್ನು ಸಂಪರ್ಕಿಸಬಹುದು.

ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು FRUITS ID ಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆವಿಗೂ FRUITS ID ಸೃಜಿಸಿಕೊಂಡಿಲ್ಲದ ರೈತರುಗಳು ತಮ್ಮ ಆಧಾರ್ ಹಾಗೂ ಪಹಣಿ ಮಾಹಿತಿಯನ್ನು ನೀಡಿ FRUITS ID ಸೃಜಿಸಿಕೊಳ್ಳುವುದು ಇಲ್ಲವಾದಲ್ಲಿ ಅಂತಹ ರೈತರುಗಳು ಪರಿಹಾರಕ್ಕೆ ಅರ್ಹರಾಗುವುದಿಲ್ಲವೆಂದು ಜಿಲ್ಲಾಧಿಕಾರಿಯವರಾದ ಡಾ. ಕೆ.ವಿ. ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.