ಮನೆ ರಾಷ್ಟ್ರೀಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ಚಿರತೆ ಜ್ವಾಲಾ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ಚಿರತೆ ಜ್ವಾಲಾ

0

ಮಧ್ಯಪ್ರದೇಶ: ದೇಶದ ಚೀತಾಗಳ ಆವಾಸಸ್ಥಾನವಾಗಿರುವ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾಗಿದ್ದ ಹೆಣ್ಣು ಚಿರತೆ ಜ್ವಾಲಾ 3 ಮರಿಗಳಿಗೆ ಜನ್ಮ ನೀಡಿದೆ.

ಮರಿಗಳ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ಆರೈಕೆ ಮಾಡಲಾಗುತ್ತಿದೆ ಎಂದು ಕುನೋ ವೈದ್ಯಕೀಯ ತಂಡ ತಿಳಿಸಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಚಿರತೆ ಮರಿಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಹೆಣ್ಣು ಚಿರತೆ ಆಶಾ ಕೂಡ 3 ಮರಿಗಳಿಗೆ ಜನ್ಮ ನೀಡಿತ್ತು ಅದಾದ ಬಳಿಕ ಇದೀಗ ಚೀತಾ ಜ್ವಾಲಾ ಮೂರೂ ಮರಿಗಳಿಗೆ ಜನ್ಮ ನೀಡಿದೆ.

ಮಾಹಿತಿಯ ಪ್ರಕಾರ, ಮಾರ್ಚ್ 2023 ರಲ್ಲಿ, ಹೆಣ್ಣು ಚಿರತೆ ಜ್ವಾಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು, ಆದರೆ ನಾಲ್ಕರಲ್ಲಿ ಒಂದು ಮರಿ ಮಾತ್ರ ಬದುಕುಳಿದಿದೆ. ಆಗ ಕುನೋ ಆಡಳಿತ ಮಂಡಳಿಯು ಮರಿಗಳ ಸಾವಿಗೆ ಬಿಸಿಲಿನ ತಾಪವೇ ಕಾರಣ ಎಂದು ಹೇಳಿತ್ತು.

ಪರಿಸರ ಸಚಿವ ಭೂಪೇಂದ್ರ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾ ಎಂಬ ನಮೀಬಿಯಾ ಚಿರತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಎಲ್ಲಾ ವನ್ಯಜೀವಿ ಪ್ರೇಮಿಗಳಿಗೆ ಶುಭಾಶಯಗಳು. ಭಾರತದಲ್ಲಿ ವನ್ಯಜೀವಿಗಳು ಇದೇ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು. ಪ್ರಾಜೆಕ್ಟ್ ಚೀತಾ ಯಶಸ್ವಿಯಾಗಲಿ.” ಎಂದು ಬರೆದುಕೊಂಡಿದ್ದಾರೆ.