ಮನೆ ರಾಜಕೀಯ ಲೋಕಸಭಾ ಚುನಾವಣೆ: ನನ್ನ ನಿರ್ಧಾರವೇ ಅಂತಿಮ ಎಂದ ಸುಮಲತಾ ಅಂಬರೀಶ್

ಲೋಕಸಭಾ ಚುನಾವಣೆ: ನನ್ನ ನಿರ್ಧಾರವೇ ಅಂತಿಮ ಎಂದ ಸುಮಲತಾ ಅಂಬರೀಶ್

0

ಮಂಡ್ಯ: ಲೋಕಸಭಾ ಚುನಾವಣೆ ಅನ್ನೋದು ನಮ್ಮ ದೇಶದಲ್ಲಿ 543 ಕಡೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ 28 ಕಡೆ ನಡೆಯುತ್ತಿದೆ. ಎಲ್ಲೂ ಇಲ್ಲದ ಆಸಕ್ತಿ ಮಂಡ್ಯ ಕಡೆ ಇದೆ. ಅವರವರ ಅಭಿಪ್ರಾಯ, ಅನಿಸಿಕೆ ಯಾರು ಬೇಕಾದ್ರು ಹೇಳಬಹುದು. ನನ್ನ ನಿರ್ಧಾರವೇ ಕಡೆಗೆ ಅಂತಿಮ. ನಾನು ಹೇಳುವವರಗೆ ಕಾಯಬೇಕು ಎಂದು  ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ನಾಗಮಂಗಲದ ಶೀರಾಪಟ್ಟಣದಲ್ಲಿ  ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಬಗ್ಗೆ ಒಂದಷ್ಟು ರೂಮರ್ಸ್, ಊಹಾಪೋಹಗಳು ನಡೆಯುತ್ತಿದೆ. ಇನ್ನು ಒಂದಷ್ಟು ದಿನ ಅದೇ ನಡೆಯಲಿ. ನನ್ನ ನಿರ್ಧಾರ ಇನ್ನೂ ಏನು ಇಲ್ಲ. ಕೊನೆಗೆ ನನ್ನ ನಿರ್ಧಾರವೇ ಅಂತಿಮ ಎಂದರು.

ಮೈತ್ರಿ ಅಭ್ಯರ್ಥಿ ಬಗ್ಗೆ ಪಕ್ಷಗಳು ಕುಳಿತು ಚರ್ಚೆ ಮಾಡಬೇಕು. ಇನ್ನು ಆ ಹಂತಕ್ಕೆ ಬಂದಿಲ್ಲ  ಅಂತಾ ಇಬ್ಬರು ಪಕ್ಷದ ನಾಯಕರು ಆ ಮಾತನ್ನ ಹೇಳಿದ್ದಾರೆ. ಇದುವರೆಗೂ ಸೀಟ್ ಹಂಚಿಕೆ ವಿಷಯ ಯಾವುದೇ ಹಂತಕ್ಕೂ ತಲುಪಿಲ್ಲ. ಸೀಟ್ ಹಂಚಿಕೆ ವಿಚಾರ ಚರ್ಚೆಯಾಗಲಿ ಆಮೇಲೆ ಮಾತನಾಡ್ತೇನೆ. ಅಧಿಕೃತವಾಗಿ ಮೈತ್ರಿ ಅಭ್ಯರ್ಥಿ ಯಾರು ಇಲ್ಲ ಎಂದು ಹೇಳಿದರು.

ನನ್ನ ಕಾಂಗ್ರೆಸ್, ಇನ್ನೊಂದು ದಿನ ಪಕ್ಷೇತರ ಅಂತೀರಾ. ನಾನು ಇದರ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ‌. ಎಲ್ಲದಕ್ಕೂ ಒಂದ್ ಟೈಮ್ ಬರುತ್ತೆ ಆ ಟೈಮ್ ಬಂದಾಗ ಸರಿಯಾದ ನಿರ್ಧಾರ ಏನು ಅನೋದು ಜನಕ್ಕೆ ಗೊತ್ತಾಗುತ್ತೆ‌. ಈ ಬಗ್ಗೆ ಜನರೇ ನನಗೆ ಹೇಳ್ತಾರೆ. ನನ್ನ ಮುಖದಲ್ಲಿ ಟೆನ್ಸನ್ ಕಾಣ್ತಿದ್ಯಾ? ದುಡುಕಿ ಏನೋ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಇಲ್ಲ ಎಂದು ಸ್ಪಷ್ಟಪಡಿಸಿದರು.